ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾಗಿರುವ ಹೈದರಾಬಾದ್-ಕರ್ನಾಟಕದ ಪ್ರಮುಖ ನಾಯಕ ವೈಜನಾಥ್ ಪಾಟೀಲ್ ಬಿಜೆಪಿಗೆ ಸೇರುವುದು ಬಹುತೇಕ ಖಚಿತವಾದಂತಾಗಿದೆ.ನಗರದ ಖಾಸಗಿ ಹೊಟೇಲ್‌ನಲ್ಲಿ ಇಂದು (ಸೋಮವಾರ) ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಅವರು ಕಾಂಗ್ರೆಸ್‌ನ ಮುಖಂಡರಾಗಿರುವ ಎಂ.ರಘುಪತಿಯವರನ್ನು ಪಕ್ಷಕ್ಕೆ ಕರೆಸಿಕೊಂಡ ಬಳಿಕ ಮತನಾಡಿದ ನಾಯ್ಡು, ವೈಜನಾಥ್ ಸೇರ್ಪಡೆ ವಿಷಯ ಮಾತುಕತೆಯ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.ವೈಜನಾಥ್ ಪಾಟೀಲ್ ಈ ಹಿಂದೆ ಜೆಡಿಎಸ್‌ನಲ್ಲಿದ್ದರು. ಆದರೆ ಆ ಬಳಿಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ