ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಚುನಾವಣೆ-08
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರುನಾಡಿನ ರಂಗದಲ್ಲಿ ಹೀಗೊಂದು 'ಪ್ರಹಸನ'
ಅಂಕ-2

(ಮರೆಯಲ್ಲೇ ನಿಂತು ಕದ್ದು ಆಲಿಸಿದ್ದ ಮುದ್ದೂರು ಕೃಷ್ಣ ಮಹಾಶಯರು ರೋಷದಿಂದಲೇ ರಂಗಪ್ರವೇಶ ಮಾಡುವರು)

ನಮ್ಮ ವಂಶದ ವಿರುದ್ಧ ಬಾಯಿಗೆ ಬಂದಂತೆ ಒದರುತ್ತಿರುವ ಆ ವಚನಭ್ರಷ್ಟರಿಗೆ ನಮ್ಮ ಪ್ರಜೆಗಳು ತಕ್ಕ ಪಾಠ ಕಲಿಸಲಿದ್ದಾರೆ. ಕಪಟ ನಾಟಕ ಸೂತ್ರಧಾರಿಯಾಗಿರುವವರು ಯಾರು ಎಂಬುದು ನಮ್ಮ ಪ್ರಜಾವರ್ಗಕ್ಕೆ ತಿಳಿದಿದೆ. ನಮ್ಮ ಸಾಮ್ರಾಜ್ಯದ ವಿರುದ್ಧ ಯುದ್ಧ ಘೋಷಿಸುವಷ್ಟು ಧೈರ್ಯ ಇದೆಯೇ ಎಂದು ಅಬ್ಬರಿಸಿದಾಗ, ಕೋಲಾಹಲ ಕೇಳಿ ಬರುತ್ತದೆ...

ಏನಿದು...ಎಂದು ಸಿಟ್ಟಿನಿಂದ ಕೃಷ್ಣ ಅಬ್ಬರಿಸಿದಾಗ, ಓಡೋಡಿ ಬಂದ ಸೇವಕ 'ಮಹಾಪ್ರಭು ಕ್ಷಮಿಸಬೇಕು, ಎಲ್ಲೆಡೆ ಅಸಮಾಧಾನ ಭುಗಿಲೆದ್ದಿದೆ, ಯುದ್ಧಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಶಸ್ತ್ರ ಸನ್ಯಾಸ ಮಾಡುವುದಾಗಿ ಘೋಷಿರುವುದಾಗಿ ಅಲ್ಲದೇ ಒಬ್ಬೊಬ್ಬರಾಗಿಯೇ ಶತ್ರು (ಕಮಲಮುಖಿ ಮತ್ತು ದಳ) ಪಾಳಯದಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ' ಎಂದು ತಿಳಿಸುತ್ತಾನೆ.

(ಈ ಮಾತು ಕೇಳಿ ತಲೆ ಮೇಲೆ ಕೈ ಇಟ್ಟ ಕೃಷ್ಣ ಸ್ವಲ್ಪ ಹೊತ್ತು ಚಿಂತೆಯಲ್ಲಿ ಮುಳುಗುತ್ತಾರೆ)

ಯಾರಲ್ಲಿ...? ಎಂದು ಕೈ ಚಪ್ಪಾಳೆ ತಟ್ಟಿದಾಗ ಹತ್ತಾರು ಮಂದಿ ಸುತ್ತುವರಿಯುತ್ತಾರೆ, ಅಪ್ಪಣೆ ಪ್ರಭು ಎಂದು ನಡುಬಾಗಿಸಿ ಅಪ್ಪಣೆಗಾಗಿ ಕಾಯ್ದು ನಿಲ್ಲುತ್ತಾರೆ. ಕೂಡಲೇ ಡೆಲ್ಲಿಯಿಂದ ಆಗಾಗ್ಗೆ ಇಲ್ಲಿಗೆ ಬರುತ್ತಿರುವ ತ್ರಿಲೋಕ ಸಂಚಾರಿ ಪೃಥ್ವೀರಾಜರಿಗೆ ಬರುವಂತೆ ಸಂದೇಶ ರವಾನಿಸಿ ಎನ್ನುತ್ತಿದ್ದಂತೆಯೇ...

ಸಂಚಾರಿ ಚೌಹಾಣರು ಅತ್ತ ಕಡೆಯೇ ಆಗಮಿಸುತ್ತಿರುವುದನ್ನು ಕಂಡು ಹರ್ಷಚಿತ್ತರಾದ ಕೃಷ್ಣ, ನಿಮ್ಮ ಆಗಮನದ ನಿರೀಕ್ಷೆಯಲ್ಲೇ ನಾವಿರುವುದಾಗಿ ಅರಿಕೆ ಮಾಡಿಕೊಂಡು, ಕುಶಲೋಪರಿ ವಿಚಾರಿಸುತ್ತ, ವಿಷಯವನ್ನು ಅರಹುತ್ತಾರೆ.

ಗಹನವಾದ ಚರ್ಚೆಯ ಬಳಿಕ, ಎಲ್ಲರೂ ಸೇನಾಧಿಪತಿಗಳ (ಬೇರೆ ಪಾಳಯದತ್ತ ಮುಖ ಮಾಡಿದ ರೈಲು ಶರೀಫ್, ಮಂಡ್ಯದ ಗಂಡು ಅಂಬಿ ಹಾಗೂ ಕಳ್ಳೇಕಾಯಿ ಪ್ರವೀಣ ಜಗ್ಗೇಶ್) ಕುಟೀರದತ್ತ ತೆರಳುತ್ತಾರೆ.

ಕೃಷ್ಣ, ನಾರದರ ಆಗಮನ ಕಂಡು ಆಶ್ಚರ್ಯ ಚಕಿತರಾದ ಸೇನಾಧಿಪತಿ ಶರೀಫ ಮಹಾಶಯರು, ತಮಗೆ ಸ್ವಾಗತ, ಸ್ವಾಗತ ಎಂದು ಕೈಮುಗಿಯುವರು. ಅಷ್ಟರಲ್ಲಿ ಮಾತಿಗಾರಂಭಿಸಿದ ನಾರದರು ತಮ್ಮ ವಿಷಯ ಕೇಳಿ ಆಘಾತವಾಗಿದೆ, ನೀವು ಇಂತಹ ಸಂದರ್ಭದಲ್ಲಿ ಹಿರಿಯರಾಗಿ ನಮ್ಮನ್ನು ಮುನ್ನಡೆಸಬೇಕಾದವರು, ಹೀಗೆ ಶಸ್ತ್ರ ಸನ್ಯಾಸ ಮಾಡುವೆ ಎಂದು ಹಠ ತೊಟ್ಟರೆ ಹೇಗೆ ಎಂದು ಪ್ರಶ್ನಿಸುತ್ತಾರೆ.

ಆಗ ಧ್ವನಿ ಏರಿಸಿದ ಸೇನಾಪತಿ, ಇಲ್ಲ ನನ್ನ ಮೊಮ್ಮಗನನ್ನು ಯುದ್ಧರಂಗಕ್ಕೆ ಇಳಿಸಲು ಬಿ.ಫಾರ್ಮ್ ನೀಡುವವರೆಗೆ ನಾನು ಕೆಳಗಿಟ್ಟ ಶಸ್ತ್ರವನ್ನು ಮೇಲೆತ್ತಿಕೊಳ್ಳಲಾರೆ ಎಂದು ನುಡಿಯುವರು.

ಅದಾಗಲೇ ಅಪಾಯದ ಮುನ್ಸೂಚನೆ ಅರಿತ ಕೃಷ್ಣ ಪರಮಾತ್ಮ, ಚೌಹಾಣ್, ಘಟಾನುಘಟಿಗಳೆಲ್ಲ ಒಟ್ಟಾಗಿ, ಸೇನಾಧಿಪತಿಗಳೇ, ಇದು ಗಂಭೀರವಾದ ವಿಷಯ. ನಮ್ಮಲ್ಲಿ ಇದಕ್ಕೆ ಪರಿಹಾರ ಕಷ್ಟ ಸಾಧ್ಯ, ನಾವೆಲ್ಲ ಒಟ್ಟಾಗಿ ಕರುಣಾಮಯಿ, ತ್ಯಾಗಮಯಿ, ಅಭಯ'ಹಸ್ತ'ಳೂ ಆದ ಸೇನಾಧ್ಯಕ್ಷೆಯಾದ ದೇವಿಯ ಮೊರೆ ಹೋಗೋಣ ಎಂಬ ಮಾರ್ಗ ಸೂಚಿಸಿ, ಎಲ್ಲರೂ ಜಯಕಾರ ಘೋಷದೊಂದಿಗೆ ಪುಷ್ಪಕ ವಿಮಾನ ದೇವಲೋಕಕ್ಕೆ ಪ್ರಯಾಣ ಬೆಳೆಸುವರು.

ಭಯಭೀತರಾಗಿಯೇ ಆಸ್ಥಾನವನ್ನೂ ಪ್ರವೇಶಿಸುವರು, ಎಲ್ಲರೂ ಪರಿಹರಿಸು ತಾಯೇ ನಮ್ಮ ಕಷ್ಟವನ್ನು ಎಂದು ಕೈಮುಗಿದು ಬೇಡಿಕೊಳ್ಳುವರು. ಎಲ್ಲ ಪ್ರವರಗಳನ್ನು ಆಲಿಸಿದ ದೇವಿ, ಭರವಸೆ ಈಡೇರಿಸುವ ಅಭಯ ನೀಡಿದ ಮೇಲೆ ಎಲ್ಲರೂ ಹರ್ಷಚಿತ್ತರಾಗಿ ಜಯಘೋಷದೊಂದಿಗೆ ವಾಪಸಾಗುವರು.
<< 1 | 2 | 3  >>  
ಮತ್ತಷ್ಟು
ಹಂತ-I: ಓಟಿನ ಬೇಟೆಯಲ್ಲಿ ಕ್ರಿಮಿನಲ್ ಹಿನ್ನೆಲೆಯ 47 ಅಭ್ಯರ್ಥಿಗಳು
ದಾರಿ ತಪ್ಪಿಸುವ ಜೆಡಿಎಸ್/ಕಾಂಗ್ರೆಸ್: ಬಿಎಸ್‌ವೈ
ಚುನಾವಣೆಗೆ ಪೊಲೀಸರ ಕಟ್ಟುನಿಟ್ಟಿನ ಕ್ರಮ
ಕಾಂಗ್ರೆಸ್‌ನಿಂದ ಮಾತ್ರ ಸ್ಥಿರ ಸರಕಾರ ಸಾಧ್ಯ: ರೆಡ್ಡಿ
ರಾಷ್ಟ್ರೀಯ ಹಿಂದೂಸ್ತಾನ್ ಸೇನಾ ಪ್ರಣಾಳಿಕೆ ಬಿಡುಗಡೆ
ಬಿಜೆಪಿಯಿಂದ ಮೂವರ ಅಮಾನತು