ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಚುನಾವಣೆ-08
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದುರಹಂಕಾರಿ ಸಿದ್ಧರಾಮಯ್ಯ: ದೇವೆಗೌಡ
ಸಿದ್ಧರಾಮಯ್ಯ ವಿಶ್ವಾಸದ್ರೋಹಿ, ದುರಹಂಕಾರಿ. ಅವರಿಗೆ ತಕ್ಕ ಪಾಠ ಕಲಿಸಿ. ಹೀಗೆಂದು ವರುಣಾದ ಜನತೆಯಲ್ಲಿ ಹೇಳಿದವರು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ. ವರುಣಾ ವಿಧಾನಸಭಾ ಕ್ಷೇತ್ರದಲದ್ಲಿ ಬಹಿರಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ತಮ್ಮ ಭಾಷಣದುದ್ದಕ್ಕೂ ಸಿದ್ಧರಾಮಯ್ಯನವರನ್ನು ಟೀಕಿಸುತ್ತಲೇ ಹೋದರು.

ಸಿದ್ದರಾಮಯ್ಯ ಹಾಸನದಲ್ಲಿ ಅಪ್ಪ-ಮಕ್ಕಳನ್ನು ರಾಜಕೀಯದಿಂದ ಓಡಿಸಬೇಕು. ಅಹಿಂದ ಹೆಸರಿನಲ್ಲಿ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ದುರಹಂಕಾರಿ ಸಿದ್ಧರಾಮಯ್ಯ. ಇಂತಹ ಅಹಂಕಾರಿಗೆ ಇಲ್ಲಿನ ಜನತೆಯೇ ಸರಿಯಾದ ಪಾಠ ಕಲಿಸಬೇಕು ಎಂದು ದೇವೇಗೌಡರು ಮತದಾರರನ್ನು ಕೇಳಿಕೊಂಡರು.

ಈ ಹಿಂದೆ ಸಿದ್ಧರಾಮಯ್ಯ ನನ್ನ ವಿರುದ್ಧ ಮಾಡಿದ ಎಲ್ಲ ಅಪಮಾನಗಳನ್ನು ಸಹಿಸಿದ್ದೇನೆ. ಆದರೆ ನನ್ನನ್ನು ಓಡಿಸುವಂತೆ ಸಿದ್ಧರಾಮಯ್ಯ ಹೇಳಿದ್ದಾರೆ. ಇದು ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಸಿದ್ಧರಾಮಯ್ಯ ನಯ-ವಿನಯವಿಲ್ಲದ ವ್ಯಕ್ತಿ ಎಂದು ದೂರಿದರು.

ಈ ಬಾರಿ ಜೆಡಿಎಸ್‌ನ್ನು ಬಹುಮತದೊಂದಿಗೆ ಗೆಲ್ಲಿಸಿದ್ದಲ್ಲಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ ಎಂದು ಹೇಳಿದರು.
ಮತ್ತಷ್ಟು
ಬಿಜೆಪಿ/ಜೆಡಿಎಸ್ ಲಾಲಸೆಗೆ ರಾಜ್ಯ ಬಲಿ: ದೇಶ್‌ಮುಖ್
ಸಾಯಂಕಾಲ ಚುನಾವಣಾ ಪ್ರಚಾರದ ಅಂತ್ಯ
ಬಿಜೆಪಿ-ಜೆಡಿಎಸ್ ಕಿತ್ತಾಟಕ್ಕೆ ರಾಜ್ಯ ಬಲಿ: ನಬಿ
ಪುತ್ತೂರು ಬಂಡಾಯ: ಪಕ್ಷಕ್ಕೆ ಕಪ್ಪು ಚುಕ್ಕೆ: ಡಿ.ವಿ
ಮುಸ್ಲಿಂ ಅಭ್ಯರ್ಥಿಗೆ ಸಚಿವ ಸಂಪುಟ ಸ್ಥಾನ: ಬಿಎಸ್‌ವೈ
ಬಿಜೆಪಿ ವಿರುದ್ಧ ಕ್ರಮಕ್ಕೆ ವಯಲಾರ್ ಒತ್ತಾಯ