ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಚುನಾವಣೆ-08
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಕ್ಷಿಣದಲ್ಲಿ ಬಿಜೆಪಿಗೆ ಅಧಿಕಾರ: ಸ್ವರಾಜ್
ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನಿಚ್ಚಳ ಬಹುಮತ ಪಡೆಯುವ ಮೂಲಕ ಬಿಜೆಪಿ ದಕ್ಷಿಣ ಭಾರತವನ್ನು ಅಧಿಕಾರಯುತವಾಗಿ ಪ್ರವೇಶಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ನಾಯಕಿ ಸುಷ್ಮಸ್ವರಾಜ್ ತಿಳಿಸಿದ್ದಾರೆ.

ನಗರದಲ್ಲಿ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಕುರಿತು ರೋಸಿ ಹೋಗಿದ್ದಾರೆ. ಅಲ್ಲದೆ, ಕಳೆದ ಇಪ್ಪತ್ತು ತಿಂಗಳ ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ನೀಡಿರುವ ಅಭಿವೃದ್ದಿಯ ಬಜೆಟ್‌ನ್ನು ಜನತೆ ಇನ್ನು ಮರೆತಿಲ್ಲ. ಈ ನಿಟ್ಟಿನಲ್ಲಿ ಈ ಬಾರಿ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ನಾಳೆ ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ. ಎರಡನೆ ಹಂತದ ಚುನಾವಣೆಯಲ್ಲಿನ ಎಲ್ಲ ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆಯಾಗಿದ್ದು, ಅಲ್ಲಿ ಕೂಡ ನೀರೀಕ್ಷೆಯಂತೆ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಆರಿಸಿ ಬರಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬಳ್ಳಾರಿಯ ಪ್ರಮುಖ ಅಬಕಾರಿ ಗುತ್ತಿಗೆದಾರ ಹಾಗೂ ಹಿರಿಯ ಕಾಂಗ್ರೆಸ್ ಧುರೀಣ ಎಸ್. ಲಿಂಗಣ್ಣನವರು ಬಿಜೆಪಿಗೆ ಸೇರ್ಪಡೆಗೊಂಡರು.
ಮತ್ತಷ್ಟು
ಗಾಳಿಯಲ್ಲಿ ತೇಲಲಿದೆ ಮತದಾರರಿಗೆ ನೀಡಿದ ಭರವಸೆಗಳು!
ಬಿಜೆಪಿ/ಕಾಂಗ್ರೆಸ್‌ನಿಂದ ಸೀಟುಗಳ ಮಾರಾಟ: ನಂಜೇಗೌಡ
ಕಾಂಗ್ರೆಸ್‌ನಿಂದ ಮಾತ್ರ ಸ್ಥಿರ ಸರಕಾರ: ಮನ್‌ಮೋಹನ್
ದುರಹಂಕಾರಿ ಸಿದ್ಧರಾಮಯ್ಯ: ದೇವೆಗೌಡ
ಬಿಜೆಪಿ/ಜೆಡಿಎಸ್ ಲಾಲಸೆಗೆ ರಾಜ್ಯ ಬಲಿ: ದೇಶ್‌ಮುಖ್
ಸಾಯಂಕಾಲ ಚುನಾವಣಾ ಪ್ರಚಾರದ ಅಂತ್ಯ