ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಚುನಾವಣೆ-08
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣಾ ನೀತಿ: ಗೌಡರಿಗೆ ಆಯೋಗದ ಎಚ್ಚರಿಕೆ
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ನಗರಕ್ಕೆ ಬಂದ ಹಿನ್ನೆಲೆಯಲ್ಲಿ ಆಯೋಗವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ನಗರದಿಂದ ಹೊರಗೆ ಹೋಗುವಂತೆ ಆದೇಶಿಸಿದ ಘಟನೆ ಇಂದು (ಶುಕ್ರವಾರ) ಜರುಗಿತು.

ದೇವೇಗೌಡರು ಇಂದು ಹೊಳೆನರಸೀಪುರದಿಂದ ಹಾಸನದಲ್ಲಿರುವ ಜೆಡಿಎಸ್ ಮುಖಂಡ ಎಚ್.ಕೆ. ಜವರೇಗೌಡರ ಮನೆಗೆ ಆಗಮಿಸಿ, ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸುವ ಹಾಗೂ ಪತ್ರಕರ್ತರನ್ನು ಭೇಟಿ ಮಾಡಲಿದ್ದಾರೆ ಎಂಬ ಸುಳಿವನ್ನು ಪಡೆದ ಚುನಾವಣಾ ಅಧಿಕಾರಿಗಳು ಗೌಡರಿಗೆ ನಗರ ತೆರವುಗೊಳಿಸಲು ಸೂಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದರು.

ಈ ಹಿನ್ನೆಲೆಯಲ್ಲಿ ಗೌಡರು ನಗರದಿಂದ ಹೋಗದಿದ್ದಲ್ಲಿ, ಅವರ ವಾಹನವನ್ನು ಜಪ್ತಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರ ಈ ಕ್ರಮಕ್ಕೆ ಗೌಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಾವು ಕಾನೂನು ಜಾರಿಗೊಳಿಸುವುದರಲ್ಲಿ ಹಿಂದೆ ಬೀಳುವುದಿಲ್ಲ. ಬೇಕಾದರೆ ಆಯೋಗವನ್ನು ಸಂಪರ್ಕಿಸಿ ಎಂದು ಜಿಲ್ಲಾಧಿಕಾರಿ ಗೌಡರಿಗೆ ತಿಳಿಸಿದಾಗ ಗೌಡರು ತಮ್ಮ ನಿರುಪಾಯವಾಗಿ ವಾಹನದೊಂದಿಗೆ ವಾಪಾಸ್ ಹೋಗಬೇಕಾಯಿತು.
ಮತ್ತಷ್ಟು
ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ :ಡ್ಯಾನಿಶ್ ಹಾಲಿ
ದಕ್ಷಿಣದಲ್ಲಿ ಬಿಜೆಪಿಗೆ ಅಧಿಕಾರ: ಸ್ವರಾಜ್
ಗಾಳಿಯಲ್ಲಿ ತೇಲಲಿದೆ ಮತದಾರರಿಗೆ ನೀಡಿದ ಭರವಸೆಗಳು!
ಬಿಜೆಪಿ/ಕಾಂಗ್ರೆಸ್‌ನಿಂದ ಸೀಟುಗಳ ಮಾರಾಟ: ನಂಜೇಗೌಡ
ಕಾಂಗ್ರೆಸ್‌ನಿಂದ ಮಾತ್ರ ಸ್ಥಿರ ಸರಕಾರ: ಮನ್‌ಮೋಹನ್
ದುರಹಂಕಾರಿ ಸಿದ್ಧರಾಮಯ್ಯ: ದೇವೆಗೌಡ