ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಚುನಾವಣೆ-08
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾಟಾಳ್, ಎಚ್ಕೆ, ದೇಶಪಾಂಡೆ, ಪ್ರಕಾಶ್, ಅಂಬಿ, ಅನಿಲ್ ಲಾಡ್, ಬಂಗಾರಪ್ಪ ಕುಟುಂಬಕ್ಕೇ ಸೋಲು  Search similar articles
ವಿಧಾನಸಭಾ ಚುನಾವಣಾ ಫಲಿತಾಂಶ ಕ್ಷಣಕ್ಷಣಕ್ಕೆ ಕುತೂಹಲ ಮೂಡಿಸಿದೆ. ಕಣದಲ್ಲಿ ಘಟಾನುಘಟಿಗಳಿಗೆ ಸೋಲು ಕಂಡಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಸೋಲನ್ನು ಅನುಭವಿಸಿದ್ದಾರೆ. ಹರಪನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಕರುಣಾಕರ ರೆಡ್ಡಿಗೆ ವಿರುದ್ಧ ಪ್ರಕಾಶ್ ಮುಖಭಂಗ ಅನುಭವಿಸಿದ್ದಾರೆ.

ಅಂಬರೀಷ್ ಸೋಲು:
ತೀವ್ರ ನಿರೀಕ್ಷೆಯಿಂದ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀರಂಗಪಟ್ಟಣದಿಂದ ಕಣಕ್ಕಿಳಿದಿದ್ದ ನಟ ಅಂಬರೀಷ್ ಸೋಲನ್ನು ಅನುಭವಿಸಿದ್ದಾರೆ. ಈ ಮೂಲಕ ಅಂಬರೀಷ್‌ಗೆ ತೀವ್ರ ಮುಖಭಂಗವಾಗಿದೆ.

ಈ ಮಧ್ಯೆ ಚಾಮರಾಜನಗರದಲ್ಲಿ ಕಾಂಗ್ರೆಸಿನಿಂದ ಬಿಜೆಪಿ ಸೇರಿದ್ದ ಬೆಂಕಿ ಮಹದೇವು ಸೋಲು ಅನುಭವಿಸಿದ್ದಾರೆ.

ಸೋತವರಿವರು:
ಗದಗ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ. ಪಾಟೀಲ್ ಸೋಲು
ಹಳಿಯಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ವಿ. ದೇಶಪಾಂಡೆ ಸೋಲು
ವಿಜಯನಗರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಮೀಳಾ ನೇಸರ್ಗಿ ಮುಖಭಂಗ
ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಲಾಡ್ ಬಳ್ಳಾರಿಯಲ್ಲಿ ಸೋಲು
ಸೋರಬದಲ್ಲಿ ಬಂಗಾರಪ್ಪ ಮಕ್ಕಳಿಬ್ಬರಿಗೂ ಸೋಲು
ವಾಟಾಳ್ ಸೋಲು: ಚಾಮರಾಜನಗರದಲ್ಲಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಸೋಲು ಅನುಭವಿಸಿದ್ದಾರೆ. ಈ ಮೂಲಕ ವಿನೂತನ ಶೈಲಿಗೆ ಹೆಸರಾಗಿದ್ದ ವಾಟಾಳ್ ನಾಗರಾಜ್‌ಗೆ ಈ ಭಾರಿ ಚುನಾವಣೆಯಲ್ಲಿ ಭಾರಿ ಮುಖಭಂಗವಾದಂತಾಗಿದೆ

ಗೆದ್ದ ವೀರರು:
ಕಟ್ಟಾ ಸುಬ್ರಮಣ್ಯ ನಾಯ್ಡು ಗೆಲುವು
ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಜಯಭೇರಿ ಬಾರಿಸಿದ್ದಾರೆ.
ಅಂತೆಯೇ ವಿಜಯಕುಮಾರ್ ಜಯನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಜಯ

ಇದುವರೆಗಿನ ಫಲಿತಾಂಶ (ಗೆಲುವು):
ಬಿಜೆಪಿ-61
ಕಾಂಗ್ರೆಸ್-46
ಜೆಡಿಎಸ್-21
ಇತರೆ-2
ಮತ್ತಷ್ಟು
ತಂತ್ರ-ಪ್ರತಿತಂತ್ರ: ಪಕ್ಷಗಳ ಪ್ರತಿಕ್ರಿಯೆಯೇನು?
ಬಿಜೆಪಿಗೆ ದಕ್ಷಿಣದ ಹೆಬ್ಬಾಗಿಲು ತೆರೆದ ಜನಾದೇಶ
ಯಡಿಯೂರಪ್ಪ ಗೆಲುವು; ಶಶಿಕುಮಾರ್, ಸಾಯಿಕುಮಾರ್ ಸೋಲು
ಜೆಡಿಎಸ್‌ ಮೈತ್ರಿಗೆ ಕಾಂಗ್ರೆಸ್ ಒಲವು
ಮೆರಾಜುದ್ದೀನ್ ಸೋಲು, ಅಶೋಕ್ ದಾಖಲೆ ಗೆಲುವು
ಬಿಜೆಪಿಗೆ 5, ಜೆಡಿಎಸ್, ಕಾಂಗ್ರೆಸ್‌ಗೆ ತಲಾ 1, ಕುಮಾರಸ್ವಾಮಿ ಜಯಭೇರಿ