ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಸುಮಾರು 20 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯಭೇರಿ ಸಾಧಿಸಿದ್ದಾರೆ. ಶಿಕಾರಿಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಡಿಯೂರಪ್ಪ ಅವರನ್ನು ಶಿಕಾರಿಪುರದ ಮತದಾರ ಕೈಹಿಡಿದಿದ್ದಾನೆ.
ಯಡಿಯೂರಪ್ಪನವರನ್ನು ಸೋಲಿಸಬೇಕೆಂದು ಪಣತೊಟ್ಟ ಕಾಂಗ್ರೆಸ್ ಹಾಗೂ ಜೆಡಿಎಸ್ ಶಿಕಾರಿಪುರದಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಯಡಿಯೂರಪ್ಪನವರ ಪ್ರಬಲ ಪ್ರತಿಸ್ಪರ್ಧಿ ಬಂಗಾರಪ್ಪನವರಿಗೆ ಪರೋಕ್ಷ ಬೆಂಬಲ ನೀಡಿತ್ತು.
ಬಂಗಾರಪ್ಪನವರು ತಾರಾ ಮೆರುಗಿನೊಂದಿಗೆ ಭರ್ಜರಿ ಪ್ರಚಾರ ನಡೆಸಿದರು. ಅದಕ್ಕಾಗಿ ಸೊರಬ ಕ್ಷೇತ್ರದಿಂದ ಸ್ಪರ್ಧಿಸುವ ತಮ್ಮ ನಿರ್ಧಾರವನ್ನು ಕೊನೆ ಕ್ಷಣದಲ್ಲಿ ಕೈಬಿಟ್ಟು ತಮ್ಮನ್ನು ಶಿಕಾರಿಪುರದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಈ ಎಲ್ಲ ಜಾದು ಯಡಿಯೂರಪ್ಪ ಅವರೆದುರು ಠುಸ್ ಎಂದಿದೆ. ಯಡಿಯೂರಪ್ಪ ಬಲವಾಗಿ ನಂಬಿದ್ದ ಶಿಕಾರಿಪುರದ ಜನತೆ ಯಡಿಯೂರಪ್ಪನವರನ್ನು ತಮ್ಮ ನಾಯಕನನ್ನಾಗಿ ಆರಿಸಿದ್ದಾರೆ.
|