ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಚುನಾವಣೆ-08
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೈನಲ್: ಬಿಜೆಪಿ (110), ಕಾಂಗ್ರೆಸ್ (80), ಬಿದ್ದ ಜೆಡಿಎಸ್ (28)  Search similar articles
ಇತರ ಯಾವುದೇ ಪಕ್ಷಗಳನ್ನು ಮುಟ್ಟದ ಮತದಾರ
WD
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರದ ಹೆಬ್ಬಾಗಿಲು ತೆರೆದಿದೆ. ಸರಕಾರ ರಚನೆಗೆ ಬೇಕಾದ 113ಕ್ಕಿಂತ ಕೇವಲ 3 ಸ್ಥಾನ ಕಡಿಮೆ ಪಡೆದುಕೊಂಡಿರುವ ಬಿಜೆಪಿ, ರಾಜ್ಯದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿದ್ದು, ಸರಕಾರ ರಚನೆಗಾಗಿ ರಾಜ್ಯಪಾಲರ ಆಹ್ವಾನವನ್ನು ಇದಿರು ನೋಡುತ್ತಿದೆ. ಕಳೆದ ಬಾರಿ ಬಿಜೆಪಿ -79 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿದ್ದರೂ ಜೆಡಿಎಸ್ ಅಡಿಯಾಳಾಗಿ ವಿಶ್ವಾಸದ್ರೋಹ ಎದುರಿಸಬೇಕಾಗಿತ್ತು.

ಬಹುತೇಕ ಸಮೀಕ್ಷೆಗಳಿಗೆ ತದ್ವಿರುದ್ಧವಾಗಿ ಮೂಡಿ ಬಂದ ಈ ಜನಾಭಿಪ್ರಾಯವು ಕಾಂಗ್ರೆಸ್ಸನ್ನು 2004ರ ಚುನಾವಣೆಗಿಂತ 15 ಸ್ಥಾನ ಹೆಚ್ಚಳದೊಂದಿಗೆ (80) ಎರಡನೇ ಸ್ಥಾನಕ್ಕೆ ತಳ್ಳಿದ್ದರೆ, ವಿಶ್ವಾಸದ್ರೋಹದ ಆರೋಪದಲ್ಲಿ ಚಡಪಡಿಸಿ ಬಿದ್ದ, ಹಿಂದಿನ ಅವಧಿಯ 'ಕಿಂಗ್ ಮೇಕರ್' ಜಾತ್ಯತೀತ ಜನತಾ ದಳ ಜೆಡಿಎಸ್ ನೆಲಕಚ್ಚಿ ಕೇವಲ 28 ಸ್ಥಾನಕ್ಕಷ್ಟೇ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಕಳೆದ ಬಾರಿ ಜೆಡಿಎಸ್ ಪಡೆದುಕೊಂಡಿದ್ದ ಸ್ಥಾನಗಳ ಸಂಖ್ಯೆ 58.

ಇತರರು 6 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದಾರೆ. ಇವರಲ್ಲಿ ನಾಲ್ಕು ಮಂದಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗಳು, ಒಬ್ಬರು ಸ್ವತಂತ್ರ ಅಭ್ಯರ್ಥಿ ಹಾಗೂ ಒಬ್ಬರು ಬಂಡಾಯ ಬಿಜೆಪಿ ಅಭ್ಯರ್ಥಿ.

ಬೇರೆ ಯಾವುದೇ ಪಕ್ಷಗಳಾದ ಬಂಗಾರಪ್ಪ ಅವರ ಎಸ್ಪಿ, ಮಾಯಾವತಿಯ ಬಿಎಸ್ಪಿ, ತಮಿಳುನಾಡಿನ ಎಐಎಡಿಎಂಕೆ, ಮಹಿಮಾ ಪಟೇಲರ ಸುವರ್ಣ ಕರ್ನಾಟಕ, ವಾಟಾಳ್ ಪಕ್ಷ ಮತ್ತು ಎಡಪಕ್ಷಗಳನ್ನು ಮತದಾರ ತಿರಸ್ಕರಿಸಿರುವುದು ಈ ಬಾರಿಯ ವಿಶೇಷ.

ಈ ಮೂಲಕ, ಕ್ಷೇತ್ರ ಪುನರ್ವಿಂಗಡಣೆಯಾಗಿ ಮೊದಲ ಬಾರಿ ಚುನಾವಣೆ ಎದುರಿಸಿದ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾದ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆಯೇರುತ್ತಿರುವ ಮೂಲಕ ಬಿಜೆಪಿಯು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಪಟ್ಟಾಭಿಷೇಕಗೊಳ್ಳುತ್ತಿದೆ.

224 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 113 ಸ್ಥಾನಗಳ ಅವಶ್ಯಕತೆಯಿದೆ.

ಪಕ್ಷಗಳ ಅಂತಿಮ ಬಲಾಬಲಕ್ಕೆ ಇಲ್ಲಿ ಕ್ಲಿಕ್ ಮಾಡಿ

ಈ ಬಾರಿಯ ಚುನಾವಣೆ ಸ್ವಾರಸ್ಯಗಳು
9ನೇ ಬಾರಿ ಆಯ್ಕೆಯ ದಾಖಲೆ ಮಾಡುವ ಧರ್ಮ ಸಿಂಗ್ ಕನಸು ಭಗ್ನ

ಠೇವಣಿ ಕಳೆದುಕೊಳ್ಳುವಷ್ಟು ಹೀನಾಯವಾಗಿ ಸೋತ ವಾಟಾಳ್ ನಾಗರಾಜ್

ಫಲ ನೀಡದ 'ನಟನೆ': ಅಂಬರೀಷ್, ಉಮಾಶ್ರೀ, ಸಾಯಿಕುಮಾರ್, ಶಶಿಕುಮಾರ್, ಕುಮಾರ ಬಂಗಾರಪ್ಪ ಸೋಲು

ಘಟಾನುಘಟಿಗಳನ್ನು ಮನೆಗೆ ಕಳುಹಿಸಿದ ಮತದಾರ: ಕಾಗೋಡು, ಧರಂ, ದೇಶಪಾಂಡೆ, ಎಂ.ಪಿ.ಪ್ರಕಾಶ್, ಎಚ್ಕೆ ಪಾಟೀಲ್, ಆರ್.ವಿ.ದೇವರಾಜ್, ಡಿ.ಟಿ.ಜಯಕುಮಾರ್ ಸೋಲು

ಬಂಗಾರಪ್ಪ ಕುಟುಂಬ ತಿರಸ್ಕರಿಸಿದ ಮತದಾರ, ಬಂಗಾರಪ್ಪ, ಕುಮಾರ ಮತ್ತು ಮಧು ಮೂವರಿಗೂ ಸೋಲು

ಆಫ್ಟರ್ಎಫೆಕ್ಟ್: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮೆರಾಜುದ್ದೀನ್ ಪಟೇಲ್ ರಾಜೀನಾಮೆ

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೊರತಾಗಿ ಯಾವುದೇ ಪಕ್ಷಕ್ಕೂ ಮಣೆಹಾಕದ ಮತದಾರ

ಪಕ್ಷೇತರರು 6 ಕ್ಷೇತ್ರಗಳಲ್ಲಿ ಜಯ, ಅವರಲ್ಲಿ ಒಬ್ಬ ಸ್ವತಂತ್ರ, ನಾಲ್ಕು ಮಂದಿ ಬಂಡಾಯ ಕಾಂಗ್ರೆಸ್, ಒಬ್ಬರು ಬಂಡಾಯ ಬಿಜೆಪಿ
ಮತ್ತಷ್ಟು
ರಾಜ್ಯದಲ್ಲಿ ಬಿಜೆಪಿ ಅಲೆ, ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆ
ಮೆರಾಜುದ್ದೀನ್ ರಾಜೀನಾಮೆ; ವಾಟಾಳ್ ಠೇವಣಿ ನಷ್ಟ
ಧರಂಗೆ ಗರಂ ಆದ ಜೇವರ್ಗಿ: ವಿಶ್ವದಾಖಲೆ ಕನಸು ಭಗ್ನ
ಸೋಲಿನ ಹೊಣೆ ಹೋರಲು ಸಿದ್ದ:ಎಸ್.ಎಂ.ಕೃಷ್ಣ
ಸೋತ ಶಕುಅಕ್ಕ, ಗೆದ್ದ ಬೇಬ್ಯಣ್ಣ
ಬಿಜೆಪಿ ಜಯಭೇರಿ, ಕಾಂಗ್ರೆಸ್ ಆತ್ಮಶೋಧ, ಜೆಡಿಎಸ್ ಹತಾಶ ನಗು