|
|
|
ಬಿಜೆಪಿ 110, ಕಾಂಗ್ರೆಸ್ 80, ಜೆಡಿಎಸ್ - 28 |
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರದ ಹೆಬ್ಬಾಗಿಲು ತೆರೆದಿದೆ. ಸರಕಾರ ರಚನೆಗೆ ಬೇಕಾದ 113ಕ್ಕಿಂತ ಕೇವಲ 3 ಸ್ಥಾನ ಕಡಿಮೆ ಪಡೆದುಕೊಂಡಿರುವ ಬಿಜೆಪಿ, ರಾಜ್ಯದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ
ಮೂಡಿಬಂದಿದ್ದು, ಸರಕಾರ ರಚನೆಗಾಗಿ ರಾಜ್ಯಪಾಲರ ಆಹ್ವಾನವನ್ನು ಇದಿರು ನೋಡುತ್ತಿದೆ. ಕಳೆದ ಬಾರಿ ಬಿಜೆಪಿ -79 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿದ್ದರೂ ಜೆಡಿಎಸ್ ಅಡಿಯಾಳಾಗಿ
ವಿಶ್ವಾಸದ್ರೋಹ ಎದುರಿಸಬೇಕಾಗಿತ್ತು.
ಬಹುತೇಕ ಸಮೀಕ್ಷೆಗಳಿಗೆ ತದ್ವಿರುದ್ಧವಾಗಿ ಮೂಡಿ ಬಂದ ಈ ಜನಾಭಿಪ್ರಾಯವು ಕಾಂಗ್ರೆಸ್ಸನ್ನು 2004ರ ಚುನಾವಣೆಗಿಂತ15 ಸ್ಥಾನ ಹೆಚ್ಚಳದೊಂದಿಗೆ ಎರಡನೇ ಸ್ಥಾನಕ್ಕೆ (80) ತಳ್ಳಿದ್ದರೆ, ವಿಶ್ವಾಸದ್ರೋಹದ
ಆರೋಪದಲ್ಲಿ ಚಡಪಡಿಸಿ ಬಿದ್ದ, ಹಿಂದಿನ ಅವಧಿಯ 'ಕಿಂಗ್ ಮೇಕರ್' ಜಾತ್ಯತೀತ ಜನತಾ ದಳ ಜೆಡಿಎಸ್ ನೆಲಕಚ್ಚಿ ಕೇವಲ 28 ಸ್ಥಾನಕ್ಕಷ್ಟೇ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. |
|
|
|
|