| ರಾಜಕೀಯ - ಭಯೋತ್ಪಾದನೆಯ 'ವರ್ಷ'ವಾದ 2008
|
| | ಉಗ್ರರ ಮೇಲುಗೈ * ದಿಕ್ಕೆಟ್ಟು ಎಚ್ಚೆತ್ತ ಯುಪಿಎ * ಕೊನೆಗೂ ಕಾನೂನಿಗೆ ಹಲ್ಲು ಬಂತು | | | | |
| | |
| 2008 - ಭಯೋತ್ಪಾದಕರು ಮೇಳೈಸಿದ ವರ್ಷ ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಆಗಿ-ಹೋದ ಉಗ್ರಗಾಮಿ-ಭಯೋತ್ಪಾದನೆ-ಹಿಂಸಾಚಾರ ಪ್ರಕರಣಗಳನ್ನು ಪಟ್ಟಿ ಮಾಡುವುದಾದರೆ, ಕಳೆದೊಂದು ವರ್ಷದಲ್ಲಿ 800ಕ್ಕೂ ಹೆಚ್ಚು ಮಂದಿ ಭಯೋತ್ಪಾದನೆಗೆ ಬಲಿಯಾಗಿದ್ದರೆ, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಪ್ರತಿ ಸಲವೂ, ಉಗ್ರಗಾಮಿಗಳು ತಮ್ಮ ಉದ್ದೇಶ ಈಡೇರಲು ಬಿಡುವುದಿಲ್ಲ, ಭಯೋತ್ಪಾದನೆ ಮಟ್ಟ ಹಾಕುತ್ತೇವೆ ಎಂಬ ಚರ್ವಿತ ಚರ್ವಣ ಹೇಳಿಕೆ ನೀಡುತ್ತಿದ್ದ ಗೃಹ ಮಂತ್ರಿ ಶಿವರಾಜ್ ಪಾಟೀಲ್, ಮುಂಬಯಿ ದಾಳಿ ಬಳಿಕ, ದೇಶದ ಗುಪ್ತಚರ ಇಲಾಖೆಯ ಮತ್ತು ಭದ್ರತಾ ವೈಫಲ್ಯಕ್ಕೆ 'ಬಲಿ ಪಶು'ವಾದರು. ಉಗ್ರವಾದಿ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಅಂಕೆಗೆ ಸಿಗದಷ್ಟು ಮೇಳೈಸುತ್ತಿದ್ದರೆ ಕೇಂದ್ರ ಸರಕಾರವು ಜನರಿಂದ ವ್ಯಾಪಕ ಟೀಕೆಗೊಳಗಾಯಿತು. ಕಟ್ಟುನಿಟ್ಟಿನ ನಿಯಂತ್ರಣ ಕ್ರಮ, ಕಾನೂನು ಇಲ್ಲದಿರುವುದೇ ಎಲ್ಲದಕ್ಕೂ ಕಾರಣ. ಭಯೋತ್ಪಾದನೆ ಮಟ್ಟ ಹಾಕುವಲ್ಲಿ ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇಲ್ಲ ಎಂಬುದೂ ಮತ್ತೊಂದು ಅಂಶ. ಹೀಗಾಗಿ ಜನಾಕ್ರೋಶವು ಅತಿರೇಕಕ್ಕೆ ಹೋಗುವ ಮೊದಲು ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ ಮತ್ತು ರಾಜಕಾರಣಿಗಳು, ಸಂಸತ್ತಿನಲ್ಲಿ ಕೊನೆಗೂ ನಿರ್ಣಯ ಕೈಗೊಂಡಿದ್ದಾರೆ. ಇದು ಶುಭ ಲಕ್ಷಣ.* ನವೆಂಬರ್ 26, 2008: ಮುಂಬಯಿಯಲ್ಲಿ ಉಗ್ರರ ದಾಳಿ, ನವೆಂಬರ್ 26ರಂದು ಪಾಕಿಸ್ತಾನದ ಲಷ್ಕರ್-ಇ-ತೋಯ್ಬಾ ಸಂಘಟನೆಯ 10 ಉಗ್ರಗಾಮಿಗಳು ಹೋಟೆಲ್ ತಾಜ್, ಒಬೆರಾಯ್ ಟ್ರೈಡೆಂಟ್, ನಾರಿಮನ್ ಹೌಸ್‌ಗಳಿಗೆ ನುಗ್ಗಿ, ವಿದೇಶೀಯರೂ ಸೇರಿದಂತೆ 181 ಮಂದಿಯನ್ನು ಗುಂಡಿಟ್ಟು ಕೊಂದರು. ರೈಲ್ವೇ ನಿಲ್ದಾಣ, ಕೆಫೆ, ಸಿನಿಮಾ ಮಂದಿರ, ವಸತಿ ನಿಲಯದಲ್ಲಿ ಓಡಾಡಿದ ಉಗ್ರಗಾಮಿಗಳು ಮನಬಂದಂತೆ ಗುಂಡಿನ ದಾಳಿ ನಡೆಸುತ್ತಾ ಬಂದರು. ಹೋಟೆಲುಗಳಲ್ಲಿ ಗ್ರಾಹಕರನ್ನು ಒತ್ತೆಯಾಳಾಗಿ ಇರಿಸಿಕೊಂಡರು. ಹಲವರನ್ನು ಕ್ರೂರವಾಗಿ ಚಿತ್ರ ಹಿಂಸೆ ನೀಡಿ, ಗುಂಡಿಟ್ಟು ಕೊಂದರು. ಭದ್ರತಾ ಪಡೆಗಳ ಕಮಾಂಡೋ ಕಾರ್ಯಾಚರಣೆಯಲ್ಲಿ 9 ಮಂದಿ ಪಾಕಿಸ್ತಾನಿ ಉಗ್ರರು ಹತರಾಗಿದ್ದು, ಒಬ್ಬಾತ, ಪಾಕಿಸ್ತಾನದ ಅಜ್ಮಲ್ ಅಮೀರ್ ಕಸಬ್ ಜೀವಂತವಾಗಿ ಸೆರೆ ಸಿಕ್ಕಿದ್ದಾನೆ. ಭಾರತದ ವೀರ ಯೋಧರಾದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಚಕಮಕಿ ಚತುರ ವಿಜಯ ಸಾಲಸ್ಕರ್, ಅಶೋಕ್ ಕಾಮ್ಟೆ ಮತ್ತು ಮೇಜರ್ ಉಣ್ಣಿಕೃಷ್ಣನ್ ಮುಂತಾದವರು ವೀರ ಮರಣವನ್ನಪ್ಪಿದರು. ಸತತ 62 ಗಂಟೆಗಳ ಕಾಲ ನಡೆದ ನಿರಂತರ ಹೋರಾಟದ ಬಳಿಕ ಹೋಟೆಲುಗಳಲ್ಲಿ ಅವಿತಿದ್ದ ಉಗ್ರಗಾಮಿಗಳನ್ನು ತೆರವುಗೊಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾದವು.* ಅಸ್ಸಾಂ, ಅಕ್ಟೋಬರ್ 30, 2008: 13 ಕಡೆಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ 77 ಮಂದಿ ಸಾವು ಮತ್ತು ಇನ್ನೂರಕ್ಕೂ ಹೆಚ್ಚು ಮಂದಿಗೆ ಗಾಯ.* ಇಂಫಾಲ, ಅಕ್ಟೋಬರ್ 21, 2008: ಮಣಿಪುರ ಕಮಾಂಡೋ ಸಂಕೀರ್ಣದದಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟಕ್ಕೆ 17 ಬಲಿ.* ಕಾನ್ಪುರ, ಅಕ್ಟೋಬರ್ 14, 2008: ಕರ್ನಲ್ ಗಂಜ್ ಮಾರುಕಟ್ಟೆಯಲ್ಲಿ ಬಾಡಿಗೆ ಸೈಕಲ್‌ನಲ್ಲಿ ಇರಿಸಿದ ಬಾಂಬ್ ಸ್ಫೋಟಿಸಿ 8 ಮಂದಿಗೆ ಗಾಯ.* ಮಾಲೆಗಾಂವ್, ಮಹಾರಾಷ್ಟ್ರ, ಸೆಪ್ಟೆಂಬರ್ 29, 2008: ಜನನಿಬಿಡ ಮಾರುಕಟ್ಟೆಯಲ್ಲಿ ಮೋಟಾರು ಬೈಕಿನಲ್ಲಿ ಇರಿಸಿದ ಬಾಂಬ್ ಸ್ಫೋಟಿಸಿ 5 ಮಂದಿ ಸಾವು.. * ನವದೆಹಲಿ, ಸೆಪ್ಟೆಂಬರ್ 27, 2008: ಮೆಹ್ರೌಲಿಯ ಜನನಿಬಿಡ ಮಾರುಕಟ್ಟೆಯತ್ತ ಎಸೆದ ಕಚ್ಚಾ ಬಾಂಬ್ ಸ್ಫೋಟಿಸಿ ಮೂರು ಸಾವು.* ನವದೆಹಲಿ, ಸೆಪ್ಟೆಂಬರ್ 13, 2008: ನಗರದ ವಿವಿಧೆಡೆ ಆರು ಕಡೆಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ 26 ಜನರ ಸಾವು.* ಅಹಮದಾಬಾದ್, ಜುಲೈ 26, 2008: ಎರಡು ಗಂಟೆಗಳ ಅವಧಿಯಲ್ಲಿ 20 ಕಡೆ ಬಾಂಬ್‌ಗಳು ಒಂದರ ಮೇಲೊಂದರಂತೆ ಸ್ಫೋಟಿಸಿ 57 ಜನರ ಸಾವು.* ಬೆಂಗಳೂರು, ಜುಲೈ 25, 2008: ಆರು ಕಡೆ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಒಬ್ಬ ಮಹಿಳೆ ಸಾವು, ಹಲವರಿಗೆ ಗಾಯ.* ಜೈಪುರ, ಮೇ 13, 2008: ಸರಣಿ ಬಾಂಬ್ ಸ್ಫೋಟಗಳಲ್ಲಿ 68 ಜನರ ದುರಂತ ಮರಣ.ಮೇಲಿನವು 2008ರಲ್ಲಿ ನಡೆದ ಭಯೋತ್ಪಾದನಾ ದಾಳಿಗಳು. ಸ್ವಲ್ಪ ಹಿಂದಕ್ಕೆ ನೋಟ ಹರಿಸಿದರೆ ಮತ್ತಷ್ಟು ದಾಳಿಗಳು ನಡೆದಿವೆ.* ಹೈದರಾಬಾದ್, ಆಗಸ್ಟ್ 25, 2007: ಎರಡು ಕಡೆ ನಡೆದ ಸ್ಫೋಟಗಳಲ್ಲಿ 42 ಮಂದಿ ಸಾವು.* ಸಂಜೋತಾ ಎಕ್ಸ್‌ಪ್ರೆಸ್, ಫೆಬ್ರವರಿ 19, 2007: ಭಾರತ-ಪಾಕಿಸ್ತಾನ ನಡುವೆ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಎರಡು ಬಾಂಬ್ ಸ್ಫೋಟಿಸಿ 66 ಮಂದಿ ಸಾವು.* ಮಾಲೆಗಾಂವ್, ಮಹಾರಾಷ್ಟ್ರ, ಸೆಪ್ಟೆಂಬರ್ 8, 2006: ಎರಡು ಕಡೆ ನಡೆದ ಸ್ಫೋಟಗಳಲ್ಲಿ 40 ಮಂದಿಯ ಸಾವು.* ಮುಂಬಯಿ, ಜುಲೈ 11, 2006: ಉಪನಗರೀಯ ರೈಲುಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ಏಳು ಸ್ಫೋಟಗಳು ನಡೆದು 209 ಮಂದಿಯ ದುರ್ಮರಣ.* ವಾರಾಣಸಿ, ಮಾರ್ಚ್ 7, 2006: ಮಂದಿರ, ರೈಲು ನಿಲ್ದಾಣ ಸೇರಿದಂತೆ ಮೂರು ಕಡೆ ನಡೆದ ಸ್ಫೋಟಗಳಲ್ಲಿ 21 ಮಂದಿ ಸಾವು.* ನವದೆಹಲಿ, ಅಕ್ಟೋಬರ್ 29, 2005: ದೀಪಾವಳಿ ಮುನ್ನಾ ದಿನ ನಡೆದ ಮೂರು ಸ್ಫೋಟಗಳಿಗೆ 61 ಮುಗ್ಧ ಜನರ ಸಾವು.* ಮುಂಬಯಿ, ಆಗಸ್ಟ್ 25, 2003: ಗೇಟ್ ವೇ ಆಫ್ ಇಂಡಿಯಾ ಸಮೀಪ ಸೇರಿದಂತೆ ಎರಡು ಕಡೆ ಸಂಭವಿಸಿದ ಸ್ಫೋಟಗಳಲ್ಲಿ 46 ಜನರ ದುರಂತ ಮೃತ್ಯು.* ಗಾಂಧಿನಗರ, ಸೆಪ್ಟೆಂಬರ್ 24, 2002: ಅಕ್ಷರಧಾಮ ಮಂದಿರದ ಮೇಲೆ ನಡೆದ ಭಯೋತ್ಪಾದನಾ ದಾಳಿಯಲ್ಲಿ 34 ಭಕ್ತರ ಹತ್ಯೆ. |
| |
|