|
|
|
ಎಲ್ಲರೆದೆಯೊಳಗಿನ ಪ್ರೀತಿಗೆ ಎಲ್ಲೆ ಎಲ್ಲಿದೆ...? |
ಪ್ರೀತಿ ಮೂಡುವ ಹೊತ್ತು, ಅಲ್ಲಿ ಭಾವನೆಗಳದ್ದೇ ಗತ್ತು. ಯಾರಿಗಾದರೂ ಗೊತ್ತಾ? ಇದು ಯಾವಾಗ, ಯಾರೊಳಗೆ, ಎಲ್ಲಿ ಹುಟ್ಟುತ್ತೆ? ಜೀವನದಲ್ಲಿ ಒಮ್ಮೆಯಾದರೂ ಮನದೊಳಗೆ ಹರ್ಷದ ಚಿಲುಮೆಯುಕ್ಕಿಸುವ ಒಂದು ಸುಮಧುರ ಅನುಭೂತಿಯ ಆವಾಹನೆಗೆ ಒಳಗಾಗದವರೂ ಯಾರಾದರೂ ಇದ್ದಾರೆಯೆ? ಅದು ವ್ಯಕ್ತವಾಗಿರಬಹುದು ಇಲ್ಲ ಅವ್ಯಕ್ತವಾಗಿರಬಹುದು.
ಈ ಪ್ರೀತಿಯ ಶಕ್ತಿಯಾದರೂ ಎಂಥದ್ದು. ಮನ-ಮನಗಳನ್ನು ಹುರುಪಿನಿಂದ ಹುರಿಗೊಳಿಸುವ, ಹರಿತಗೊಳಿಸುವ ಶಕ್ತಿ ಅದಕ್ಕಿದೆ. ಮನದಲ್ಲಿ ಮೊಳಕೆಯೊಡದ ಪ್ರೀತಿ ಮನದೊಡೆಯ ಇಲ್ಲಾ ಮನದೊಡತಿಗೆ ಅಗಾಧ ಶಕ್ತಿಯನ್ನು ತುಂಬುತ್ತದೆ. ಸಾಹಸಕ್ಕೇ ಪ್ರೇರಣೆ ನೀಡುತ್ತದೆ. ಪ್ರೀತಿಗಾಗಿ ರಾಜ್ಯ ಕಟ್ಟಿದವರಿದ್ದಾರೆ, ಕಳಕೊಂಡವರಿದ್ದಾರೆ. ಯುದ್ಧಗಳು ನಡೆದುಹೋಗಿವೆ. ಪುರಾಣಗಳು ಸೃಷ್ಟಿಯಾಗಿವೆ... |
|
|
|
|