ಜನಾಕ್ರೋಶವು ಯಾವ ರೀತಿಯೆಲ್ಲಾ ವ್ಯಕ್ತವಾಗಬಹುದೆಂಬುದನ್ನು 2009 ತೋರಿಸಿಕೊಟ್ಟಿತು. ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್ ಅವರಿಗೆ ಶೂ ಎಸೆದ ಪ್ರಕರಣವು ಭಾರತದಲ್ಲಿಯೂ ಪ್ರತಿಧ್ವನಿಸಿ, ಗೃಹ ಸಚಿವ ಪಿ.ಚಿದಂಬರಂ, ಆಡ್ವಾಣಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಕೂಡ ಈ ಶೂ-ಆಕ್ರೋಶಕ್ಕೆ ತುತ್ತಾಗದೇ ಇರದಾದರು.PTI ಇರಾಕಿ ಪತ್ರಕರ್ತ ಮುಂತದಾರ್ ಅಲ್ ಜೈದಿ ಇದಕ್ಕೆಲ್ಲಾ ನಾಂದಿ ಹಾಡಿದ್ದು. ಇರಾಕಿಗೆ ವಿದಾಯ ಹಾಡುವ ಭೇಟಿಗಾಗಿ ಬಂದಿದ್ದ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರತ್ತ ಈತ ಶೂ ಎಸೆಯುತ್ತಾ,