ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ-09 > ವರ್ಷ-09 > ಎರಡು ಸಾವ್ರದೊಂಭತ್ತಕ್ಕೆ ಸ್ವಾಗತ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎರಡು ಸಾವ್ರದೊಂಭತ್ತಕ್ಕೆ ಸ್ವಾಗತ!
'ಅಭಿ'ಮನ್ಯು
PTI

ಬಾಗಿಲಿಗೆ ಬಂದಿಹುದು ಹೊಸ ವರುಷದಾ ಒಸಗೆ
ಬೆಸೆಯಲೆಮ್ಮ ಜೀವನದಿ ಬಾಂಧವ್ಯದಾ ಬೆಸುಗೆ

ಗತಿಸಿ ಹೋದ ಹಿಂಸೆ-ನೋವುಗಳ ವರುಷ
ಗತ ಸಾಗರದೊಳಗಡಗಿಸಿ ತರಲೆಮಗೆ ಹರುಷ

ನಲಿ ನಲಿಯುತಾ ನಲಿವಿನಿಂದ ಸ್ವಾಗತಿಸುವಾ
ನವ ನವೋಲ್ಲಾಸದಾ ಈ ಹೊಸ ಸಂವತ್ಸರವಾ

ಶಾಂತಿ, ಸಂತಸ, ಧ್ಯೇಯ ಮಂತ್ರದೊಲವಿನ ಸುಳಿಯು
ಬರಲಿ ಜೊತೆಗೂಡಿ ನವ ಶಕೆಯ ಸುಮಧುರ ಗಾಳಿಯು

ಮುಕ್ತ ಬಾಹುಗಳ ಒಲುಮೆಯಿಂದ ಯುಗಪುರುಷನನು
ಆಸೆಗಳ ಭಾವನದಿಯೊಳು ನವ ನವೋನ್ಮೇಷವನು

ಹಾದಿಯಲಿ ಬೀದಿಯಲಿ, ಕಾಳಿರಲಿ ಜೊಳ್ಳಿರಲಿ
ವಿಶ್ವ ವಿಸ್ಮಯ ಸಾಕಾರ ಭಾವಗಳ ಶರಧಿಯಲಿ

ರಾಗಾದಿ ದ್ವೇಷ ಭಾವದ ನೋವುಗಳೆಲ್ಲವ ಮರೆತು
ಹೊಸ ಶಕೆಗೆ ಸಡಗರದ ಸ್ವಾಗತವ ಕೋರೋಣ

ಅಂದದಲಿ ಚೆಂದದಲಿ ಆನಂದದಿಂದಲೀ
ಶಕಪುರುಷಗೆ ಜೈಕಾರ ಮಮಕಾರದ ಸ್ವಾಗತವು
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಮತ್ತಷ್ಟು
ಬದುಕಿ ಮತ್ತು ಬದುಕಲು ಬಿಡಿ
ಅಂತಕನ ಆತಂಕ ಮರೆಸಲೀ ನವ ವಸಂತ
ಹೊಸ ಕಾಲಚಕ್ರಕ್ಕೆ ಆದರದ ಸ್ವಾಗತ....
ನೆನ್ನೆಗಳನ್ನು ಮರೆತು ನಾಳೆಗಳ ಕನಸು ಕಾಣಿರಿ
ಮತ್ತೆ ಕಾಡುತ್ತೇನೆ ಗೆಳೆಯ... ಕಾಯಬೇಡ !
ಹೊಸ ವರ್ಷದ ಸಂಕಲ್ಪ ಈಡೇರಿಕೆಗೆ ಪಂಚ ಸೂತ್ರ