ರಮ್ಯ ಶೆಟ್ಟಿPTI ಹೊಸವರ್ಷದ ಹೊಸ್ತಿಲಲ್ಲಿದ್ದೇವೆ ಹಳೆಯದಾದ 2008ರ ಕ್ಯಾಲೆಂಡರ್ ಅನ್ನು ಮುರುಟಿ ಕಸದ ಬುಟ್ಟಿಗೆಸೆದು ಬಿಡುತ್ತೇವೆ, ಅದರಂತೆ 2008 ಇನ್ನೆಂದೂ ಬರದಂತೆ ಕಾಲಗರ್ಭ ಸೇರಿಕೊಂಡು ಬಿಡುತ್ತದೆ. ಹೊಚ್ಚ ಹೊಸ ಕ್ಯಾಲೆಂಡರ್ ನಮ್ಮ ಮನೆಯ ಗೋಡೆಯನ್ನು ಅಲಂಕರಿಸುವುದರೊಂದಿಗೆ 2009ಕ್ಕೆ ನಾವು ಒಂದಷ್ಟು ಕನಸ ಹೊತ್ತುಕೊಂಡು ಕಾಲಿರಿಸುತ್ತೇವೆ. ಲೋಕೊ ಭಿನ್ನ ರುಚಿ ಎಂಬಂತೆ ಹೊಸವರ್ಷದ ಆಚರಣೆಯೂ ಅವರರವರ ರುಚಿಗೆ ತಕ್ಕಂತೆ ವಿವಿಧತೆಯಿಂದ ಕೂಡಿರುತ್ತದೆ. ನಮ್ಮ ದೇಶದಲ್ಲಿ ಆಚರಿಸಲ್ಪಡುವ ನೂರಾರು ಹಬ್ಬಹರಿದಿನಗಳಲ್ಲಿ ಇದೂ ಒಂದೆಂಬಂತೆ