ಮೈ ಮನಸ್ಸುಗಳಿಗೆ ಕಡಿವಾಣ ಹಾಕಿ ಸುಸ್ತಿಯಲ್ಲಿಡುವ ಶಕ್ತಿ ಇರುವುದು ಯೋಗಕ್ಕೆ. ಯೋಗ ಎಂಬ ಶಬ್ದವು ಸಂಸ್ಕೃತ ಶಬ್ದ ಯುಜ್..... ಅಂದರೆ, ಬಂಧಿಸು, ಸೇರಿಸು, ಅಡಕ, ಕೇಂದ್ರೀಕರಣ ಬಂಧನ, ಬಳಕೆ ಮತ್ತು ಅಳವಡಿಕೆಯ ನಿರ್ದೇಶನ, ಸಂಘ ಅಥವಾ ಸಂಪರ್ಕದ ಅರ್ಥವನ್ನೂ ನೀಡುತ್ತದೆ.ಯೋಗವು ಮಾನವನ ವಿವಿಧ ಸ್ವಾಭಾವಿಕ ಶಕ್ತಿ, ಮನದ ಭಾವನೆಗಳು, ದೇಹ ಮತ್ತು ಸ್ಫೂರ್ತಿಯ ಸಮಗ್ರತೆ ಮತ್ತು ಸೌಹಾರ್ದತೆ. ಮನೋನಿಗ್ರಹ, ಮನಶಾಂತಿ ಮತ್ತು ಬದುಕಿನ ಒತ್ತಡವನ್ನು ಕುಗ್ಗಿಸಲು ಇದು ಸಹಾಯಕ.ಯೋಗವು ಆಧ್ಯಾತ್ಮಿಕ