ಕಳೆದ ವಾರ ಪದ್ಮಾಸನದ ಬಗ್ಗೆ ತಿಳಿದುಕೊಂಡಿದ್ದೆವು. ಪದ್ಮಾಸನವನ್ನು ನೀವೀಗ ಪಳಗಿಸಿಕೊಂಡಿದ್ದೀರಿ. ಬನ್ನಿ ಈ ವಾರ ವಜ್ರಾಸನವನ್ನು ತಿಳಿದುಕೊಳ್ಳೋಣ.ವಜ್ರಾಸನದ ನಿಯಮಿತ ಅಭ್ಯಾಸವು ದೇಹವನ್ನು ವಜ್ರದಂತೆ ಸ್ಥಿರ ಹಾಗೂ ಸುದೃಢವಾಗಿರಿಸುತ್ತದೆ. ಸಂಸ್ಕೃತದಲ್ಲಿ 'ವಜ್ರ' ಅಂದರೆ 'ಕಠಿಣ' ಎಂದರ್ಥ. ಈ ಭಂಗಿಯ ಯೋಗಾಭ್ಯಾಸ ನಿರತ ವ್ಯಕ್ತಿಯು ವಜ್ರದಂತೆ ಕಂಡುಬರುವ ಕಾರಣಕ್ಕೆ ಇದಕ್ಕೆ ವಜ್ರಾಸನ ಎಂದು ಹೆಸರು.ವಿಧಾನ * ಸುಖಾಸನ ಸ್ಥಿತಿಗೆ ಬನ್ನಿ* ನೇರವಾಗಿ ಕುಳಿತುಕೊಳ್ಳಿ* ಕಾಲುಗಳನ್ನು ಮುಂದಕ್ಕೆ ಚಾಚಿ* ಒಂದಾದ ಬಳಿಕ ಒಂದರಂತೆ ಕಾಲುಗಳನ್ನು ಭಾಗಿಸಿ* ಕಾಲುಗಳನ್ನು ನಿತಂಬದ ಬದಿಗಳಲ್ಲಿರಿಸಿ* ಅಂಗಾಲುಗಳು ಮೇಲ್ಮುಖವಾಗಿರಲಿ* ನಿತಂಬವನ್ನು ದೃಢವಾಗಿ ನೆಲದ ಮೇಲೆ ಊರಿ* ನಿತಂಬವನ್ನು ಮೇಲ್ಮುಖವಾಗಿರುವ ಅಂಗಾಲುಗಳ ಮಧ್ಯದಲ್ಲಿರಿಸಿ * ನಿತಂಬದ ಹಿಂದಿರುವ ಹೆಬ್ಬೆರಳುಗಳು ಪರಸ್ಪರ ಅಭಿಮುಖವಾಗಿರಬೇಕು* ಮೊಣಕಾಲುಗಳು ಹತ್ತಿರತ್ತಿರವಾಗಿರಬೇಕು* ನಿಮ್ಮ ಅಂಗೈಗಳನ್ನು ತೊಡೆಗಳ ಮೇಲಿರಿಸಿ* ನೇರವಾಗಿ ಮುಂದಕ್ಕೆ ನೋಡಿ* ವಜ್ರಾಸನ ಹಾಕುವ ವೇಳೆಗೆ ದೇಹವು ದೃಢವಾಗಿ ನಿಮಿರಿರಬೇಕು ವಜ್ರಾಸನದ ಪರ್ಯಾಯ ವಿಧಾನ * ಮೇಲ್ಮುಖವಾದ ಅಂಗಾಲುಗಳನ್ನು ನಿತಂಬದ ಬದಿಯಲ್ಲಿರಿಸುವ ಬದಲಿಗೆ ಕೆಳಭಾಗದಲ್ಲಿಯೂ ಇರಿಸಬಹುದು.* ಈ ವಿಧಾನದಲ್ಲಿ ಹೆಬ್ಬೆಟ್ಟುಗಳು ಪರಸ್ಪರ ಕತ್ತರಿಯಾಗುವ ಕಾರಣ ನೀವು ಹಿಮ್ಮಡಿಗಳ ಮೇಲೆ ಕುಳಿತುಕೊಳ್ಳಬಹುದು.* ಮೇಲ್ಮುಖವಾಗಿರುವ ಅಂಗಾಲುಗಳ ಒಳಭಾಗದಲ್ಲಿ ನಿತಂಬವನ್ನಿರಿಸಬಹುದು* ಹಾಗಾಗಿ ಮೇಲೆ ಹೇಳಿದಂತೆ ನಿತಂಬವು ನೆಲದ ಬದಲಿಗೆ ಅಂಗಾಲುಗಳ ಮಧ್ಯದಲ್ಲಿರುತ್ತದೆ* ಉಸಿರಾಟವು ಹಾಗೆಯೇ ಇರಲಿಅನುಕೂಲಗಳು * ತೊಡೆಯಲ್ಲಿನ ಕೊಬ್ಬು ಕಡಿಮೆಯಾಗುತ್ತದೆ* ಬೆನ್ನು ಮೂಳೆಗೆ ವ್ಯಾಯಾಮ ದೊರೆಯುತ್ತದೆ* ಕಿಬ್ಬೊಟ್ಟೆಯ ಅಂಗಾಂಗಳು ಅವುಗಳ ಯಥಾಸ್ಥಾನಗಳಲ್ಲಿರುತ್ತವೆ * ಕಶೇರುಕಗಳ ಮಾಂಸಖಂಡಗಳು ದೃಢಗೊಳ್ಳುತ್ತವೆ ಮತ್ತು ಶಕ್ತಿಯುತವಾಗುತ್ತವೆ* ಜಠರ ಪ್ರದೇಶವೂ ಸುದೃಢವಾಗುತ್ತದೆ* ಹೆಬ್ಬೆರಳು, ಪಾದದ ಮೇಲ್ಮೈ, ಹಿಮ್ಮಡಿಗಳು, ಮೊಣಕಾಲುಗಳು, ತೊಡೆ ಹಾಗೂ ಪೃಷ್ಠಗಳ ಪೆಡಸಾದ ಅಸ್ಥಿರಜ್ಜುಗಳು ಸಡಿಲಗೊಳ್ಳುತ್ತವೆ.ಎಚ್ಚರಿಕೆ ಮೊಣಕಾಲುಗಳಲ್ಲಿ ಯಾವುದಾದರೂ ನೋವು ಅಥವಾ ಗಾಯಗಳಿದ್ದರೆ ಈ ಆಸನದಿಂದ ದೂರವಿರಿ.