ಕುಳಿತುಕೊಂಡ ಭಂಗಿಯಲ್ಲೇ ಮಾಡಬಹುದಾದ ಆಸನ, ವಕ್ರಾಸನ.
ವಕ್ರಾಸನ ಹಾಕುವ ವಿಧಾನ *ಕಾಲುಗಳನ್ನು ಮುಂಚಾಚಿ ದಂಡಾಸನದಲ್ಲಿ ಕುಳಿತುಕೊಳ್ಳಿ.
*ಬಲಕಾಲಿನ ಮೊಣಕಾಲನ್ನು ಬಗ್ಗಿಸಿ ಮತ್ತು ಆಂಗಾಲನ್ನು ಎಡ ಮೊಣಕಾಲಿನ ಬಳಿ ಇರಿಸಿ.
*ಉಸಿರನ್ನು ಬಿಟ್ಟು ದೇಹವನ್ನು ಬಲಕ್ಕೆ ತಿರುಗಿಸಿ ಮತ್ತು ನಿಮ್ಮ ಎಡಗೈಯನ್ನು ಬಗ್ಗಿಸಿದ ಬಲಗಾಲಿನ ಹೊರಗಡೆಯಿಂದ ತನ್ನಿ.
*ಆಧಾರಕ್ಕಾಗಿ ಬಲಗೈಯನ್ನು ಬೆನ್ನಹಿಂದಿಡಿ.
*ಬೆನ್ನು ಮೂಳೆಯನ್ನು ನೇರವಾಗಿಸಿ ಮತ್ತು ಬಲಗಾಲಿನ ಹೆಬ್ಬೆರಳನ್ನು ಎಡಗೈಯಿಂದ ಹಿಡಿಯಿರಿ.
*ಬೆರಳುಗಳು ಮೇಲ್ಮುಖವಾಗಿರುವಂತೆ ಎಡಗಾಲನ್ನು ಚಾಚಿ.
*ನಿಧಾನವಾಗಿ ಉಸಿರುಬಿಡಿ. ದೇಹವನ್ನು ಇನ್ನಷ್ಟು ಬಲಕ್ಕೆ ತಿರುಗಿಸಿ ಮತ್ತು ಕತ್ತನ್ನು ನಿಮ್ಮ ಹಿಂದಕ್ಕೆ ನೋಡುವಂತೆ ತಿರುಗಿಸಿ.
*ಸಾಧ್ಯವಿರುವಷ್ಟು ಹೊತ್ತು ಈ ಭಂಗಿಯಲ್ಲಿರಿ.
*ಉಸಿರನ್ನು ಒಳಗೆಳೆದುಕೊಳ್ಳಿ. ದೇಹ ಮತ್ತು ಕತ್ತನ್ನು ಮುಂದಕ್ಕೆ ತಿರುವಿ, ಕೈಯನ್ನು ಬಿಡಿ, ಕಾಲುಗಳನ್ನು ನೆಟ್ಟಗೆ ಮಾಡಿ.
*ದಂಡಾಸನದಲ್ಲಿ ಕುಳಿತುಕೊಳ್ಳಿ
ಈ ಆಸನ ನೀಡುವ ಲಾಭಗಳು
*ಬೆನ್ನು ಮೂಳೆಯನ್ನು ಶಕ್ತಿಯತವಾಗಿಸುತ್ತದೆ.
*ಬೆನ್ನಹಿಂದಿನ ಭಾಗದ ನಮ್ಯತೆಯನ್ನು ಹೆಚ್ಚಿಸುತ್ತದೆ.
*ಜೀರ್ಣ ಪ್ರಕ್ರಿಯೆಯನ್ನು ಚೆನ್ನಾಗಿಸುತ್ತದೆ. ಈ ಆಸನವು ಜೀರ್ಣಾಂಗ ವ್ಯವಸ್ಥೆಗೆ ಮಾಲೀಸು ನೀಡುತ್ತದೆ.
*ಭುಜಗಳನ್ನು ಶಕ್ತವಾಗಿಸುತ್ತದೆ.
*ಕತ್ತಿನ ಮಾಂಸಖಂಡಗಳಿಗೆ ವ್ಯಾಯಾಮ ದೊರೆಯುತ್ತದೆ.
ಎಚ್ಚರಿಕೆ ಕತ್ತು ಅಥವಾ ಬೆನ್ನುನೋವು ಇದ್ದಲ್ಲಿ ಈ ಆಸನದ ಅಭ್ಯಾಸ ಮಾಡದಿರಿ.
ಸ್ಲಿಪ್ ಡಿಸ್ಕ್ ಅಥವಾ ಸ್ಪಾಂಡಿಲೈಟಿಸ್ ಇದ್ದರೂ ಈ ಆಸನ ನಿಮಗೆ ಬೇಡ.
|