ಆಸನಗಳು | ಲೇಖನ
ಮುಖ್ಯ ಪುಟ » ವಿವಿಧ » ಯೋಗ » ಆಸನಗಳು » ಅರ್ಧಧನುರಾಸನ (Ardha Dhanurasan)
Bookmark and Share Feedback Print
 
ಸಂಸ್ಕೃತದಲ್ಲಿ 'ಧನುಸ್ಸು' ಎಂದು ಬಿಲ್ಲು ಎಂಬರ್ಥ. ಧನುರಾಸನವು ನಿಮ್ಮ ದೇಹವನ್ನು ಬಿಲ್ಲಿನಂತೆ ಭಾಗಿಸುತ್ತದೆ. ನಿಮ್ಮ ನಡು ಮತ್ತು ತೊಡೆಗಳು ಬಾಗಿದ್ದರೆ, ಕಾಲಿನ ಕೆಳಭಾಗ ಮತ್ತು ಕೈಗಳು ನೆಟ್ಟಗಿನ ಬಿಲ್ಲುಹುರಿಯಂದಕ್ಕೆ ತಿರುಗುತ್ತದೆ.

ಅರ್ಧಧನುರಾಸನದ ವಿಧಾನಗಳು
ಮುಖಕೆಳಗಿರಿಸಿ ಕಿಬ್ಬೊಟ್ಟೆಯ ಮೇಲೆ ಮಲಗಿ. ನಿಮ್ಮ ಗಲ್ಲವು ನೆಲಕ್ಕೆ ತಾಕಿರಬೇಕು. ದೇಹದ ಇಕ್ಕೆಡೆಗಳಲ್ಲಿ ತೋಳುಗಳನ್ನಿರಿಸಿ. ಕಾಲುಗಳ ಮಧ್ಯೆ ಅಂತರವಿರಲಿ. ಹಿಂಬದಿಯ ಸ್ನಾಯುಗಳು ಸೇರಿದಂತೆ ಎಲ್ಲಾ ಸ್ನಾಯುಗಳು ವಿಶ್ರಾಂತಿ ಪಡೆಯಲಿ. ಸಹಜವಾಗಿ ಉಸಿರಾಡಿ
WD


ನಿಮ್ಮ ಕಾಲುಗಳನ್ನು ಹಿಂದಕ್ಕೆ ಭಾಗಿಸಿ. ಹಿಮ್ಮಡಿಯನ್ನು ಕೈಗಳಿಂದ ಹಿಡಿದುಕೊಂಡು ತಲೆ ಮತ್ತು ಕತ್ತನ್ನು ಹಿಂದಕ್ಕೆ ಭಾಗಿಸಿ. ನಿಧಾನಕ್ಕೆ ಆಳವಾಗಿ ಉಸಿರಾಡಿ. ಸುಮಾರು 10 ಸೆಕುಂಡುಗಳ ಕಾಲ ಸಂಪೂರ್ಣವಾಗಿ ಉಸಿರನ್ನು ಒಳಗೆಳೆದುಕೊಳ್ಳಿ.

ಮೂರು ಸೆಕುಂಡುಗಳ ಬಳಿಕ ಉಸಿರು ಹೊರಬಿಡಲಾರಂಭಿಸಿ. ನೀವು ಉಸಿರು ಹೊರಬಿಡುತ್ತಿರುವಂತೆಯೇ ಕೆಳಗಿನ ಚಲನವಲನಗಳನ್ನು ಮುಂದುವರಿಸಿ. ಇವೆರಡು ಕಾರ್ಯಗಳನ್ನು 15 ಸೆಕುಂಡುಗಳಲ್ಲಿ ಪೂರೈಸಿ.

ನಿಮ್ಮ ಕಾಲುಗಳನ್ನು ಹಿಂದಕ್ಕೆ ಎಳೆಯಿರಿ. ನಿಧಾನಕ್ಕೆ ನಿಮ್ಮ ಮೊಣಕಾಲುಗಳ ಒಳಭಾಗಗಳು, ಪಾದ ಮತ್ತು ಕಾಲ್ಬೆರಳುಗಳನ್ನು ನಿಧಾನಕ್ಕೆ ಪರಸ್ಪರ ಜೋಡಿಸಿ. ಅವುಗಳು ಒಂದೇ ಮಟ್ಟದಲ್ಲಿಲ್ಲದಿದ್ದರೆ, ನೀವು ಹಿಂದಕ್ಕೆ ಗರಿಷ್ಠ ಮಟ್ಟಕ್ಕೆ ಭಾಗಲಾರಿರಿ.

ಅನುಕೂಲಗಳು
ದೇಹವನ್ನು ಅರ್ಧಕ್ಕೆ ಬಾಗಿಸುವುದರಿಂದ, ಇಡೀದೇಹವು ಶಕ್ತಿಯುತವಾಗುತ್ತದೆ. ಅಲ್ಲದೆ ಇಡೀ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಅಭ್ಯಾಸವು ಕಿಡ್ನಿ ಮತ್ತು ಅಡ್ರಿನಲ್ ಗ್ರಂಥಿಗಳನ್ನು ಉತ್ತೇಜಿಸುತ್ತದೆ.

ಎಚ್ಚರಿಕೆ
ಸ್ಲಿಪ್ಡ್ ಡಿಸ್ಕ್, ಹರ್ನಿಯಾ, ಅಲ್ಸರ್, ಹೃದ್ರೋಗ ಸಮಸ್ಯೆಗಳು ಮತ್ತು ಅತೀವ ರಕ್ತದೊತ್ತಡ ಇದ್ದರೆ ಈ ಆಸನವನ್ನು ಪ್ರಯತ್ನಿಸದಿರಿ. ಯಾವುದಾದರೂ ಕಿಬ್ಬೊಟ್ಟೆ ಶಸ್ತ್ರಕ್ರಿಯೆಗೊಳಗಾಗಿದ್ದರೆ ಸಂಪೂರ್ಣ ಗುಣಮುಖವಾಗುವ ತನಕ ಈ ಆಸನದ ಪ್ರಯತ್ನ ಬೇಡ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅರ್ಧಧನುರಾಸನ, ಯೋಗಾಸನ, ಆಸನ