ಮುಖ್ಯ ಪುಟ > ವಿವಿಧ > ಯೋಗ > ಆಸನಗಳು > ಸೂರ್ಯ ನಮಸ್ಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೂರ್ಯ ನಮಸ್ಕಾರ
WD
ಯೋಗಾಸನಗಳ ಸರಣಿಯಲ್ಲಿ ಸೂರ್ಯ ನಮಸ್ಕಾರ ಕೂಡ ಒಂದು ಪ್ರಕಾರವಾಗಿದೆ. ಸೂರ್ಯ ನಮಸ್ಕಾರ ಎಲ್ಲ ವಯಸ್ಸಿನವರಿಗೂ ಯೋಗ್ಯವಾಗಿದ್ದು , ದೈಹಿಕ ಹಾಗೂ ಮಾನ ಸಿಕ ಮತ್ತು ಚುರುಕು ಬುದ್ದಿ ನೀಡುವಲ್ಲಿ ನೆರವಾಗುತ್ತದೆ. ಸೂರ್ಯ ನಮಸ್ಕಾರದಲ್ಲಿ 12 ಆಸನಗಳು ಇರುತ್ತವೆ.

ಮಾಡುವ ಕ್ರಮ:

ಕಾಲುಗಳನ್ನು ಹತ್ತಿರ ತಂದು ನೇರವಾಗಿ ನಿಲ್ಲಿ. ನಿಮ್ಮ ಕೈಗಳನ್ನು ನೇರವಾಗಿ ಮೇಲೆತ್ತಿ ಹಾಗೇ ಮುಂದುವರಿದು ನೇರವಾಗಿ ನಿಮ್ಮ ಮುಖಕ್ಕೆ ಎದುರಾಗುವಂತೆ ಮಾಡಿ. ಇಳಿಮುಖದ ದಿಕ್ಕಿನತ್ತ ಕೈಗಳನ್ನು ತಿರುಗಿಸುವ ಮೂಲಕ ನಮಸ್ಕಾರ ಮಾಡುವ ರೀತಿಯಲ್ಲಿ ಜೋಡಿಸಿ.

ಶ್ವಾಸವನ್ನು ಒಳಗೆ ಎಳೆದುಕೊಳ್ಳುವುದರೊಂದಿಗೆ ನಿಮ್ಮ ಕಿವಿಗಳಿಗೆ ತಗಲುವಂತೆ ಕೈಗಳನ್ನು ಮೇಲಕ್ಕೆತ್ತಿ. ನಂತರ ನಿಧಾನವಾಗಿ ಬಾಗಿ ನಿಮ್ಮ ತೋಳುಗಳನ್ನು ತಲೆಯಿಂದ ಹಿಂದಕ್ಕೆ ತೆಗೆದುಕೊಳ್ಳಿ. ವಿಷುದ್ದ ಚಕ್ರದತ್ತ ನಿಮ್ಮ ಗಮನವಿರಲಿ.

ಶ್ವಾಸವನ್ನು ಹೊರಗೆ ಬಿಡುತ್ತಾ ಮುಂದಕ್ಕೆ ಬಾಗಿ ಎರಡು ಕೈಗಳಿಂದ ನಿಮ್ಮ ಪಾದದ ಬೆರಳುಗಳನ್ನು ಮುಟ್ಟಿ ಹಾಗೇ ಕೆಲ ನಿಮಿಷಗಳ ಕಾಲ ಅದೇ ಸ್ಥಿತಿಯಲ್ಲಿರಲು ಪ್ರಯತ್ನಿಸಿ.ಇದನ್ನು ಪಾದ ಪಾಶ್ಚಿಮೊತ್ತನಾಸನಾ ಎಂದು ಹೇಳುತ್ತಾರೆ.

ಶ್ವಾಸವನ್ನು ಒಳಗೆ ಎಳೆದುಕೊಳ್ಳುತ್ತಾ ಬಲಗಾಲನ್ನು ಹಿಂದಕ್ಕೆ ಇಟ್ಟು ಕಾಲು ಮತ್ತು ಕೈಗಳನ್ನು ಭೂಮಿಯ ಮೇಲೆ ಊರಲು ಪ್ರಯತ್ನಿಸಿ. ಇದೇ ಸ್ಥಿತಿಯಲ್ಲಿ ಕೆಲ ಸೆಕೆಂಡ್‌ಗಳನ್ನು ಕಳೆಯಿರಿ.
WD


ಶ್ವಾಸವನ್ನು ಹೊರಗೆ ಬಿಡುತ್ತಾ ಎಡ ಮತ್ತು ಬಲಗಾಲನ್ನು ನೇರವಾಗಿರಿಸಿ ಕೈಗಳನ್ನು ನೇರವಾಗಿಡಲು ಪ್ರಯತ್ನಿಸಿ. ಹಿಂಗಾಲನ್ನು ಎತ್ತಿ ಅದರ ಜೊತೆಗೆ ನೇರವಾಗಿ ಕೈಗಳನ್ನು ತಲೆಯ ಹಿಂಭಾಗಕ್ಕೆ ತನ್ನಿ.

ನೆಲದ ಮೇಲೆ ಬೋರಲಾಗಿ ಮಲಗಿ ಶ್ವಾಸವನ್ನು ಒಳಗೆ ಎಳೆದುಕೊಳ್ಳುತ್ತಾ ಪಾದ ,ಮೊಣಕಾಲು ಎದೆ ಮತ್ತು ಹಣೆ ನೆಲಕ್ಕೆ ನಿಧಾನವಾಗಿ ತಾಗುವಂತೆ ಮಾಡಿ ಹಿಂಗಾಲನ್ನು ನೆಲಕ್ಕಿಂತ ಸ್ವಲ್ಪ ಮೇಲಕ್ಕೆತ್ತಿ ಶ್ವಾಸವನ್ನು ಹೊರಗೆ ಬಿಡಿ.

ಶ್ವಾಸವನ್ನು ಹೊರಗೆಳೆದುಕೊಳ್ಳುತ್ತಾ ನಿಧಾನವಾಗಿ ದೇಹವನ್ನು ಆದಷ್ಟು ಹಿಂದಕ್ಕೆ ಬಾಗಿಸಿ ಇದನ್ನು ಭುಜಂಗಾಸಾನವೆಂದು ಕರೆಯುತ್ತಾರೆ.

ಶ್ವಾಸವನ್ನು ನಿಧಾನವಾಗಿ ಹೊರಗೆ ಬಿಡುತ್ತಾ ಕೈಗಳನ್ನು ನೇರವಾಗಿಟ್ಟು ಸೊಂಟವನ್ನು ಮೇಲಕ್ಕೆತ್ತಿ ತಲೆಯನ್ನು ಮೇಲ್ಮುಖವಾಗಿ ಮಾಡುತ್ತಾ ಕೈಗಳನ್ನು ಹಿಂದಕ್ಕೆ ತೆಗೆಯಲು ಪ್ರಯತ್ನಿಸಿ.

ಶ್ವಾಸವನ್ನು ನಿಧಾನವಾಗಿ ಒಳಗೆ ಎಳೆದುಕೊಳ್ಳುತ್ತಾ ಬಲಗಾಲಿನ ಮೊಣಕಾಲನ್ನು ಮುಂದಕ್ಕೆ ಇಡುತ್ತಾ ತಲೆಯನ್ನು ಆದಷ್ಟು ಮೇಲೆತ್ತಲು ಪ್ರಯತ್ನಿಸಿ.

ಶ್ವಾಸವನ್ನು ನಿಧಾನವಾಗಿ ಹೊರಗೆ ಬಿಡುತ್ತಾ ಕಾಲುಗಳನ್ನು ನೇರವಾಗಿಟ್ಟು ಕೈಗಳು ಪಾದದ ಬೆರಳುಗಳನ್ನು ಮುಟ್ಟುತ್ತಿದ್ದು ತಲೆ ಮೊಣಕಾಲಿಗೆ ತಗುಲಿರಬೇಕು.

WD
ಶ್ವಾಸವನ್ನು ನಿಧಾನವಾಗಿ ಒಳಗೆಳೆದುಕೊಳ್ಳುತ್ತಾ ಕೈಗಳನ್ನು ಮೇಲಕ್ಕೆತ್ತಿ ನಿಧಾನವಾಗಿ ಹಿಂದಕ್ಕೆ ಬಾಗಿ ಕೈಗಳನ್ನು ತಲೆಯ ಹಿಂಭಾಗಕ್ಕೆ ತನ್ನಿ.

ನಮಸ್ಕಾರದ ಸ್ಥಿತಿಗೆ ಬನ್ನಿ

ಈಗ ಸಾಮಾನ್ಯ ಸ್ಥಿತಿಗೆ ಬನ್ನಿ. ಇದರಿಂದ ಒಂದು ಸುತ್ತಿನ ಸೂರ್ಯ ನಮಸ್ಕಾರ ಮಾಡಿದಂತಾಯಿತು. ಈಗ ಎಡಗಾಲಿನಿಂದ ಸೂರ್ಯನಮಸ್ಕಾರದ ಹಂತಗಳನ್ನು ಪುನರಾವರ್ತಿಸಿ.

ಮುನ್ನೆಚ್ಚರಿಕೆ:

ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಸೂರ್ಯ ನಮಸ್ಕಾರ ಮಾಡದಿರುವುದು ಸೂಕ್ತ. ಸೂರ್ಯ ನಮಸ್ಕಾರ ಮಾಡುವ ಮೊದಲು ಸೂಕ್ತ ಸಲಹೆಗಳನ್ನು ಪಡೆದುಕೊಳ್ಳುವುದು ಅಗತ್ಯ.

ಪ್ರಯೋಜನಗಳು:

ದೇಹವನ್ನು ಹಿಗ್ಗಿಸುವ ಹಾಗೂ ಕುಗ್ಗಿಸುವುದರಿಂದ ಪಚನ ಕ್ರಿಯೆ ಉತ್ತಮವಾಗುತ್ತದೆ.

ದೇಹದ ಮೈಕಾಂತಿಯನ್ನು ತಾಜಾಗೊಳಿಸುತ್ತದೆ ಹಾಗೂ ಚರ್ಮ ಕಾಯಿಲೆಯನ್ನು ದೂರವಾಗಿಸುತ್ತದೆ.
WD


ಇದರಿಂದ ಬೆನ್ನುಮೂಳೆ ಹಾಗೂ ನಡುಪಟ್ಟಿ ವಿಕಸನವಾಗುತ್ತದೆ.

ಪಚನ ಕ್ರಿಯೆಯನ್ನು ಉತ್ತಮವಾಗಿಸಿ ಮಲಬದ್ದತೆಯನ್ನು ಹೋಗಲಾಡಿಸುತ್ತದೆ.
ವೀಡಿಯೋ ವೀಕ್ಷಿಸಿ
ಮತ್ತಷ್ಟು
ಕಟಿ ಚಕ್ರಾಸನ  
ಪಾದಹಸ್ತಾಸನ  
ಅರ್ಧಚಂದ್ರಾಸನ  
ಸಮಸ್ಥಿತಿಯ ತಾಡಾಸನ  
ಪೂರ್ಣ ಧನುರಾಸನ  
ಅರ್ಧಧನುರಾಸನ