ಭ್ರಷ್ಟಾಚಾರ ನಿಗ್ರಹ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾದ ಕೇಂದ್ರ

ನವದೆಹಲಿ, ಸೋಮವಾರ, 10 ಸೆಪ್ಟಂಬರ್ 2018 (07:15 IST)

ನವದೆಹಲಿ : ಭ್ರಷ್ಟಾಚಾರ ನಿಗ್ರಹ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರ, ಈ ನಿಟ್ಟಿನಲ್ಲಿ 2018ರ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದ್ದು, ಆ ಮೂಲಕ ಮಾಡಿಕೊಡುವುದಕ್ಕಾಗಿ ಲೈಂಗಿಕ ಸಹಕಾರಕ್ಕೆ ಕೋರಿಕೆ ಸಲ್ಲಿಸುವುದು ಅಥವಾ ಅದನ್ನು ಒಪ್ಪಿಕೊಳ್ಳುವುದು ಲಂಚ ನೀಡಿದಂತೆ ಎಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.


ಸರ್ಕಾರಿ ಕೆಲಸಗಳನ್ನು ಮಾಡಿಕೊಡುವ ಸಿಬ್ಬಂದಿಯು, ತನ್ನ ಕಾರ್ಯಕ್ಕೆ ಪ್ರತಿಯಾಗಿ ಯಾವುದೇ ಉಡುಗೊರೆ ಪಡೆಯುವುದು, ದುಬಾರಿ ಕ್ಲಬ್‌ಗಳ ಪಡೆಯುವುದು ಅಥವಾ ವಿಶೇಷ ಆದರಣೆಯನ್ನು ಸ್ವೀಕರಿಸುವುದೂ  ಸಹ ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದರಲ್ಲಿ ಲೈಂಗಿಕ ಸಹಕಾರ ಅಪೇಕ್ಷೆ ಕೂಡಾ ಸೇರಿದೆ.


ಕಾಯ್ದೆಗೆ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಸಿಬಿಐಯಂತಹ ತನಿಖಾ ಸಂಸ್ಥೆಗಳು ಇನ್ನು ಮುಂದೆ ಲೈಂಗಿಕ ಸಹಕಾರ ಅಪೇಕ್ಷಿಸುವ ಅಧಿಕಾರಿಗಳ ಅಥವಾ ದುಬಾರಿ ಕೊಡುಗೆ ಬಯಸುವ ಅಧಿಕಾರಿಗಳನ್ನೂ ಈ ಕಾಯ್ದೆಯಡಿ ವಿಚಾರಣೆ ನಡೆಸಿ ಗರಿಷ್ಟ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪತ್ನಿಯ ಅಕ್ರಮ ಸಂಬಂಧ ಕಣ್ಣಾರೆ ಕಂಡ ಪತಿ, ಮಾಡಿದ್ದನ್ನು ಕೇಳಿದರೆ ಬೆಚ್ಚಿ ಬೀಳ್ತೀರಾ!

ಚಿಕ್ಕಮಗಳೂರು : ಪತ್ನಿ ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ಕಣ್ಣಾರೆ ಕಂಡ ಪತಿ ಆಕೆಯ ...

news

ಇಂದು ಭಾರತ ಬಂದ್ ; ಏನೆಲ್ಲಾ ಇದೆ? ಏನೆಲ್ಲಾ ಇಲ್ಲ?

ನವದೆಹಲಿ : ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಏರಿಯಾಗಿರುವ ಹಿನ್ನಲೆಯಲ್ಲಿ ಇಂದು ಕಾಂಗ್ರೆಸ್ ಪಕ್ಷ ...

news

ಉಪರಾಷ್ಟ್ರಪತಿಯಿಂದ ಪ್ರಧಾನಿಯ ಗುಣಗಾನ

ಭಾರತ ಕಳೆದ ನಾಲ್ಕು ವರ್ಷಗಳಿಂದ ಶೀಘ್ರ ಗತಿಯಲ್ಲಿ ಪ್ರಗತಿಯತ್ತ ಸಾಗುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರ ...

news

ಮಹಿಳಾ ಖೈದಿಗಳಿಂದ ಪರಮೇಶ್ವರ್ ಗೆ ಘೇರಾವ್

ಮಹಿಳಾ ಖೈದಿಗಳನ್ನು ಬಿಡುಗಡೆ ಮಾಡದಿರುವ ಕ್ರಮ ಖಂಡಿಸಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಮಹಿಳಾ ...