ಮುಖ್ಯ ಪುಟ  ಸುದ್ದಿ ಜಗತ್ತು  ವ್ಯವಹಾರ  ವಾಣಿಜ್ಯ ಸುದ್ದಿ
 
ದಕ್ಷಿಣ ಭಾರತದಲ್ಲಿ ಅವಿವ ಕಾರ್ಯನಿರ್ವಹಣಾ ವಿಸ್ತರಣೆ
webdunia
ದಕ್ಷಿಣ ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ, ಅವಿವ ಇಂಡಿಯ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ 22 ಶಾಖೆಗಳನ್ನು ತೆರೆಯಲಿದೆ.

ಗುರುವಾರದಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವಿವ ಇಂಡಿಯ ನಿರ್ದೇಶಕ ವಿವೇಕ್ ಖನ್ನಾ ಅವರು, ದಕ್ಷಿಣ ಭಾರತ ರಾಜ್ಯಗಳು ನಮಗೆ ಬಹು ಮುಖ್ಯ ಮಾರುಕಟ್ಟೆಯಾಗಿದ್ದು, 22 ಹೊಸ ಶಾಖೆಗಳನ್ನು ತೆರೆಯುವ ಮೂಲಕ ಮಾರುಕಟ್ಟೆ ವಿಸ್ತರಿಸುವ ಯೋಜನೆಯನ್ನು ತಾವು ಹೊಂದಿದ್ದು, ಇದರಿಂದ ದಕ್ಷಿಣ ಭಾರತದಲ್ಲಿ ಶಾಖೆಗಳ ಒಟ್ಟು ಸಂಖ್ಯೆಯನ್ನು 42ಕ್ಕೆ ಕೊಂಡೊಯ್ಯಲಿದೆ.

ಕಂಪನಿಯು ಕೇರಳದಲ್ಲಿ 12 ಶಾಖೆಗಳನ್ನು ಹಾಗೆಯೇ, ಬೆಳಗಾಂ, ಪುದುಚ್ಚೇರಿ, ಬೆಂಗಳೂರು, ಸಿಖಂದರಾಬಾದ್, ಚೆನ್ನೈ ಮತ್ತು ಮೈಸೂರಿನಲ್ಲಿ ತನ್ನ ಶಾಖೆಗಳನ್ನು ತೆರೆಯಲಿದೆ.

ಈ ವಿಸ್ತರಣಾ ಯೋಜನೆಯು ಗುರಿ ಗ್ರಾಹಕರನ್ನು ತಲುಪುವುದು ಹಾಗೂ ಪ್ರಮುಖ ಉತ್ಪನ್ನಗಳು ಮತ್ತು ಸೇವೆಗಳನ್ನು ಗ್ರಾಹಕರಿಗೆ ಒದಗಿಸುವುದನ್ನು ಉದ್ದೇಶವನ್ನಾಗಿ ಹೊಂದಿದೆ ಎಂದು ಖನ್ನಾ ತಿಳಿಸಿದ್ದಾರೆ.
ಮತ್ತಷ್ಟು
ಪ್ಲಾಂಟೆಶನ್‌ ವಲಯದಲ್ಲಿ 8,000 ಕೋ ರೂ ಹೂಡಿಕೆ
ಭಾರತದಲ್ಲಿ 3 ಪಾಕ್ ಬ್ಯಾಂಕು ತನ್ನ ಶಾಖೆ ತೆರೆಯಲು ಉತ್ಸುಕ
ಭಾರತಕ್ಕೆ ಪಾಕ್ ಗೋಧಿ
ಅನಿಲ ಮಾರಾಟ ಮಾಡದಂತೆ ನ್ಯಾಯಾಲಯ ತೀರ್ಪು