ಮುಖ್ಯ ಪುಟ  ಸುದ್ದಿ ಜಗತ್ತು  ವ್ಯವಹಾರ  ವಾಣಿಜ್ಯ ಸುದ್ದಿ
 
ರಾಷ್ಟ್ರದ ಹಿತಾಸಕ್ತಿ ಕಾಪಾಡಿ-ಹುಗೊ
webdunia
PTI
ದೇಶದ ಬೃಹತ್ ಉಕ್ಕು ಉತ್ಪಾದನಾ ಕಂಪೆನಿ ಮತ್ತು ಖಾಸಗಿ ಬ್ಯಾಂಕುಗಳು ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡದಿದ್ದರೆ ರಾಷ್ಟ್ರೀಕರಣ ಮಾಡುವುದಾಗಿ ಎಡಪಂಥಿಯ ನಾಯಕ ಮತ್ತು ವೆನೆಜುಲಿಯನ್‌ ಅಧ್ಯಕ್ಷ ಹುಗೊ ಛಾವೆಜ್‌ ಅವರು ರಾಷ್ಟೀಯ ದೂರದರ್ಶನದಲ್ಲಿ ಗುರುವಾರ ಮಾತನಾಡಿ, ಕಂಪೆನಿ ಮತ್ತು ಬ್ಯಾಂಕುಗಳಿಗೆ ಬೆದರಿಕೆ ಹಾಕಿದ್ದಾರೆ.

ಉಕ್ಕು ಉತ್ಪಾದನಾ ಕಂಪೆನಿಯು ದೇಶಿಯ ಬಳಕೆಗೆ ಆದ್ಯತೆ ನೀಡಬೇಕು. ವಿಶೇಷವಾಗಿ ಆಯಿಲ್‌ ಉತ್ಪಾದನಾ ಕೈಗಾರಿಕೆಗಳಿಗೆ ತನ್ನ ಉತ್ಪಾದನೆಗಳನ್ನು ಮಾರಬೇಕು ಎಂದಿರುವ ಅವರು, ವಿದೇಶಗಳಿಗೆ ಉಕ್ಕು ರಫ್ತು ಮಾಡಿದರೆ ಅಂಥ ಕಂಪೆನಿಗಳನ್ನು ರಾಷ್ಟ್ರೀಕರಣ ಮಾಡಲಾಗುವುದು ಎಂದು ಗುಡುಗಿದ್ದಾರೆ.

ಹಾಗೆಯೇ ದೇಶಿಯ ಕೈಗಾರಿಕೆ ಮತ್ತು ಕಂಪೆನಿಗಳಿಗೆ ಹಣಕಾಸಿನ ನೆರವು ನೀಡಲು ಖಾಸಗಿ ಬ್ಯಾಂಕಗಳು ಮುಂದಾಗಬೇಕು. ಒಂದು ವೇಳೆ ತಮ್ಮ ಆದ್ಯತೆಯನ್ನು ಬದಲಿಸದಿದ್ದರೆ ಕಾನೂನು ಮೂಲಕ ಉದ್ದೇಶಿತ ಗುರಿಯನ್ನು ಸಾಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಮತ್ತಷ್ಟು
ದಕ್ಷಿಣ ಭಾರತದಲ್ಲಿ ಅವಿವ ಕಾರ್ಯನಿರ್ವಹಣಾ ವಿಸ್ತರಣೆ
ಪ್ಲಾಂಟೆಶನ್‌ ವಲಯದಲ್ಲಿ 8,000 ಕೋ ರೂ ಹೂಡಿಕೆ
ಭಾರತದಲ್ಲಿ 3 ಪಾಕ್ ಬ್ಯಾಂಕು ತನ್ನ ಶಾಖೆ ತೆರೆಯಲು ಉತ್ಸುಕ
ಭಾರತಕ್ಕೆ ಪಾಕ್ ಗೋಧಿ
ಅನಿಲ ಮಾರಾಟ ಮಾಡದಂತೆ ನ್ಯಾಯಾಲಯ ತೀರ್ಪು