ಭಾರತದಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಸುಮಾರು 6,000 ಕೋಟಿ ರೂಪಾಯಿ ಇತರೆ ಹೆಚ್ಚುವರಿ ಹಣವನ್ನು ಬ್ಯಾಂಕ್‌ಗಳು ಕಾರ್ಡ್‌ದಾರರಿಂದ ಪಡೆದುಕೊಂಡಿವೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ತಡ ಶುಲ್ಕ, ಅಡ್ವಾನ್ಸ್ ಶುಲ್ಕ, ಬಿಲ್ ಶುಲ್ಕ, ಓವರ್ ಲಿಮಿಟ್ ಶುಲ್ಕ, ಹಣ ಪಡೆದ ಶುಲ್ಕ, ಚೆಕ್ ಪಡೆದ ಶುಲ್ಕ, ಸೇವಾ ಶುಲ್ಕ ಹೀಗೆ ಹಲವಾರು ರೀತಿಯಲ್ಲಿ ಬ್ಯಾಂಕುಗಳು ಕಾರ್ಡುದಾರರಿಂದ ಹಣ ಪಡೆದುಕೊಂಡಿವೆ ಎಂದು ಭಾರತೀಯ ಕ್ರೆಡಿಟ್ ಕಾರ್ಡುದಾರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ ವಿ ಗಿಡಪ್ಪ ಅವರು ಚೆನ್ನೈನಲ್ಲಿ ಹೇಳಿದ್ದಾರೆ.
1992 ರಲ್ಲಿ ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಪರಿಚಯಿಸಲಾಯಿತು. ಅಂದಿನಿಂದ ಇಂದಿನವರೆಗೂ ಎಲ್ಲ ಖಾಸಗಿ ಮತ್ತು ರಾಷ್ಟ್ರೀಕರಣ ಬ್ಯಾಂಕಗಳ ಅಡಾವೆ ಪತ್ರಿಕೆಯಲ್ಲಿ ನಮೂದಿಸಲಾದ ಬಡ್ಡಿ ಆದಾಯ ಮತ್ತು ಬಡ್ಡಿಯೇತರ ಆದಾಯವನ್ನು ಪರೀಕ್ಷಿಸಲಾಗುವುದು ಎಂದು ಗಿಡಪ್ಪ ಹೇಳಿದ್ದಾರೆ.
ಬ್ಯಾಂಕುಗಳು ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ಮರಳಿ ಕಾರ್ಡುದಾರರಿಗೆ ನೀಡುವಂತೆ ಆಗ್ರಹಿಸಿ ಸಂಘವು ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದೆ. ಕಾರ್ಡ್ ವ್ಯವಹಾರದಲ್ಲಿ ಸರಾಸರಿ ಬಡ್ಡಿ ದರ ಮತ್ತು ಸಾಲದ ಮೇಲಿನ ದರವು ಜಗತ್ತಿನಲ್ಲಿಯೇ ಭಾರತದಲ್ಲಿ ಹೆಚ್ಚಾಗಿದೆ ಎಂದು ಅವರು ಹೇಳಿದರು.
|