ವಿದೇಶಿ ರಾಷ್ಟ್ರಗಳು ಒದಗಿಸುವ ಆರ್ಥಿಕ ನೆರವನ್ನು ಭಾರತದ ದಕ್ಷಿಣಾತ್ಯ ರಾಜ್ಯಗಳಲ್ಲಿರುವ ಸಂಘ ಸಂಸ್ಥೆಗಳು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತದ ಎರಡು ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳಿಗೆ ಜಪಾನ್ ಸರ್ಕಾರ ತನ್ನ ಅನುದಾನವನ್ನು ವಿಸ್ತರಿಸಿದೆ.
ಜಪಾನ್ ಸರ್ಕಾರದ ಪ್ರತಿನಿಧಿ ಯೋಶಿಯಕಿ ಕೊಡಕಿ ಅವರ ಉಪಸ್ಥಿತಿಯಲ್ಲಿ ಬೆಂಗಳೂರು ಮೂಲದ ಸಮೂಹಸಂಸ್ಥೆ, ತಮಿಳು ನಾಡಿನ ಮದುರೈ ಜಿಲ್ಲೆಯ ನಾನ್ ಬನ್ ಸಂಸ್ಥೆ ಆಯ್ಕೆಯಾಗಿವೆ. ಪ್ರಸ್ತುತ ಸಂಸ್ಥೆಗಳು ನಿರ್ಧಿಷ್ಟ ಯೋಜನೆಗಳಿಗಾಗಿ ಜಪಾನ್ ಸರ್ಕಾರ ಅನುದಾನ ಒಪ್ಪಂದಕ್ಕೆ ಸಹಿ ಹಾಕಿವೆ.
ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಅಂಗವಿಕಲರ ಹಾಗೂ ಹಿಂದುಳಿತ ವರ್ಗಗಳ ಏಳಿಗೆಗಾಗಿ ದುಡಿಯುತ್ತಿರುವ ಸುಮುಖ ಸಂಸ್ಥೆಗೆ ಜಪಾನ್ ಸರ್ಕಾರ 88,433 ಅಮೆರಿಕನ್ ಡಾಲರ್ ಆರ್ಥಿಕ ಸಹಾಯವನ್ನು ನೀಡಿದೆ.
ತಮಿಳುನಾಡಿನ ಮದುರೈನಲ್ಲಿ ಬೀದಿ ಬದಿಯ ಯುವಕರಿಗಾಗಿ ಆಟೋಮೊಬೈಲ್ ತರಬೇತಿ ನೀಡುತ್ತಿರುವ ನಾನ್ಬನ್ ಸಂಸ್ಥೆಗೆ 81,028 ಅಮೆರಿಕನ್ ಡಾಲರ್ ಆರ್ಥಿಕ ಸಹಾಯ ಪಡೆದಿದೆ.
ಸುಮುಖ ನಡೆಸುತ್ತಿರುವ ಸೇವಾ ಮತ್ತು ಸಂಶೋಧನಾ ಕೇಂದ್ರದಿಂದ ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಅಂಗವಿಕಲರು, ರೈತರು ಹಾಗೂ ಇತರೆ ಸಮುದಾಯದ ಮಂದಿ ಸಹಾಯ ಪಡೆಯುತ್ತಿದ್ದಾರೆ.
200ಕ್ಕೂ ಹೆಚ್ಚು ಯುವಕರು ನಾನ್ ಬನ್ ನಡೆಸುತ್ತಿರುವ ಆಟೋಮೊಬೈಲ್ ತರಬೇತಿಯ ಲಾಭ ಪಡೆಯುತ್ತಿದ್ದಾರೆ.
|