ಮುಖ್ಯ ಪುಟ  ಸುದ್ದಿ ಜಗತ್ತು  ವ್ಯವಹಾರ  ವಾಣಿಜ್ಯ ಸುದ್ದಿ
 
ಕಯರ್ ಫೆಡ್ ಲಾಂಛನದಡಿ ತೆಂಗಿನ ನಾರಿನ ಹಾಸುಗೆ
ರಾಜ್ಯದ ಕಯರ್ ಫೆಡ್‌ ಲಾಂಛನದ ತೆಂಗಿನ ನಾರಿನ ಹಾಸುಗೆ ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ರಾಜ್ಯ ತೆಂಗಿನ ನಾರಿನ ಮಹಾ ಮಂಡಳ ನಿಯಮಿತ ಸಂಸ್ಥೆಯಿಂದ ಇದೇ ಪ್ರಥಮ ಬಾರಿಗೆ ಈ ಉತ್ಪನ್ನವನ್ನು ತಯಾರಿಸಲಾಗಿದೆ.

ಪ್ರಸ್ತುತ ತೆಂಗಿನ ನಾರಿನ ಹಾಸುಗೆಯು, ರಬ್ಪರೈಸ್ಡ್‌ ಕಯರ್‌ ಮ್ಯಾಟ್ರೆಸ್‌ ಎಂಬ ವಾಣಿಜ್ಯಿಕ ಹೆಸರನ್ನು ಹೊಂದಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಈ ಹಾಸುಗೆಗೆ ಕಯರ್‌ ಫೆಡ್‌ ಲಾಂಛನವಿರುತ್ತದೆ ಎಂಬುದು ವಿಶೇಷ.ರಾಜ್ಯದಲ್ಲಿ ತೆಂಗಿನ ನಾರಿನ ವಸ್ತುಗಳ ಮಾರಾಟ ಮಳಿಗೆಯು ಇದೀಗ ಒಟ್ಟು 19ರಷ್ಟಿವೆ.

ತೆಂಗಿನ ಸಿಪ್ಪೆಯನ್ನು ಸಂಸ್ಕರಿಸಿ ಅದರಿಂದ ನಾರನ್ನು ಪಡೆಯುವ ಉದ್ಯಮವನ್ನು ಈ ರೀತಿಯ ಉತ್ಪನ್ನಗಳ ತಯಾರಿಸುವ ಮೂಲಕ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಕರಾವಳಿಯ ಗ್ರಾಮೀಣಭಾಗಗಳಲ್ಲಿ ತೆಂಗಿನ ನಾರು ಉದ್ಯಮ ಗುಡಿ ಕೈಗಾರಿಕೆಯಾಗಿಯೂ ಬೆಳೆಸಲು ಅವಕಾಶವಿದೆ. ಇದನ್ನವಲಂಬಿಸಿ ಈಗಾಗಲೇ ಸಾವಿರಾರು ಮಂದಿ ಬದುಕು ಸಾಗಿಸುತ್ತಿದ್ದಾರೆ.

ಕೇರಳದಲ್ಲಿ ತೆಂಗಿನ ನಾರಿನ ಉದ್ಯಮವು ವಿಪುಲವಾಗಿ ಬೆಳದಿರುವುದರೊಂದಿಗೆ ಲಕ್ಷಾಂತರ ಮಂದಿ, ವಿಶೇಷವಾಗಿ ಬಡಜನತೆ ಇದನ್ನವಲಂಬಿಸಿ ಬದುಕುತ್ತಿದ್ದಾರೆ. ಇದೀಗ ರಾಜ್ಯವೂ ಕೇರಳದ ಮಾದರಿಯಲ್ಲಿ ಕಯರ್‌ ಉದ್ಯಮ ವಿಸ್ತರಿಸಲು ನಿರ್ಧರಿಸಿದೆ. ತನ್ಮೂಲಕ ಕೇಂದ್ರದಿಂದ ಕೇರಳ ಮಾದರಿಯಲ್ಲೇ ಗರಿಷ್ಠ ಸಹಾಯಧನ ಪಡೆಯಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಕಯರ್‌ಫೆಡ್‌ (ತೆಂಗಿನ ನಾರಿನ ಮಹಾ ಮಂಡಳ) ಇದೀಗ ಉತ್ತಮ ರೀತಿಯಲ್ಲಿ ವ್ಯವಹರಿಸುತ್ತಿದೆ. ಗೃಹೋದ್ಯಮಮವಾಗಿ ತೆಂಗಿನ ನಾರು ತಯಾರಿಸುವ ವಿಧಾನ ವಿಸ್ತರಿಸುವುದರೊಂದಿಗೆ ಇದರ ಲಾಭಾಂಶ ಹೆಚ್ಚಿದೆ. ತೆಂಗಿನ ನಾರು ಉದ್ಯಮವು ಇದೀಗ ಕೇಂದ್ರ ಸರ್ಕಾರದ ಸಹಾಯ ಧನದ ನೆರವನ್ನೂ ನಿರೀಕ್ಷಿಸಲು ನೆರೆಯ ರಾಜ್ಯಗಳೊಂದಿಗೆ ಸ್ಪರ್ಧಿಸುತ್ತಿರುವುದು ಆಶಾದಾಯಕ ಬೆಳವಣಿಗೆ.
ಮತ್ತಷ್ಟು
ವಿದೇಶಿ ಅನುದಾನಕ್ಕೆ ದೇಶಿ ಸಂಸ್ಥೆಗಳ ಸ್ಪರ್ಧೆ
ಹೆಚ್ಚುವರಿ ಹಣ ಪಡೆದ ಬ್ಯಾಂಕುಗಳು
ರಾಷ್ಟ್ರದ ಹಿತಾಸಕ್ತಿ ಕಾಪಾಡಿ-ಹುಗೊ
ದಕ್ಷಿಣ ಭಾರತದಲ್ಲಿ ಅವಿವ ಕಾರ್ಯನಿರ್ವಹಣಾ ವಿಸ್ತರಣೆ
ಪ್ಲಾಂಟೆಶನ್‌ ವಲಯದಲ್ಲಿ 8,000 ಕೋ ರೂ ಹೂಡಿಕೆ
ಭಾರತದಲ್ಲಿ 3 ಪಾಕ್ ಬ್ಯಾಂಕು ತನ್ನ ಶಾಖೆ ತೆರೆಯಲು ಉತ್ಸುಕ