ಮುಖ್ಯ ಪುಟ  ಸುದ್ದಿ ಜಗತ್ತು  ವ್ಯವಹಾರ  ವಾಣಿಜ್ಯ ಸುದ್ದಿ
 
ರಿಯಲ್ ಎಸ್ಟೇಟ್‌ಗೆ ಹೊರ ಸಾಲ ಕಡಿತ : ಚಿದಂಬರಂ
webdunia
Chidamabaram
PTI
ಹೊರ ವಾಣಿಜ್ಯ ಸಾಲಗಳ ಮೇಲಿನ ನಿರ್ಬಂಧಗಳ ಮೂಲಕ ರಿಯಲ್ ಎಸ್ಟೇಟ್ ವಲಯಕ್ಕೆ ವಿದೇಶಿ ಸಾಲ ಹರಿದುಬರುವುದನ್ನು ತಡೆಯುವ ಗುರಿ ಹೊಂದಿರುವುದಾಗಿ ಸರಕಾರ ಹೇಳಿದೆ.

ಇಸಿಬಿಗಳನ್ನು ಶುಕ್ರವಾರ ಏರಿಸುವ ಮೂಲಕ ಏಕೀಕೃತ ಟೌನ್‌ಶಿಪ್‌ಗಳನ್ನು ಸ್ಥಾಪಿಸುವುದನ್ನು ಹಣಕಾಸು ಸಚಿವಾಲಯ ತಡೆಹಿಡಿದಿದೆ ಹಾಗೂ ಅಂತಹ ಸಾಲಗಳ ಮೇಲಿನ ಬಡ್ಡಿದರಗಳ ಸೀಲಿಂಗ್‌ಗಳನ್ನು ಕಡಿಮೆಗೊಳಿಸುವುದರೊಂದಿಗೆ ಈ ಎರವಲುಗಳನ್ನು ಏರಿಸುವುದರೊಂದಿಗೆ ಸಣ್ಣ ಸ್ಪರ್ಧಿಗಳಿಗೆ ಕಷ್ಟವಾಗಿಸಿದೆ.

ಈ ಅಂತರವನ್ನು ಈಗ ಸಂಕುಚಿತಗೊಳಿಸಲಾಗಿದ್ದು, ರಿಯಲ್ ಎಸ್ಟೇಟ್ ವಲಯಕ್ಕೆ ಹೊರ ಸಾಲದ ಹರಿವನ್ನು ನಿಧಾನಗೊಳಿಸಲಾಗುವುದು ಎಂದು ಹಣಕಾಸು ಸಚಿವ ಪಿ ಚಿದಂಬರಂ ವರದಿಗಾರರಿಗೆ ತಿಳಿಸಿದರು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ, ಏಪ್ರಿಲ್ 2006-ಫೆಬ್ರುವರಿ 2007ರ ಅವಧಿಯಲ್ಲಿ ಇಸಿಬಿಗಳ ಮೂಲಕ, ಸುಮಾರು 812 ಕಂಪನಿಗಳು 20.24 ಬಿಲಿಯನ್ ಡಾಲರ್‌ಗಳನ್ನು ಏರಿಸಿದೆ.