ದೇಶದ ಆಂತರಿಕ ಸೌಲಭ್ಯಗಳೆಡೆಗೆ ಹೆಚ್ಚು ಗಮನ ಹರಿಸುವುದರಿಂದ ಮಾತ್ರ ಭಾರತ ತನ್ನ ಆರ್ಥಿಕತೆಯನ್ನು ಇನ್ನಷ್ಟು ಸಬಲಗೊಳಿಸಲು ಸಾಧ್ಯ ಎಂದು ವಿಶ್ವ ವ್ಯಾಪಾರ ಒಕ್ಕೂಟ ತಿಳಿಸಿದೆ.
2001-02ರಿಂದ ಭಾರತದ ಆರ್ಥಿಕ ಪ್ರಗತಿ ಏರುತ್ತಲ್ಲಿದ್ದು, ತನ್ನಲ್ಲಿರುವ ಸೂಪ್ತ ಶಕ್ತಿಯನ್ನು ಹೊರಗೆಡುವಬೇಕೆಂದರೆ ಮೊದಲು ಆಂತರಿಕ ಸೌಲಭ್ಯಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.
ಒಟ್ಟಾರೆಯಾಗಿ ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆಯತ್ತ ಮುನ್ನುಗ್ಗುತ್ತಿದ್ದು 2006-07ರಲ್ಲಿ ಶೇಕಡಾ 9ರಷ್ಟು ಅಭಿವೃದ್ಧಿಯಲ್ಲಿ ಹೆಚ್ಚಳ ಸಾಧಿಸುವ ಸಾಧ್ಯತೆಯಿದೆ ಎಂದು ಡಬ್ಲೂ.ಟಿ.ಒ ತನ್ನ ಪರಾಮರ್ಷೆಯಲ್ಲಿ ಹೇಳಿದೆ.
ಸಾರಿಗೆ ವ್ಯವಸ್ಥೆ ಮತ್ತು ವಿದ್ಯುತ್ಚಕ್ತಿ ಕ್ಷೇತ್ರಗಳಲ್ಲಿ ದೇಶ ಹೆಚ್ಚು ಗಮನ ಹರಿಸಿದರೆ ಇನ್ನಷ್ಟು ವಿದೇಶಿ ಬಂಡವಾಳಗಾರರನ್ನು ಆಕರ್ಷಿಸಬಹುದೆಂದು ಅದು ಭಾರತಕ್ಕೆ ಸಲಹೆ ನೀಡಿದೆ.
|