ಜಗತ್ತಿನ ತ್ವರಿತ ಪ್ರಗತಿಯ ದೇಶಗಳಲ್ಲೊಂದಾದ ಭಾರತವನ್ನು ಧನಾತ್ಮಕ ದೃಷ್ಟಿಕೋನದಿಂದ ನೋಡಬೇಕೆಂದು ಭಾರತದ ನಾಗರಿಕ ವಿಮಾನಯಾನ ಖಾತೆಯ ಸಚಿವ ಪ್ರಫುಲ್ ಪಟೇಲ್ ವಿದೇಶಿಯರಿಗೆ ಕರೆ ನೀಡಿದ್ದಾರೆ.
ಅವರು ಲಂಡನ್ನಿನ ಇಂಡಿಯಾ ಬ್ಯೂಸಿನೆಸ್ ಪೊರಮ್ ಹಮ್ಮಿಕೊಂಡಿದ್ದ 'ಇಂಡಿಯನ್ ಇನ್ಪಾಸ್ಟ್ರಕ್ಚರ್- ದ ವೇ ಪಾರವರ್ಡ್' ಎನ್ನುವ ಒಂದು ದಿನ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಜಗತ್ತಿನ ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲವೆಂದು ಪಟೇಲ್ ಹೆಮ್ಮೆಯಿಂದ ಹೇಳಿದರು.
ಭಾರತದ ಬೆಳವಣಿಗೆಯನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡುವ ಮೂಲಕ ಭಾರತದ ಅಬಿವೃದ್ಧಿ ಕಾರ್ಯದಲ್ಲಿ ಭಾಗವಹಿಸುವಂತೆ ಬ್ರಿಟನ್ನಿನ ಬಂಡವಾಳಗಾರರಿಗೆ ಪಟೇಲ್ ಕರೆ ನೀಡಿದರು.
|