ಮುಖ್ಯ ಪುಟ  ಸುದ್ದಿ ಜಗತ್ತು  ವ್ಯವಹಾರ  ವಾಣಿಜ್ಯ ಸುದ್ದಿ
 
ವ್ಯಾಪಾರ ಕುರಿತಾಗಿ ಅಮೆರಿಕಕ್ಕೆ ಚೀನಾ ಎಚ್ಚರಿಕೆ
webdunia
Flag
PTI
ವ್ಯಾಪಾರ ರಂಗದಲ್ಲಿ ಪ್ರಗತಿ ಪಥದಲ್ಲಿರುವ ತಮಗೆ ಅಮೆರಿಕ ತೊಡರುಗಾಲು ಹಾಕುತ್ತಿದೆ, ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲವೆಂದು ಚೀನಾ, ಅಮೆರಿಕವನ್ನು ಎಚ್ಚರಿಸಿದೆ.

ವ್ಯಾಪಾರ ಕ್ಷೇತ್ರದಲ್ಲಿ ಎರಡು ರಾಷ್ಟ್ರಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದು ಇದರಿಂದ ಇಬ್ಬರಿಗೂ ಉತ್ತಮ ಭವಿಷ್ಯವಿಲ್ಲವೆಂದು 'ಚೀನಾ ಡೇಲಿ' ತಿಳಿಸಿದೆ.

ಚೀನಾದ ಆರ್ಥಿಕತೆ ಪ್ರಮುಖವಾಗಿ ಉತ್ಪನ್ನಗಳ ರಫ್ತಿನ ಮೇಲೆಯೇ ಅವಲಂಬಿತವಾಗಿದ್ದು, ಅಮೆರಿಕಾ ಇದಕ್ಕೆ ತೊಡರುಗಾಲು ಹಾಕುತ್ತಿರುವುದರಿಂದ ವ್ಯಾಪಾರ ಕ್ಷೇತ್ರಗಳಲ್ಲಿ ಎರಡು ರಾಷ್ಟ್ರಗಳ ಸಂಬಂಧ ಹದಗೆಡುವ ಸಾಧ್ಯತೆಗಳಿವೆ ಎಂದು ಚೀನಾ ತಿಳಿಸಿದೆ.

ವ್ಯಾಪಾರ ಕ್ಷೇತ್ರದಲ್ಲಿನ ಅಡೆತಡೆಗಳ ನಿವಾರಣೆಗಾಗಿ ಉಭಯ ರಾಷ್ಟ್ರಗಳು ವಾಶಿಂಗ್ಟನ್‌ನಲ್ಲಿ ನಡೆದ ಮಾತುಕತೆ ಮುರಿದು ಬಿದ್ದಿದ್ದು, ಇದರಿಂದ ಎರಡು ರಾಷ್ಟ್ರಗಳ ಮಧ್ಯೆ ಇನ್ನಷ್ಟು ಬಿರುಕುಂಟಾಗುವ ಸಾಧ್ಯತೆಗಳಿವೆ.
ಮತ್ತಷ್ಟು
ಪ್ರಗತಿಗೆ ಧನಾತ್ಮಕ ದೃಷ್ಟಿಕೋನ: ಪಟೇಲ್
ಭಾರತ ಆಂತರಿಕ ಸೌಲಭ್ಯ ಹೆಚ್ಚಳಕ್ಕೆ ಡಬ್ಲೂಟಿಒ ಸೂಚನೆ
ಚ್‌ಸಿಎಲ್‌ನಿಂದ ವ್ಯಕ್ತಿತ್ವ ವಿಕಸನ ಕೇಂದ್ರ ಸ್ಥಾಪನೆ
ರಿಯಲ್ ಎಸ್ಟೇಟ್‌ಗೆ ಹೊರ ಸಾಲ ಕಡಿತ : ಚಿದಂಬರಂ
ಕಯರ್ ಫೆಡ್ ಲಾಂಛನದಡಿ ತೆಂಗಿನ ನಾರಿನ ಹಾಸುಗೆ
ವಿದೇಶಿ ಅನುದಾನಕ್ಕೆ ದೇಶಿ ಸಂಸ್ಥೆಗಳ ಸ್ಪರ್ಧೆ