ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ನಿಯಂತ್ರಣಕ್ಕೆ ಕಾಲಾವಕಾಶ ಬೇಕು
ನಿರಂತರವಾಗಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರಕಾರ ಕ್ರಮಗಳನ್ನು ಕೈಗೊಂಡಿದೆ ಎಂದು ನುಡಿದಿರುವ ಪ್ರಧಾನಿ ಮನಮೋಹನ್ ಸಿಂಗ್ ಈ ಕ್ರಮಗಳು ಫಲ ನೀಡಲು ಸಮಯಾವಕಾಶ ಬೇಕಿದೆ ಎಂದು ಹೇಳಿದ್ದಾರೆ.

ನಾವು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಈ ಕ್ರಮಗಳು ಪ್ರಭಾವ ಬೀರಲು ಕಾಲವಕಾಶದ ಅಗತ್ಯವಿದೆ ಎಂದು ಏರುತ್ತಿರುವ ಹಣದುಬ್ಬರದ ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ತಿಳಿಸಿದರು.

ಎಲ್ಲವೂ ಸರಿಹೋಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿಜ ಅವರು ದೇಶದ ಕೃಷಿ ಪರಿಸ್ಥಿತಿಯು ಉತ್ತಮವಾಗಿದ್ದು, ಈ ವರ್ಷ 227 ದಶಲಕ್ಷ ಟನ್ ದಾಖಲೆಯ ಆಹಾರೋತ್ಪನ್ನಗಳು ಉತ್ಪತ್ತಿಯಾಗಿವೆ ಎಂದು ಅವರು ಹೇಳಿದರು.

ನಾವು ಗೋಧಿ, ಅಕ್ಕಿ, ಖಾದ್ಯ ತೈಲ ಮತ್ತು ಬೇಳೆಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಯಶಸ್ವೀಯಾಗಿದ್ದೇವೆ ಎಂದು ಪ್ರಧಾನಿ ತಿಳಿಸಿದರು.

ಏಪ್ರಿಲ್ 19 ರಂದು ಅಂತ್ಯಗೊಂಡ ವಾರದಲ್ಲಿ ತರಕಾರಿ, ಆಹಾರ ವಸ್ತುಗಳು, ಉಕ್ಕು ಮತ್ತು ಕೆಲವು ಇಂಧನ ಸಾಮಗ್ರಿಗಳ ಬೆಲೆ ಏರಿಕೆ ಆಗಿರುವ ಕಾರಣ, ಹಣದುಬ್ಬರವು ಕಳೆದ 42 ತಿಂಗಳಲ್ಲಿ ಗರಿಷ್ಠ ಶೇ.7.57 ರಷ್ಟು ದಾಖಲೆಯಾಗಿದೆ. ಇದರಿಂದಾಗಿ ಸರಕಾರ ಮಿತ್ರ ಪಕ್ಷಗಳಿಂದ ಮತ್ತು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿದೆ.
ಮತ್ತಷ್ಟು
ವಿದೇಶಕ್ಕೆ ಪಶ್ಚಿಮ ಬಂಗಾಳದ ಚಹ ರಫ್ತು
ಆಹಾರ ಬೆಲೆ ಗಮನಕ್ಕೆ ಸಿಐಐ ಕಾರ್ಯಪಡೆ
ಎಲ್&ಟಿಗೆ ಪಿಜಿಸಿಐಎಲ್‌ನಿಂದ 344 ಕೋ ರೂ. ಗುತ್ತಿಗೆ
ಎಸ್‌ಬಿಐ ಬಡ್ಡಿ ದರ ಏರಿಕೆ
ಮೂಲಸೌಕರ್ಯ ವೃದ್ಧಿಗೆ ಸಾರ್ವಜನಿಕ ವಲಯದ ಕೊಡುಗೆ
ಯೂಹೂ ಖರೀದಿಯಿಂದ ಮೈಕ್ರೋಸಾಫ್ಟ್ ಹಿಂತೆಗೆತ