ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಾಹೂ ಶೇರು ಬೆಲೆಯಲ್ಲಿ ಶೇ.16 ಕುಸಿತ
ಯಾಹೂ ಖರೀದಿ ಪ್ರಸ್ತಾಪದಿಂದ ಮೈಕ್ರೋ ಸಾಫ್ಟ್ ಕಂಪನಿಯು ತನ್ನ ಬಿಡ್‌ ಹಿಂಪಡೆದ ಬಳಿಕ, ಸೋಮವಾರ ಯಾಹೂ ಶೇರು ಬೆಲೆಯಲ್ಲಿ ಶೇ.16ರಷ್ಟು ಕುಸಿತ ಕಂಡಿದೆ. ಅಂತರ್ಜಾಲ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಯಾಹುವನ್ನು 47.5 ಶತಕೋಟಿ ಡಾಲರ್‌ಗೆ ಖರೀದಿಸಲು ಮೈಕ್ರೋಸಾಫ್ಟ್ ಮುಂದಾಗಿದ್ದರೂ, ಮೌಲ್ಯ ನಿರ್ಧಾರದಲ್ಲಿ ಒಮ್ಮತಕ್ಕೆ ಬರಲು ವಿಫಲವಾಗಿರುವ ಕಾರಣ ಮೈಕ್ರೋ ಸಾಫ್ಟ್ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿತ್ತು.

ಅಂತರ್ಜಾಲ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ಗೂಗಲ್‌ಗೆ ಅಂತರ್ಜಾಲ ಜಾಹಿರಾತು ಮತ್ತು ಸರ್ಚ್ ಇಂಜಿನ್‌ನ ಮೂಲಕ ನೇರವಾಗಿ ಸಾವಾಲೊಡ್ಡುವ ಸಲುವಾಗಿ, ಮೈಕ್ರೋಸಾಫ್ಟ್ ಕಳೆದ ಜನವರಿ 31ರಂದು ಯಾಹೂ ಕಂಪನಿಯನ್ನು ಖರೀದಿಸಲು ಸುಮಾರು 47.5 ಶತಕೋಟಿ ಡಾಲರ್‌ನಷ್ಟು ಬಿಡ್ ಮಾಡಿತ್ತು. ಯಾಹು ಮತ್ತು ಮೈಕ್ರೋ ಸಾಫ್ಟ್ ನಡುವೆ ಕಳೆದ ಶನಿವಾರದಂದು ನಡೆದ ಮಾತುಕತೆಯು ವಿಫಲವಾದ ಹಿನ್ನಲೆಯಲ್ಲಿ ಮೈಕ್ರೋಸಾಫ್ಟ್ ತಾನು ಮಾಡಿದ ಬಿಡ್ ಅನ್ನು ಹಿಂದೆ ತೆಗೆದುಕೊಂಡಿತು.

ಸೋಮವಾರದ ಶೇರು ವಹಿವಾಟಿನಲ್ಲಿ ಯಾಹೂ ಶೇರಿನ ಬೆಲೆಯಲ್ಲಿ ಶೇ.16 ಕುಸಿತ ಕಂಡಿತ್ತು.
ಮತ್ತಷ್ಟು
ಅನಿಲ ಕೊಳವೆ ಜಾಲದಲ್ಲಿ ಹಿಂದುಳಿದ ಭಾರತ: ಅಸೋಚಮ್
ಹಣದುಬ್ಬರ ನಿಯಂತ್ರಣಕ್ಕೆ ಕಾಲಾವಕಾಶ ಬೇಕು
ವಿದೇಶಕ್ಕೆ ಪಶ್ಚಿಮ ಬಂಗಾಳದ ಚಹ ರಫ್ತು
ಆಹಾರ ಬೆಲೆ ಗಮನಕ್ಕೆ ಸಿಐಐ ಕಾರ್ಯಪಡೆ
ಎಲ್&ಟಿಗೆ ಪಿಜಿಸಿಐಎಲ್‌ನಿಂದ 344 ಕೋ ರೂ. ಗುತ್ತಿಗೆ
ಎಸ್‌ಬಿಐ ಬಡ್ಡಿ ದರ ಏರಿಕೆ