ಮೊಬೈಲ್ ಮೂಲಕ ನಿಧಿ ವರ್ಗಾವಣೆ ಮಾಡುವ ನೂತನ ಸೇವೆಯನ್ನು ಎಚ್‌ಡಿಎಫ್‌ಸಿ ಬ್ಯಾಂಕು ಮಂಗಳವಾರ ಆರಂಭಿಸಿದೆ. ಈ ಸೇವೆಯಿಂದಾಗಿ ಎಚ್‌ಡಿಎಫ್‌ಸಿ ಬ್ಯಾಂಕು ದೇಶದಲ್ಲಿ ಪ್ರಥಮ ಬಾರಿಗೆ ಎಲ್ಲಾ ವಾಣಿಜ್ಯ ಸೇವೆಗಳನ್ನು ಮೊಬೈಲ್ ಮೂಲಕ ಪೂರೈಸುವ ಏಕೈಕ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿಕೊಂಡಿದೆ.
ಎಚ್‌ಡಿಎಫ್‌ಸಿ ಬ್ಯಾಂಕಿನ ಗ್ರಾಹಕರು ನೆಟ್ ಬ್ಯಾಂಕಿಂಗ್ ಸೇವೆಯನ್ನು ನೋಂದಾಯಿಸಿದ್ದರೆ, ಈ ಸೇವೆಯ ಅರ್ಜಿಯನ್ನು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡುವ ಮೂಲಕ ತಕ್ಷಣವೇ ನಿಧಿ ವರ್ಗಾವಣೆಯನ್ನು ಮಾಡಬಹುದು ಎಂದು ಬ್ಯಾಂಕ್‌ನ ಮೂಲಗಳು ತಿಳಿಸಿವೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ ಇತರೇ ಬ್ಯಾಂಕ್ ಖಾತೆಗೆ ನಿಧಿಯನ್ನು ವರ್ಗಾವಣೆ ಮಾಡಬೇಕಾದರೆ 48 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಎರಡು ಎಚ್‌ಡಿಎಫ್‌ಸಿ ಖಾತೆಗಳ ನಡುವೆ ತಕ್ಷಣವೇ ನಿಧಿ ವರ್ಗಾವಣೆ ಮಾಡಬಹುದಾಗಿದೆ ಎಂದು ಬ್ಯಾಂಕಿನ ರಾಷ್ಟ್ರೀಯ ಮುಖ್ಯಸ್ಥ ರಾಹುಲ್ ಭಗತ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
|