ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಮಹಾದಿಂದ ನೂತನ 106ಸಿಸಿ ಬೈಕ್ ಬಿಡಗಡೆ
ಜಪಾನಿನ ಪ್ರಮುಖ ದ್ವಿಚಕ್ರ ವಾಹನ ತಯಾರಿಕ ಕಂಪನಿಯಾದ ಯಮಹಾ ಮೋಟಾರ್ ಪ್ರೈ.ಲಿ. ಸಂಸ್ಥೆಯು 106ಸಿಸಿ ಇಂಜಿನ್ ಸಾಮರ್ಥ್ಯದ ನೂತನ ಅಲ್ಬಎಂಬ ಬೈಕನ್ನು ಮಂಗಳವಾರದಂದು ಬಿಡುಗಡೆ ಮಾಡಿದೆ. ದೇಶದಲ್ಲಿ ಈ ಬೈಕಿನ ಎಕ್ಸ್ ಶೋರೂಂ ಬೆಲೆಯು ರೂ. 37,500 ಇದೆ.

ಬೈಕ್ ಸವಾರರಿಗೆ ಹೆಚ್ಚು ಆರಾಮದಾಯಕವನ್ನು ನೀಡುವಂತೆ ಅಲ್ಬ ದ ಆಕಾರವನ್ನು ರೂಪಿಸಲಾಗಿದೆ. ಗ್ರಾಹಕರು ಬೈಕ್ ಸವಾರಿಯ ಹೊಸ ಅನುಭವವನ್ನು ಪಡೆಯಲಿದ್ದಾರೆ ಎಂದು ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ತಕಾಹಿರೊ ಮಹಿದ ಅವರು ವರದಿಯೊಂದರಲ್ಲಿ ತಿಳಿಸಿದ್ದಾರೆ.

ಈ ಬೈಕು ಲೋ ಎಂಡ್ ಟಾರ್ಕ್‌ನ 106ಸಿಸಿ ಇಂಜಿನ್ ಹೊಂದಿರುವುದರಿಂದ, ಇಂಜಿನ್ ಮೇಲೆ ಹೆಚ್ಚು ಒತ್ತಡ ಬೀಳದು ಮತ್ತು ಧೀರ್ಘಾವದಿಯ ಬಾಳಿಕೆ ಬರಲಿದೆ ಎಂದು ಅವರು ಹೇಳಿದರು.

ದಿನ ಬಳಕೆಗೆ ಸಾಹಾಯವಾಗುವಂತೆ ರೂಪಿಸಲಾದ ಈ ಬೈಕ್ ಅನ್ನು ಸವಾರರಿಗೆ ಹೆಚ್ಚು ಆರಾಮದಾಯಕವಾಗಿರುವಂತೆ ಮಾಡಲು ವಿಷೇಶವಾದ ಗಮನಹರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಅಲ್ಬ 106 ಎರಡು ಬಣ್ಣಗಳಾದ ಡೀಪ್ ರೆಡ್ ಮೆಟಾಲಿಕ್ ಮತ್ತು ಯಮಹಾ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
ಮತ್ತಷ್ಟು
ಮೊಬೈಲ್ ಮೂಲಕ ನಿಧಿ ವರ್ಗಾವಣೆಗೆ ಎಚ್‌ಡಿಎಫ್‌ಸಿ ಚಾಲನೆ
ಅಕ್ರಮ ವಲಸಿಗರ ನೇಮಕಾತಿಯ ಯುಕೆ ಕಂಪನಿಗಳಿಗೆ ದಂಡ
ಯಾಹೂ ಶೇರು ಬೆಲೆಯಲ್ಲಿ ಶೇ.16 ಕುಸಿತ
ಅನಿಲ ಕೊಳವೆ ಜಾಲದಲ್ಲಿ ಹಿಂದುಳಿದ ಭಾರತ: ಅಸೋಚಮ್
ಹಣದುಬ್ಬರ ನಿಯಂತ್ರಣಕ್ಕೆ ಕಾಲಾವಕಾಶ ಬೇಕು
ವಿದೇಶಕ್ಕೆ ಪಶ್ಚಿಮ ಬಂಗಾಳದ ಚಹ ರಫ್ತು