ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಮರ್ಥ್ಯದ ಆಧಾರದಲ್ಲಿ ಅಭ್ಯರ್ಥಿ : ಕಿರಿಟ್
ಕಾರ್ಪೋರೇಟ್‌ ಸಂಸ್ಥೆಗಳು ಅಭ್ಯರ್ಥಿಗಳನ್ನು ಕೇವಲ ಅರ್ಹತೆ ಆಧರಿಸಿ ಆಯ್ಕೆ ಮಾಡುವುದರ ಬದಲು ಸಾಮರ್ಥ್ಯವನ್ನು ಆಧರಿಸಿ ಅಯ್ಕೆ ಮಾಡುವ ಧನಾತ್ಮಕ ಕ್ರಿಯೆಗಳನ್ನು ಕೈಗೊಳ್ಳಬಹುದು ಎಂದು ಯೋಜನಾ ಆಯೋಗದ ಸದಸ್ಯ ಕಿರಿಟ್ ಪಾರಿಖ್ ಸಲಹೆ ನೀಡಿದ್ದಾರೆ.

ನಾವು ಅರ್ಹತೆಗೆ ಬದ್ದರಾಗಿದ್ದೇವೆ. ನಾವು ಧನಾತ್ಮಕ ಕ್ರಿಯೆಗೂ ಬದ್ದರಾಗಬೇಕಿದ್ದು, ಖಾಸಗೀ ಸಂಸ್ಥೆಗಳು ಅಭ್ಯರ್ಥಿಗಳನ್ನು ಅವರು ಕೆಲವು ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ಆಯ್ಕೆ ಮಾಡುವುದರ ಬದಲು ಅವರ ಸಾಮರ್ಥ್ಯವನ್ನು ಆಧರಿಸಿ ಅಯ್ಕೆ ಮಾಡಬಹುದು ಎಂದು ಸಿಎಲ್ಆರ್ ಕುರಿತು ಸಿಐಐ ಏರ್ಪಡಿಸಿದ್ದ 2ನೇ ರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ತಿಳಿಸಿದರು.

ಸರಕಾರ ಖಾಸಗೀ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ನೀಡುವಂತೆ ಕಾರ್ಪೋರೇಟ್‌ಗಳ ಮೇಲೆ ಒತ್ತಡ ಹೇರಲು ಪ್ರತಿ ನಿತ್ಯ ಶ್ರಮಿಸುತ್ತಿದೆ. ಆದರೆ ಕಾರ್ಪೋರೇಟ್‌ಗಳು ಸಂಸ್ಥೆಗಳು ಅಭ್ಯರ್ಥಿಗಳನ್ನು ಅವರ ಸಾಮರ್ಥ್ಯದ ಆಧಾರದಲ್ಲಿ ಆಯ್ಕೆ ಮಾಡಿ ಅವರಿಗೆ ಅಗತ್ಯ ತರಬೇತಿ ನೀಡುವ ಕಾರ್ಯ ಕೈಗೊಳ್ಳಬೇಕು ಎಂದು ಪಾರಿಖ್ ಸಲಹೆ ನೀಡಿದ್ದಾರೆ.
ಮತ್ತಷ್ಟು
403 ಟನ್ ಚಿನ್ನ ಮಾರಾಟಕ್ಕೆ ಐಎಂಎಫ್ ಸಮ್ಮತಿ
ವಿದೇಶಿ ಶೇರು ಹೆಚ್ಚಳ ತಡೆಗೆ ಸು.ಕೋ ನಕಾರ
ಸ್ಪೈಸ್ ಟೆಲಿಕಾಂನಿಂದ 'ವಿಸಾ ಸ್ಟೇಟಸ್' ಸೇವೆ ಪ್ರಾರಂಭ
ಯಮಹಾದಿಂದ ನೂತನ 106ಸಿಸಿ ಬೈಕ್ ಬಿಡಗಡೆ
ಮೊಬೈಲ್ ಮೂಲಕ ನಿಧಿ ವರ್ಗಾವಣೆಗೆ ಎಚ್‌ಡಿಎಫ್‌ಸಿ ಚಾಲನೆ
ಅಕ್ರಮ ವಲಸಿಗರ ನೇಮಕಾತಿಯ ಯುಕೆ ಕಂಪನಿಗಳಿಗೆ ದಂಡ