ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ: ಉಕ್ಕು ಬೆಲೆ ಇಳಿಸಲು ತಿರ್ಮಾನ
ನವದೆಹಲಿ: ಉಕ್ಕು ಬೆಲೆ ಏರಿಕೆಯಿಂದಾಗಿ ಹಣದುಬ್ಬರದ ಮೇಲೆ ತೀವ್ರ ಪರಿಣಾಮ ಬೀರುತ್ತಿರುವ ಹಿನ್ನಲೆಯಲ್ಲಿ, ಅಗ್ರ ಉಕ್ಕು ತಯಾರಕರು ಸಮತಲವಾದ ಉತ್ಪನ್ನಗಳಿಗೆ ಪ್ರತಿ ಟನ್ನಿಗೆ 4000 ಸಾವಿರ ರೂ. ಮತ್ತು ಬೆಂಡು ಮಾಡಿರುವ ಉಕ್ಕಿಗೆ 2000 ಸಾವಿರ ರೂ.ಗಳಷ್ಟು ಪ್ರತಿ ಟನ್ನಿಗೆ ಇಳಿಸಲು ಬುಧವಾರದಂದು ನಿರ್ಧರಿಸಿವೆ.

"ಹಣದುಬ್ಬರಕ್ಕೆ ಉಕ್ಕು ವಲಯದ ಕೊಡುಗೆಯ ಕುರಿತ ಸರಕಾರದ ಕಳವಳ ತಮಗೆ ಅರ್ಥವಾಗುತ್ತದೆ. ಪ್ರಮುಖ ಉಕ್ಕು ಉತ್ಪಾದಕರು ಸಮತಲವಾದ ಉಕ್ಕಿಗೆ ಪ್ರತಿ ಟನ್ನಿಗೆ ರೂ. 6000 ಸಾವಿರ ಮತ್ತು ಬೆಂಡಾಗಿರುವ ಉಕ್ಕಿಗೆ ಪ್ರತಿ ಟನ್ನಿಗೆ 2000 ಸಾವಿರ ರೂ.ಗಳನ್ನು ಇಳಿಸಲು ನಿರ್ಧರಿಸಿದ್ದು, ಈ ಬೆಲೆಗಳು ಮುಂದಿನ ಮೂರು ತಿಂಗಳವರೆಗೆ ಸ್ಥಿರವಾಗಿರಲಿದೆ" ಎಂದು ಸರಕಾರಿ ಸ್ವಾಮ್ಯದ ಉಕ್ಕು ಕಂಪನಿ, ಎಸ್ಎಐಎಲ್‌ನ ಮುಖ್ಯಸ್ಥ ಸುಶೀಲ್ ಕುಮಾರ್ ರೂನ್‌ಗ್ತಾ ತಿಳಿಸಿದರು.

ಉಕ್ಕು ಉದ್ಯಮ ನಿಯೋಗದ ಮುಖ್ಯಸ್ಥರು ಪ್ರಧಾನಿ ಮನಮೋಹನ್ ಸಿಂಗ್‌ರನ್ನು ಭೇಟಿ ಮಾಡಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ, ಉಕ್ಕು ಉತ್ಪಾದನೆಗೆ ಅಧಿಕ ವೆಚ್ಚ ತಗುಲುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದು ಅವರು ಈ ಬಗ್ಗೆ ಪರಿಶೀಲಿಸಲಿದ್ದಾರೆ ಎಂದು ರೂನ್‌ಗ್ತಾ ತಿಳಿಸಿದರು.

ಹಣಕಾಸು ಸಚಿವ ಪಿ. ಚಿದಂಬರಂ, ಉಕ್ಕು ಸಚಿವ ರಾಮ್ ವಿಲಾಸ್ ಪಾಸ್ವಾನ್ ಮತ್ತು ಸಂಸದೀಯ ಕಾರ್ಯದರ್ಶಿ ಕೆ.ಎಂ. ಚಂದ್ರಶೇಖರ್ ಅವರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಮತ್ತಷ್ಟು
ಸಾಮರ್ಥ್ಯದ ಆಧಾರದಲ್ಲಿ ಅಭ್ಯರ್ಥಿ : ಕಿರಿಟ್
403 ಟನ್ ಚಿನ್ನ ಮಾರಾಟಕ್ಕೆ ಐಎಂಎಫ್ ಸಮ್ಮತಿ
ವಿದೇಶಿ ಶೇರು ಹೆಚ್ಚಳ ತಡೆಗೆ ಸು.ಕೋ ನಕಾರ
ಸ್ಪೈಸ್ ಟೆಲಿಕಾಂನಿಂದ 'ವಿಸಾ ಸ್ಟೇಟಸ್' ಸೇವೆ ಪ್ರಾರಂಭ
ಯಮಹಾದಿಂದ ನೂತನ 106ಸಿಸಿ ಬೈಕ್ ಬಿಡಗಡೆ
ಮೊಬೈಲ್ ಮೂಲಕ ನಿಧಿ ವರ್ಗಾವಣೆಗೆ ಎಚ್‌ಡಿಎಫ್‌ಸಿ ಚಾಲನೆ