ಅತಿ ಹೆಚ್ಚು ದೇಶಿಯ ಬೇಡಿಕೆ ಮತ್ತು ಆರ್ಥಿಕ ಅಭಿವೃದ್ದಿಯಿಂದಾಗಿ ವಿಶ್ವದ ಅತ್ಯಾಕರ್ಷಕ ಮಾರುಕಟ್ಟೆಗಳಲ್ಲಿ ಭಾರತ ಒಂದಾಗಿದೆ ಎಂದು ಮೆರಿಲ್ ಲಿಂಚ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾನ್ ಎ ಥೇನ್ ಗುರುವಾರ ಹೇಳಿದ್ದಾರೆ.
ಅವಕಾಶಗಳು ಅಂತೆಯೇ ಅಪಾಯಗಳನ್ನು ಪರಿಗಣಿಸಿದರೆ ವಿಶ್ವದಲ್ಲೇ ಭಾರತ ಆಕರ್ಷಿಕ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಥೇನ್ ಮುಂಬೈನಲ್ಲಿ ತಿಳಿಸಿದರು.
ಭಾರತದ ಅತಿ ಹೆಚ್ಚು ಬೇಡಿಕೆ, ಆರ್ಥಿಕಾಭಿವೃದ್ಧಿ, ಜಾಗತಿಕ ಮಟ್ಟದಲ್ಲಿ ಕಾರ್ಪೋರೇಟ್‌ಗಳ ಶಕ್ತಿ ಮತ್ತು ಮೂಲಭೂತ ಸೌಕರ್ಯಕ್ಕಾಗಿ ಅತಿ ಹೆಚ್ಚಿನ ವ್ಯಯವನ್ನು ಗಮನಿಸಿದರೆ, ಭಾರತವು ಅಮೆರಿಕದ ಆರ್ಥಿಕ ಪರಿಸ್ಥಿತಿಯ ನಿಧಾನಗತಿಯಿಂದ ಕಡಿಮೆ ಪರಿಣಾಮ ಹೊಂದಿದೆ ಎಂದು ನುಡಿದರು. ದೇಶೀಯ ಬೆಲೆಗಳ ಇಳಿಕೆ, ಆಹಾರ ಮತ್ತು ಇಂಧನ ಬೆಲೆ ಏರಿಕೆ ಮತ್ತು ಹೆಚ್ಚಿನ ನಿರುದ್ಯೋಗದ ಸಮಸ್ಯೆಯಿಂದಾಗಿ ಅಮೆರಿಕದ ಆರ್ಥಿಕ ವ್ಯವಸ್ಥೆ ಇನ್ನು ಆರು ರಿಂದ 12 ತಿಂಗಳೊಳಗೆ ಕುಸಿಯಲಿದೆ ಎಂದು ಥೇನ್ ಅಭಿಪ್ರಾಯಪಟ್ಟರು.
|