ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ಖರೀದಿಗೆ ದೇಶ ವಿದೇಶ ಕಂಪೆನಿಗಳ ಆಸಕ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ಖರೀದಿಗೆ ದೇಶ ವಿದೇಶ ಕಂಪೆನಿಗಳ ಆಸಕ್ತಿ
PTI
ವಂಚನೆ ಪೀಡಿತ ಸತ್ಯಂ ಕಂಪ್ಯೂಟರ್ ಖರೀದಿಸಲು ದೇಶ ವಿದೇಶದ ಜಾಗತಿಕ ಮಟ್ಟದ ಕಂಪೆನಿಗಳು ಆಸಕ್ತಿ ತೋರಿಸಿವೆ ಎಂದು ಸತ್ಯಂ ಮೂಲಗಳು ತಿಳಿಸಿವೆ.

ಸತ್ಯಂ ಕಂಪೆನಿ ಖರೀದಿಸುವವರ ಸಾಲಿನಲ್ಲಿ ಐಗೇಟ್, ಎಲ್‌ ಆಂಡ್ ಟಿ ಬಿ.ಕೆ ಮೋದಿ ಸಂಚಾಲಿತ ಸ್ಪೈಸ್ ,ಟೆಕ್ ಮಹೇಂದ್ರಾ ಕಂಪೆನಿಗಳು ಸೇರ್ಪಡೆಯಾಗಿವೆ ಎಂದು ಸತ್ಯಂ ಅಡಳಿತ ಮಂಡಳಿಯ ನಿರ್ದೇಶಕರು ತಿಳಿಸಿದ್ದಾರೆ.

ಸತ್ಯಂ ಖರೀದಿಗಾಗಿ ಬಿಡ್‌ದಾರರು ಸಲ್ಲಿಸಿದ ಆರ್ಥಿಕ ದಾಖಲಾತಿ ಮತ್ತಿತರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸತ್ಯಂ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಡ್ ದಾರರು ಮಾರ್ಚ್ 20 ರವರೆಗೆ 1500 ಕೋಟಿ ರೂಪಾಯಿ ಭಧ್ರತೆಯನ್ನು ತೋರಿಸುವ ಅಗತ್ಯವಿದ್ದು ಅರ್ಜಿಗಳ ಪರಿಸೀಲನೆಯ ನಂತರ ಸೂಕ್ತ ಅರ್ಹ ಬಿಡ್‌ದಾರರನ್ನು ಆಯ್ಕೆ ಮಾಡಲಾಗುವುದು ಎಂದು ಸತ್ಯಂ ಅಡಳಿತ ಮಂಡಳಿ ತಿಳಿಸಿದೆ.

ಸತ್ಯಂನ ಪ್ರತಿಯೊಂದು ಹೆಜ್ಜೆಯು ಪಾರ್ದರ್ಶಕವಾಗಿರಲು ಬಿಡ್‌ದಾರರನ್ನು ಆಯ್ಕೆ ಮಾಡಲು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್‌.ಪಿ ಭರೂಚಾ ಅವರನ್ನು ನೇಮಕ ಮಾಡಲಾಗಿದೆ ಎಂದು ಸತ್ಯಂ ಅಡಳಿತ ಮಂಡಳಿಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸತ್ಯಂ, ಖರೀದಿ, ಕಂಪೆನಿ
ಮತ್ತಷ್ಟು
ಐಎಫ್‌ಸಿ:ಭಾರತದಲ್ಲಿ 1.08 ಬಿನ್ ಡಾಲರ್ ಹೂಡಿಕೆ
ಹಣದುಬ್ಬರ ಇಳಿಕೆಯಾಗಿದೆ ದರಗಳಲ್ಲ!
ಪಿರಾಮಿಡ್ ಕಚೇರಿಯ ಮೇಲೆ ಆದಾಯ ತೆರಿಗೆ ದಾಳಿ
ದೇಶದ ಜಿಡಿಪಿ ದರ ಶೇ.6.1ಕ್ಕೆ ಇಳಿಕೆ:ಎಸ್‌ ಆಂಡ್ ಪಿ
ಜಿ-20 ಶೃಂಗಸಭೆ: ಪ್ರಧಾನಿ, ರಂಗರಾಜನ್ ಭೇಟಿ
ವಿದೇಶಿ ವಿನಿಮಯ ಸಂಗ್ರಹ ಕುಸಿತ