ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನೇರ ತೆರಿಗೆ ಸಂಗ್ರಹದಲ್ಲಿ ಶೇ.18 ರಷ್ಟು ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇರ ತೆರಿಗೆ ಸಂಗ್ರಹದಲ್ಲಿ ಶೇ.18 ರಷ್ಟು ಏರಿಕೆ
ಪ್ರಸಕ್ತ ಆರ್ಥಿಕ ಸಾಲಿನ ನೇರ ತೆರಿಗೆ ಸಂಗ್ರಹ ಶೇ.18 ರಷ್ಟು ಏರಿಕೆಯಾಗಿದ್ದು, 296,200 ಕೋಟಿ ರೂ.ಗಳಿಗೆ ತಲುಪಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.

2008-09ರ ಆರ್ಥಿಕ ಸಾಲಿನಲ್ಲಿ ತೆರಿಗೆ ಅಧಿಕಾರಿಗಳಿಗೆ 3,45,000 ಕೋಟಿ ರೂ .ಗಳ ಗುರಿಯನ್ನು ಸಂಗ್ರಹಿಸಲು ಆದೇಶಿಸಲಾಗಿತ್ತು. ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸಕ್ತ ಆರ್ಥಿಕ ಸಾಲಿನಲ್ಲಿ 2,96,200 ಕೋಟಿ ರೂ.ಗಳ ಗುರಿಯನ್ನು ತಲುಪಿ ಶೇ.18 ರಷ್ಟು ಹೆಚ್ಚಿನ ತೆರಿಗೆಯನ್ನು ಸಂಗ್ರಹಿಸಲಾಗಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾರ್ಪೋರೇಟ್ ತೆರಿಗೆಯಲ್ಲಿ ಶೇ.36 ರಷ್ಟು ಹೆಚ್ಚಳವಾಗಿದ್ದು, ನಾನ್-ಕಾರ್ಪೋರೇಟ್ ತೆರಿಗೆಯಲ್ಲಿ ಶೇ.17 ರಷ್ಟು ಏರಿಕೆಯಾಗಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಪರಿಶೋಧಿತ ಗುರಿಯಾದ 3,45,000 ಕೋಟಿ ರೂ.ಗಳ ಗುರಿಯನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ತಲುಪಲಾಗುವುದು. ಪ್ರಸ್ತುತ 49 ಸಾವಿರ ಕೋಟಿ ರೂ.ಗಳ ಕೊರತೆಯನ್ನು ಎದುರಿಸಲಾಗುತ್ತಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೇರ ತೆರಿಗೆ, ಸಂಗ್ರಹ, ಏರಿಕೆ
ಮತ್ತಷ್ಟು
ಫಾರೆಕ್ಸ್ : ರೂಪಾಯಿ ಮೌಲ್ಯ ಬಲವರ್ಧನೆ
ವಿಐಪಿಗಳಿಗೆ ಭದ್ರತಾ ಕಾರು 'ದಿ ಡೆವಿಲ್'
ಉದ್ಯೋಗ ಕಡಿತ ಅನಿವಾರ್ಯ: ಕುಲಕರ್ಣಿ
ಅಮೆರಿಕನ್‌‌ರನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ: ಸಮೀಕ್ಷೆ
ನೋಕಿಯಾದಿಂದ 1,700 ನೌಕರರ ವಜಾ
ಭಾರತೀಯ ಸಿಇಒಗಳು ಆತ್ಮವಿಶ್ವಾಸದಲ್ಲಿ ನಂ.1