ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತದ ಜಿಡಿಪಿ ದರ ಕುಸಿತ : ಐಎಂಎಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ ಜಿಡಿಪಿ ದರ ಕುಸಿತ : ಐಎಂಎಫ್
ಭಾರತದ ಆರ್ಥಿಕತೆ ನಿಧಾನಗತಿಯಲ್ಲಿ ಕುಸಿಯುತ್ತಿದ್ದು, ಅನಿಶ್ಚತತೆ ಎದುರಿಸುವಂತಹ ಸ್ಥಿತಿ ಕಂಡುಬರುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಆರ್ಥಿಕ ಬಿಕ್ಕಟ್ಟು ವಿಭಾಗ ಆತಂಕ ವ್ಯಕ್ತಪಡಿಸಿದೆ.

2008-09ರ ಆರ್ಥಿಕ ಸಾಲಿನಲ್ಲಿ ದೇಶಿಯ ಉತ್ಪನ್ನಗಳ ಅಭಿವೃದ್ಧಿ ಶೇ.6.3 ರಷ್ಟು ನಿಧಾನವಾಗಿ ಕುಸಿಯುತ್ತಿದ್ದು, ಮಾರ್ಚ್ ತಿಂಗಳ ಮಾಸಾಂತ್ಯಕ್ಕೆ ಶೇ.5.3 ರಷ್ಟು ಕುಸಿತ ಕಂಡಿದೆ. ಆರ್ಥಿಕ ಕುಸಿತವನ್ನು ತಡೆಯಲು ಘೋಷಿಸಿದ ಪ್ಯಾಕೇಜ್‌ಗಳು ದೇಶಿಯ ಉತ್ಪನ್ನಗಳ ಚೇತರಿಕೆಗೆ ಕಾರಣವಾಗಬೇಕು ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.

ಮುಂಬರುವ ದಿನಗಳಲ್ಲಿ ಆರ್ಥಿಕ ಅನಿಶ್ಚತತೆಯ ಸ್ಥಿತಿಯಲ್ಲಿ ಏರಿಕೆಯಾಗುವ ಸಾಧ್ಯತೆಗಳಿದ್ದು, ಆರ್ಥಿಕತೆಯ ಉತ್ತೇಜನಕ್ಕಾಗಿ ಹಮ್ಮಿಕೊಂಡ ಆರ್ಥಿಕ ನೀತಿಗಳು ಪೂರಕವಾಗಿರಬೇಕು ಎಂದು ಅಭಿಪ್ರಾಯಪಟ್ಟಿದೆ.

ದೇಶದ ಆರ್ಥಿಕ ಅಭಿವೃದ್ಧಿ ದರದಲ್ಲಿ ಏರಿಕೆಯಾಗುತ್ತಿದ್ದು, ಹೆಚ್ಚಿನ ವಿಸ್ತರಣೆಯಿಂದಾಗಿ ಆರ್ಥಿಕ ಕುಸಿತದ ಕಳವಳವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಗುಣಮಟ್ಟದ ಮೂಲಸೌಕರ್ಯಗಳ ಯೋಜನೆಗಳಲ್ಲಿ ಬಡತನ ನಿವಾರಣೆಗೆ ಸಂಬಂಧಿಸಿದಂತೆ ಹೆಚ್ಚುವರಿ ಉತ್ತೇಜನ ಪ್ಯಾಕೇಜ್‌‌ಗಳನ್ನು ಘೋಷಿಸುವುದು ಅಗತ್ಯವಾಗಿದೆ ಎಂದು ಐಎಂಎಫ್ ಭಾರತಕ್ಕೆ ಸಲಹೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರತ, ಜಿಡಿಪಿ ದರ, ಐಎಂಎಫ್
ಮತ್ತಷ್ಟು
ನೇರ ತೆರಿಗೆ ಸಂಗ್ರಹದಲ್ಲಿ ಶೇ.18 ರಷ್ಟು ಏರಿಕೆ
ಫಾರೆಕ್ಸ್ : ರೂಪಾಯಿ ಮೌಲ್ಯ ಬಲವರ್ಧನೆ
ವಿಐಪಿಗಳಿಗೆ ಭದ್ರತಾ ಕಾರು 'ದಿ ಡೆವಿಲ್'
ಉದ್ಯೋಗ ಕಡಿತ ಅನಿವಾರ್ಯ: ಕುಲಕರ್ಣಿ
ಅಮೆರಿಕನ್‌‌ರನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ: ಸಮೀಕ್ಷೆ
ನೋಕಿಯಾದಿಂದ 1,700 ನೌಕರರ ವಜಾ