ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವೆಬ್‌‌ನಲ್ಲಿ ಬ್ಯಾಕ್‌ಸ್ಲಾಷ್ ಬಳಕೆ; ಕ್ಷಮೆಯಾಚಿಸಿದ ಸೃಷ್ಟಿಕರ್ತ (Web creator | Sir Tim Berners-Lee | WWW | backslashe)
Feedback Print Bookmark and Share
 
ಅಂತರ್ಜಾಲ ಬಳಕೆದಾರರ ಕಿರಿಕಿರಿಗೆ ಕಾರಣವಾಗಿರುವ ಎರಡು ಬ್ಯಾಕ್‌ಸ್ಲಾಷ್‌ಗಳಿಲ್ಲದೆಯೂ (//) ವೆಬ್‌ ಸೃಷ್ಟಿ ಮಾಡಬಹುದಿತ್ತು ಎಂದು ವರ್ಲ್ಡ್ ವೈಡ್ ವೆಬ್ (WWW) ಸಂಶೋಧಕ ಸರ್ ತಿಮೋತಿ ಬರ್ನರ್ಸ್-ಲೀ ಒಪ್ಪಿಕೊಂಡಿದ್ದು, ವಿಷಾದ ವ್ಯಕ್ತಪಡಿಸಿದ್ದಾರೆ.

ಹೆಚ್ಚು-ಕಡಿಮೆ ಎರಡು ದಶಕಗಳ ಹಿಂದೆ ತಾನು ಕಂಡು ಹಿಡಿದಿದ್ದ ವೆಬ್ ಕೋಡ್‌ಗಳು ಇದೀಗ ವಿಶ್ವದ ನೂತನ ತಂತ್ರಜ್ಞಾನದಿಂದಾಗಿ ಮಾರ್ಪಾಡು ಹೊಂದಿವೆ. ಆದರೆ 30 ವರ್ಷಗಳ ಹಿಂದೆ ಜಾಲ ಅಭಿವೃದ್ಧಿಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಒಂದು ಸ್ಲಾಷ್ (/) ಉಳಿಸಿಕೊಂಡರೂ ಅದು ನೆಟ್ ಬಳಕೆದಾರರಿಗೆ ಕಿರಿಕಿರಿಯಾಗುತ್ತದೆ ಎಂಬ ಕಲ್ಪನೆ ನನಗಿರಲಿಲ್ಲ ಎಂದು ತಿಮೋತಿ ತಿಳಿಸಿದ್ದಾರೆ.

ಯುಆರ್ಎಲ್ ಅಥವಾ ವೆಬ್ ವಿಳಾಸವನ್ನು ಟೈಪಿಸುವಾಗ // ಬದಲು ಒಂದೇ ಸ್ಲಾಷ್ ಬಳಸಿದಲ್ಲಿ ಅಕ್ಷರ ತಪ್ಪುಗಳಿವೆ ಎಂದು ಪರದೆಯಲ್ಲಿ ಸಂದೇಶ ಮೂಡುತ್ತದೆ ಅಥವಾ ಸಂಬಂಧಪಟ್ಟ ವೆಬ್‌ಸೈಟ್ ತೆರೆಯಲು ಸಾಧ್ಯವಾಗುವುದಿಲ್ಲ.

'ವಾಸ್ತವದಲ್ಲಿ ಯೋಚಿಸಿದಾಗ ಡಬಲ್ ಸ್ಲಾಷ್ (//) ಬಳಸುವ ಅಗತ್ಯವಿಲ್ಲ. ನಾನು ಅದನ್ನು ರಚಿಸುವಾಗ //ನ್ನು ಹೊರತುಪಡಿಸಬೇಕಿತ್ತು' ಎಂದು ವಾಷಿಂಗ್ಟನ್‌ನಲ್ಲಿ ನಡೆದ ಭವಿಷ್ಯದ ತಂತ್ರಜ್ಞಾನ ಕುರಿತ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಾ ಸರ್ ತಿಮೋತಿ ಹೇಳಿದ್ದಾರೆಂದು ಟೈಮ್ಸ್ ಆನ್‌ಲೈನ್ ವರದಿ ಮಾಡಿದೆ.

ಈಗ ಅದರ ಅಗತ್ಯವಿಲ್ಲವೆಂದು ಭಾಸವಾಗುತ್ತಿದೆ ಮತ್ತು ಅದಿಲ್ಲದಿದ್ದರೆ ಉತ್ತಮವಾಗಿರುತ್ತಿತ್ತು ಅನ್ನಿಸುತ್ತಿದೆ. ರೇಡಿಯೋಗಳಲ್ಲಿ ವೆಬ್ ವಿಳಾಸಗಳನ್ನು ಹೇಳುವಾಗ ಬ್ಯಾಕ್‌ಸ್ಲಾಷ್ ಬ್ಯಾಕ್‌ಸ್ಲಾಷ್ ಎಂದು ಜನ ಹೇಳುವುದನ್ನು ಗಮನಿಸಿದ್ದೇನೆ ಎಂದು ಪ್ರೇಕ್ಷಕರ ಜತೆ ತನ್ನ ಮಾತುಗಳನ್ನು ಅವರು ಹಂಚಿಕೊಂಡರು.

ಮತ್ತೂ ಮಾತು ಮುಂದುವರಿಸಿದ ಅವರು ತನ್ನ ತೋರು ಬೆರಳನ್ನು ಮೇಲಕ್ಕೆ ತೋರಿಸುತ್ತಾ, 'ಜನ ಈಗ ಈ ಬೆರಳನ್ನು ಬೆಟ್ಟು ಮಾಡಿ ನನ್ನತ್ತ ತೋರಿಸುತ್ತಿದ್ದಾರೆ' ಎಂದರು.

ಇಂಟರ್ನೆಟ್ ಪ್ರಗತಿಯನ್ನು ಪರಿಶೀಲನೆ ನಡೆಸುವ ವರ್ಲ್ಡ್ ವೈಡ್ ವೆಬ್ ಕನ್ಸೋರ್ಟಿಯಂ (ಡಬ್ಲ್ಯೂ3ಸಿ)ನಲ್ಲಿ ಸರ್ ತಿಮೋತಿ ಅಥವಾ ಟಿಮ್‌ರವರು ಈಗ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ