ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಿತವ್ಯಯ; ತನ್ನ ವೇತನಕ್ಕೇ ಕತ್ತರಿ ಹಾಕಿದ ಮುಖೇಶ್ ಅಂಬಾನಿ (India | austerity drive | Mukesh Ambani | Reliance Industries)
Feedback Print Bookmark and Share
 
ಮಿತವ್ಯಯದ ಕುರಿತು ದೇಶದ ಎಕ್ಸಿಕ್ಯೂಟಿವ್‌ಗಳಿಗೆ ಮಾದರಿಯೆಂಬಂತೆ ರಿಲಯೆನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ತನ್ನ ವೇತನವನ್ನು ಭಾರೀ ಮಟ್ಟದಲ್ಲಿ ಇಳಿಸಿಕೊಳ್ಳಲು ನಿರ್ಧರಿಸಿದ್ದಾರೆ. 2008-09ರ ಸಾಲಿನ ಅವರ ವೇತನವನ್ನು ಇದೀಗ ಮೂರನೇ ಎರಡು ಭಾಗದಷ್ಟು ಕಡಿತಗೊಳಿಸಲಾಗಿದ್ದು, ಅವರ ವೇತನವೀಗ ಕೇವಲ 15 ಕೋಟಿ ರೂಪಾಯಿಗಳಂತೆ!

2007-08ರ ಸಾಲಿನಲ್ಲಿ 44 ಕೋಟಿ ರೂಪಾಯಿಗಳ ವೇತನ ಪ್ಯಾಕೇಜ್ ಪಡೆದುಕೊಂಡಿದ್ದ ಮುಖೇಶ್, ಇದೀಗ ಅದನ್ನು 15 ಕೋಟಿ ರೂಪಾಯಿಗಳಿಗೆ ಕಡಿತಗೊಳಿಸುವ ಮೂಲಕ ರಿಲಯೆನ್ಸ್ ಇಂಡಸ್ಟ್ರೀಸ್ ಕಂಪನಿಯ ಹತ್ತನೇ ಒಂದು ಭಾಗದಷ್ಟಿರುವ ಇತರ ಕಂಪನಿಗಳ ಉದ್ಯಮಿಗಳು ಮತ್ತು ಎಕ್ಸಿಕ್ಯೂಟಿವ್‌ಗಳು ಪಡೆದುಕೊಳ್ಳುವ ವೇತನಕ್ಕಿಂತ ಕಡಿಮೆ ಸಂಭಾವನೆಗೆ ದುಡಿಯಲಿದ್ದಾರೆ.

ಕಂಪನಿಗಳ ಕಾಯ್ದೆ ಪ್ರಕಾರ ಕಂಪನಿಯ ಒಟ್ಟು ಗಳಿಕೆಯ ಶೇ.5ರ ಮಿತಿಯ ವೇತನಕ್ಕಿಂತಲೂ ಶೇ.98ರಷ್ಟು ಕಡಿಮೆ ವೇತನವನ್ನು ರಿಲಯೆನ್ಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಪಡೆಯಲಿದ್ದು, 2007-08ರಲ್ಲಿ ಪಡೆದುಕೊಂಡಿದ್ದ 44 ಕೋಟಿಗಳಿಗಿಂತ ಶೇ.66ರಷ್ಟು ಕಡಿಮೆ ಸಂಭಾವನೆಗೆ ಅಂಬಾನಿ ದುಡಿಯಲಿದ್ದಾರೆ ಎಂದು ರಿಲಯೆನ್ಸ್ ತಿಳಿಸಿದೆ.

ಅದೇ ಹೊತ್ತಿಗೆ ದೇಶದ ಅಗ್ರಮಾನ್ಯ ಕಾರ್ಪೊರೇಟ್ ಸಂಸ್ಥೆಯು ಎಕ್ಸಿಕ್ಯೂಟಿವ್‌ಗಳ ವೇತನ ಮತ್ತು ಇತರ ಸಂಭಾವನೆಗಳ ಕುರಿತಾಗಿ ಹೊಸ ರೂಪು-ರೇಷೆಯೊಂದನ್ನು ಕೂಡ ಪ್ರಕಟಿಸಿದೆ. ಇದು ಕಮಿಷನ್ ಆಧರಿತ ಆದಾಯ ವ್ಯವಸ್ಥೆಯಲ್ಲಿರುವ ಎಕ್ಸಿಕ್ಯೂಟಿವ್‌ಗಳ ಕಾರ್ಯಚರಣೆಗೆ ವಿರುದ್ಧವಾಗಿರಲಿದೆ.

ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವೇತನಕ್ಕೆ ನಿಯಂತ್ರಣ ಬೇಕು ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ಸಲಹೆ ನೀಡಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ. ಮಂಡಳಿಗಳು ಮತ್ತು ಶೇರುದಾರರು ತಮ್ಮ ವೇತನ ಪ್ಯಾಕೇಜ್‌ಗಳನ್ನು ನಿರ್ಧರಿಸಬೇಕು ಎಂದು ಸಚಿವರುರು ತನ್ನ ಅನಿಸಿಕೆ ವ್ಯಕ್ತಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ