ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಂಗ್ಲೀಷೇತರ ಭಾಷೆಗಳಲ್ಲೂ ಇಂಟರ್ನೆಟ್ ವಿಳಾಸ..! (Internet | web address | WWW | website)
Feedback Print Bookmark and Share
 
ಇಂಟರ್ನೆಟ್ ತನ್ನ ನಾಲ್ಕು ದಶಕಗಳ ಇತಿಹಾಸದಲ್ಲೇ ಮಹತ್ತರ ಬದಲಾವಣೆಗೆ ತೆರೆದುಕೊಳ್ಳುವ ನಿರೀಕ್ಷೆಗಳಿದ್ದು, ಅಂತಾರಾಷ್ಟ್ರೀಯ ಡೊಮೈನ್ ಹೆಸರುಗಳು ಅಥವಾ ವೆಬ್ ವಿಳಾಸಗಳು ಇಂಗ್ಲೀಷೇತರ ಭಾಷೆಗಳಲ್ಲೂ ಬರಲಿವೆ.

ಇಂಟರ್ನೆಟ್ ಹೆಸರು ಮತ್ತು ಸಂಖ್ಯೆಗಳ ವಿತರಣಾ ಕಾರ್ಪೊರೇಷನ್ (ಐಸಿಎಎನ್ಎನ್) ಎಂಬ ಇಂಟರ್ನೆಟ್ ವಿಳಾಸಗಳನ್ನು ನೀಡುವ ಜಾಗತಿಕ ಸಂಸ್ಥೆಯು ಇದೇ ವಾರ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಸಭೆ ಸೇರಲಿದೆ. ಪ್ರತೀ ವೆಬ್‌ಸೈಟ್, ಇಮೇಲ್ ಅಥವಾ ಟ್ವಿಟ್ಟರ್ ಪೋಸ್ಟ್‌ಗೆ ಒಂದು ವಿಳಾಸವಿದ್ದು, ಇದನ್ನು ಇಂಗ್ಲೀಷೇತರ ಭಾಷೆಗಳಲ್ಲೂ ಬಳಸಲು ಅವಕಾಶ ನೀಡುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಲ್ಯಾಟಿನ್ ಪದಗಳನ್ನು ಮೂಲಾಂಶವೆಂದು ಸ್ವೀಕರಿಸುವ ಬದಲು ಇತರ ಅಕ್ಷರಗಳನ್ನು ಕೂಡ ಇಂಟರ್ನೆಟ್ ವಿಳಾಸಗಳಿಗೆ ಮೊತ್ತ ಮೊದಲು ನೀಡುವ ಕುರಿತು ಐಸಿಎಎನ್ಎನ್ ಮಂಡಳಿ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ.

ಇದಕ್ಕೆ ಅವಕಾಶ ನೀಡಿದಲ್ಲಿ ಅರೇಬಿಕ್, ಕೊರಿಯನ್, ಜಪಾನೀಸ್, ಗ್ರೀಕ್, ಹಿಂದಿ ಮತ್ತು ಸಿರಿಲಿಕ್ ಮುಂತಾದ ಭಾಷೆಗಳ ಇಂಟರ್ನೆಟ್ ವಿಳಾಸಗಳನ್ನು ಹೊಂದಿರುವ ಡೊಮೈನ್ ವಿಳಾಸಗಳನ್ನು ಪಡೆಯಲು ಸಾಧ್ಯವಿದೆ.

40 ವರ್ಷಗಳ ಹಿಂದೆ ಕಂಡು ಹಿಡಿಯಲಾದ ಇಂಟರ್ನೆಟ್‌ನಲ್ಲಿ ಇದು ಮಹತ್ವದ ತಾಂತ್ರಿಕ ಬದಲಾವಣೆ ಎಂದು ಐಸಿಎಎನ್ಎನ್ ಮಂಡಳಿಯ ಅಧ್ಯಕ್ಷ ಪೀಟರ್ ಡೆಂಗೇಟ್ ತ್ರುಶ್ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಈ ಪ್ರಸ್ತಾವನೆಗೆ ಶುಕ್ರವಾರದ ಸಭೆಯಲ್ಲಿ ಅನುಮೋದನೆ ದೊರಕುವ ವಿಶ್ವಾಸವಿದೆಯೆಂದು ಅವರು ತಿಳಿಸಿದ್ದಾರೆ.

ಐಸಿಎಎನ್ಎನ್ ಸಭೆಯಲ್ಲಿ ಇಂಗ್ಲೀಷೇತರ ಭಾಷೆಯ ಇಂಟರ್ನೆಟ್ ವಿಳಾಸ ಬಳಕೆಗೆ ಅಂಗೀಕಾರ ಸಿಕ್ಕಿದಲ್ಲಿ, 2010ರ ಮಧ್ಯಾವಧಿಯಲ್ಲಿ ಇದನ್ನು ಇಂಟರ್ನೆಟ್‌ನಲ್ಲಿ ನೋಡಬಹುದಾಗಿದೆ ಎಂದು ನೂತನ ಅಧ್ಯಕ್ಷ ಹಾಗೂ ಸಿಇಓ ರಾಡ್ ಬೆಕ್ಸ್ಟ್ರೋಮ್ ತಿಳಿಸಿದ್ದಾರೆ.

ಇದು ಯಶಸ್ವಿಯಾಗುವ ಭರವಸೆ ನಮ್ಮಲ್ಲಿದೆ. ನಾವು ಕಳೆದ ಒಂದೆರಡು ವರ್ಷಗಳಿಂದ ಈ ಬಗ್ಗೆ ಅಧ್ಯಯನ ನಡೆಸಿದ್ದೇವೆ. ಹಾಗಾಗಿ ಒಪ್ಪಿಗೆ ದೊರೆತ ಕೂಡಲೇ ಜಾರಿಗೊಳಿಸುವ ಕಾರ್ಯ ಆರಂಭವಾಗಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ