ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟ್ವಿಟ್ಟರ್, ಫೇಸ್‌ಬುಕ್‌ಗಳಿದ್ರೆ ಸಿಬ್ಬಂದಿಗಳು ಕೆಲ್ಸ ಮಾಡಲ್ಲ..! (Twitter | FaceBook | India | Social networking site)
Feedback Print Bookmark and Share
 
ಟ್ವಿಟ್ಟರ್ ಮತ್ತು ಪೇಸ್‌ಬುಕ್‌ಗಳಂತಹ ಜನಪ್ರಿಯ ಸಾಮಾಜಿಕ ಸಂಪರ್ಕ ತಾಣಗಳಿಂದಾಗಿ ವೈಯಕ್ತಿಕವಾಗಿ ಜಗತ್ತಿನಾದ್ಯಂತ ಹಲವರಿಗೆ ಭಾರೀ ಉಪಯೋಗವಾಗಿರಬಹುದು. ಆದರೆ ಅಂತವರನ್ನು ಕೆಲಸ ಮಾಡಿಸುತ್ತಿರುವ ಕಂಪನಿಗಳಿಗೆ ಭಾರೀ ನಷ್ಟವಾಗುತ್ತಿದೆಯಂತೆ. ಸಿಬ್ಬಂದಿಗಳು ಕೆಲ್ಸ ಬಿಟ್ಟು ಈ ತಾಣಗಳಲ್ಲಿ ಕಾಲ ಕಳೆಯುತ್ತಿರುವುದೇ ಇದರ ಹಿಂದಿರುವ ಕಾರಣ.

ಇದನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದ್ದು, ಒಂದು ಅಂದಾಜಿನ ಪ್ರಕಾರ ಇದರಿಂದಾಗಿ 1.38 ಬಿಲಿಯನ್ ಪೌಂಡ್ ನಷ್ಟ ಇಂಗ್ಲೆಂಡ್ ಉದ್ಯಮಕ್ಕಾಗಿದೆಯಂತೆ. ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳಂತಹ ತಾಣಗಳಲ್ಲಿ ಇಡೀ ವರ್ಷದಲ್ಲಿ ಸಿಬ್ಬಂದಿಗಳು ಕಳೆಯುವ ಕಚೇರಿ ಸಮಯವನ್ನು ಒಟ್ಟುಗೂಡಿಸಿ ನಷ್ಟವನ್ನು ಲೆಕ್ಕ ಹಾಕಲಾಗಿದೆ.

ಈ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳಂತಹ ಸಾಮಾಜಿಕ ಸಂಪರ್ಕ ತಾಣಗಳನ್ನು ಕಚೇರಿಯಲ್ಲಿನ ಅರ್ಧಕ್ಕಿಂತಲೂ ಹೆಚ್ಚು ಸಿಬ್ಬಂದಿಗಳು ಕೆಲಸದ ವೇಳೆಯಲ್ಲಿ ಬಳಸುತ್ತಿದ್ದು, ವಾರವೊಂದರಲ್ಲಿ ಸರಾಸರಿ 40 ನಿಮಿಷಗಳಷ್ಟು ಸಮಯವನ್ನು ಪ್ರತಿಯೊಬ್ಬರೂ ಈ ರೀತಿಯಾಗಿ ಕಳೆಯುತ್ತಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಸಮೀಕ್ಷಾ ತಂಡವು ಸಂದರ್ಶಿಸಿದ ಸಂಸ್ಥೆಯೊಂದರ 1,460 ಸಿಬ್ಬಂದಿಗಳಲ್ಲಿ ಮೂರನೇ ಒಂದು ಭಾಗದಷ್ಟು ನೌಕರರು, ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಕಂಪನಿಯ ಅಮೂಲ್ಯ ಮಾಹಿತಿಗಳನ್ನು ಹೊರಗೆಡವಿದ್ದಾಗಿ ಹೇಳಿಕೊಂಡಿದ್ದಾರೆ. ಇದರೊಂದಿಗೆ ನೌಕರರು ಇಂಟರ್ನೆಟ್ ಬಳಸುವ ಬಗ್ಗೆ ಕಳವಳಗಳು ವ್ಯಕ್ತವಾಗಿವೆ ಎಂದು 'ದಿ ಡೈಲೀ ಟೆಲಿಗ್ರಾಫ್' ವರದಿ ಮಾಡಿದೆ.

ಇಂತಹ ತಾಣಗಳಲ್ಲಿ ತಾವು ಎಷ್ಟು ಸಮಯವನ್ನು ಕಳೆಯುತ್ತೀರಿ ಎಂದು ಸಿಬ್ಬಂದಿಗಳಲ್ಲಿ ಕೇಳಿದಾಗ ಕೆಲವರು ತಾವು ವಾರದಲ್ಲಿ 40 ನಿಮಿಷಗಳಷ್ಟು ಸಮಯವನ್ನು ಇದಕ್ಕಾಗಿ ಉಪಯೋಗಿಸುತ್ತೇವೆ ಎಂದಿದ್ದಾರೆ. ಆದರೆ ಇತರ ಸಹೋದ್ಯೋಗಿಗಳ ಬಗ್ಗೆ ಹೇಳುವಾಗ, 'ಅವರು ದಿನದಲ್ಲಿ ಗಂಟೆಗೂ ಹೆಚ್ಚು ಕಾಲ ಸಾಮಾಜಿಕ ಸಂಪರ್ಕ ತಾಣಗಳಲ್ಲೇ ಇರುತ್ತಾರೆ' ಎಂದು ಹೇಳುತ್ತಾರೆ.

ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಕಚೇರಿ ಸಮಯವನ್ನು ವ್ಯಯಿಸುವುದಲ್ಲದೆ, ಕಂಪನಿಯ ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸುತ್ತಿರುವ ಕಾರಣ, ಸಿಬ್ಬಂದಿಗಳು ಇಂಟರ್ನೆಟ್ ಬಳಸುವುದನ್ನು ನಿರ್ಬಂಧಿಸಬೇಕು ಎಂದು ಉದ್ಯಮದ ಸಂಸ್ಥೆಯೊಂದು ಅಭಿಪ್ರಾಯಪಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ