ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪೇ ಪರ್ ಸೆಕೆಂಡ್ ಈಗ ಭಾರ್ತಿ ಏರ್‌ಟೆಲ್ ಸರದಿ... (Bharti Airtel | pay per-sec plan | STD calls | Manoj Kohli)
Feedback Print Bookmark and Share
 
ಟಾಟಾ ಡೊಕೊಮೋ, ಏರ್‌ಸೆಲ್‌ ಪ್ರತಿ ಸೆಕೆಂಡ್‌ಗೆ ಒಂದು ಪೈಸೆ ದರದ ಸೌಲಭ್ಯ ಜನಪ್ರಿಯವಾಗುತ್ತಿರುವಂತೆಯೇ, ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಸಂಸ್ಥೆಯಾಗಿರುವ ಭಾರ್ತಿ ಏರ್‌ಟೆಲ್ ಕೂಡ ಪ್ರತಿ ಸೆಕೆಂಡ್‌ಗೆ ಒಂದು ಪೈಸೆ ದರದ ಅಗ್ಗದ ಸೌಲಭ್ಯ ಜಾರಿಗೆ ತರುವ ಮೂಲಕ ಸ್ಪರ್ಧೆಗೆ ಇಳಿದಿದೆ.

ಏರ್‌ಟೆಲ್ ಸಂಖ್ಯೆಗಳಿಗೆ ಮಾಡುವ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗೆ, ಪ್ರತಿ ಸೆಕೆಂಡ್‌ಗೆ ಒಂದು ಪೈಸೆ ಪಾವತಿಸುವ ಫ್ರೀಡಂ ಪ್ಲ್ಯಾನ್ ದೇಶಾದ್ಯಂತ ಅನ್ವಯಗೊಳ್ಳಲಿದೆ. ಇತರ ಮೊಬೈಲ್ ಸಂಸ್ಥೆಗಳ ಸಂಖ್ಯೆಗಳಿಗೆ ಮಾಡುವ ಕರೆಗಳಿಗೆ ಪ್ರತಿ ಸೆಕೆಂಡ್‌ಗೆ 1.20ಪೈಸೆ ವಿಧಿಸಲಾಗುತ್ತಿದೆ. ಆರಂಭದಲ್ಲಿ ಇದು ಪೂರ್ವ ಪಾವತಿ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನಮ್ಮೆಲ್ಲಾ ಏರ್‌ಟೆಲ್ ಗ್ರಾಹಕರಿಗಾಗಿ ಈ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಗ್ರಾಹಕರು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಭಾರ್ತಿ ಏರ್‌ಟೆಲ್ ಸಿಇಓ ಮನೋಜ್ ಕೊಹ್ಲಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ