ಜರ್ಮನ್ ಪ್ಲಾಸ್ಟಿಕ್ ಸರ್ಜನ್ ಒಬ್ಬರು ತನ್ನ ಹೆಂಡತಿಯ ಎದೆ, ತೊಡೆ, ಕಣ್ಣುಗಳು ಮತ್ತು ಮುಖವನ್ನು ಎಂಟು ಶಸ್ತ್ರಚಿಕಿತ್ಸೆಗಳ ಮೂಲಕ ತನಗೆ ಬೇಕಾದಂತೆ ಬದಲಾಯಿಸಿಕೊಂಡ ವಿಚಿತ್ರ ಸಂಗತಿ ಬಹಿರಂಗಗೊಂಡಿದೆ. ಆ ಮೂಲಕ ಕನಸಿನ ಹೆಂಡತಿಯನ್ನು ಆತ ಪಡೆದುಕೊಂಡಿದ್ದಾರಂತೆ.
ರೇಜಾ ವೊಸ್ಸಾಗ್ ಎಂಬವರು ಯಾವುದೇ ವಿಶೇಷ ರೂಪ ಇಲ್ಲದ ಸಾದಾ ಹುಡುಗಿಯನ್ನು ಮದುವೆಯಾಗಿದ್ದರು. ಆದರೆ ತಾನು ಮದುವೆಯಾಗುವ ಹುಡುಗಿಯನ್ನು ಸುಂದರಿಯನ್ನಾಗಿ ಮಾಡಲು ಸಾಧ್ಯವೇ ಎಂಬುದನ್ನು ಅದಕ್ಕಿಂತಲೂ ಮುಂಚೆ ಖಚಿತಪಡಿಸಿಕೊಂಡಿದ್ದರು.
48ರ ಹರೆಯ ಈ ತಜ್ಞ ವೈದ್ಯ ಪತ್ನಿ ಕ್ಯಾನಿಯ ದೇಹದೊಳಗೆ 600 ಗ್ರಾಂಗಳಷ್ಟು ಸಿಲಿಕಾನ್ ತಳ್ಳಿದ್ದಾರೆ. ಆಕೆಯ ಎದೆಯನ್ನು 'ಎ'ಯಿಂದ 'ಎಫ್' ಕಪ್‌ಗೆ ಹಿಗ್ಗಿಸಿದ್ದಾರೆ. ತುಟಿಯನ್ನು ದೊಡ್ಡದು ಮಾಡಿದ್ದಾರೆ, ಕಣ್ಣಿನ ರೆಪ್ಪೆಯನ್ನು ಮೇಲಕ್ಕೆತ್ತಿದ್ದಾರೆ ಮತ್ತು ಹಣೆಯಲ್ಲಿನ ಕೊಂಕುಗಳನ್ನು ರಿಪೇರಿ ಮಾಡಿದ್ದಾರೆ.
33ರ ಹರೆಯದ ಮಾಜಿ ವೈಟರ್, ಪ್ರಸಕ್ತ ಮಾಡೆಲ್ ಆಗಿರುವ ಅವರ ಸುರ ಸುಂದರಿಯಾಗಿ ಪರಿವರ್ತನೆಯಾಗಿರುವ ಪತ್ನಿಯ ನಿತಂಬ, ಹೊಟ್ಟೆ, ತೊಡೆ ಸೇರಿದಂತೆ ದೇಹದ ಬಹುತೇಕ ಭಾಗಗಳಿಗೆ ವಿಶೇಷ ಇಂಜೆಕ್ಷನ್‌ಗಳನ್ನು ನೀಡಿ ಅವರು ಪ್ಲಾಸ್ಟಿಕ್ ಸರ್ಜರಿ ನಡೆಸಿದ್ದಾರೆ.
ಇದೊಂದು ರೀತಿ ದೇವರಾದಂತೆ. ಪ್ರಕೃತಿಯ ಸೃಷ್ಟಿಯನ್ನು ಬದಲಾಯಿಸಲು ನಿಮಗೆ ಸಾಮರ್ಥ್ಯವಿರಬೇಕು ಎಂದು ರೇಜಾ ಹೇಳಿಕೊಂಡಿದ್ದಾರೆ.
ನಾನು ಮೊದಲ ಬಾರಿ ಕೇನಿಯನ್ನು ಭೇಟಿ ಮಾಡಿದಾಗ ಅವಳಲ್ಲಿ ದೈಹಿಕ ನ್ಯೂನತೆಗಳಿದ್ದುವು. ಅವುಗಳನ್ನೆಲ್ಲ ಸರಿ ಮಾಡುತ್ತಾ, ಆಕೆಯನ್ನು ಸುಂದರ ಮಹಿಳೆಯನ್ನಾಗಿಸಿದೆ. ಇದಕ್ಕಾಗಿ 18,000 ಪೌಂಡುಗಳನ್ನು ಖರ್ಚು ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.