ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 109 ರೂಪಾಯಿಗೆ 3ಜಿ ಸಂಪರ್ಕ, ನಿಮಿಷಕ್ಕೆ 25 ಪೈ. (3G Service in India | Mumbai | MTNL | 3G Price | 3G Connection Charge in India)
Feedback Print Bookmark and Share
 
3ಜಿ ಸಂಪರ್ಕ ವ್ಯವಸ್ಥೆ ಬರುತ್ತಿದೆ, ಅದರಲ್ಲಿ ವೀಡಿಯೋ ಸಂವಾದ ನಡೆಸಬಹುದೇ, ದರ ಎಷ್ಟಿರಬಹುದು ಎಂಬಿತ್ಯಾದಿ ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರ ದೊರೆಯತೊಡಗಿದ್ದು, ಮುಂಬಯಿ ಸರ್ಕಲ್ ವ್ಯಾಪ್ತಿಯಲ್ಲಿ 109 ರೂಪಾಯಿಗಳಿಗೆ 3ಜಿ ಸಂಪರ್ಕ ಒದಗಿಸುವುದಾಗಿ ಸರಕಾರಿ ಸ್ವಾಮ್ಯದ ಮಹಾನಗರ ಟೆಲಿಫೋನ್ ನಿಗಮ ಲಿ. (ಎಂಟಿಎನ್ಎಲ್) ಘೋಷಿಸುವುದರೊಂದಿಗೆ, ನೂತನ ತಂತ್ರಜ್ಞಾನದ ಲಾಭಾಲಾಭಗಳೇನು ಎಂಬ ಕುರಿತ ಕುತೂಹಲ ಮತ್ತಷ್ಟು ಹೆಚ್ಚಿದೆ.

ತಮ್ಮದೇ ನೆಟ್ವರ್ಕ್‌ನಲ್ಲಿ ನಿಮಿಷಕ್ಕೆ 20 ಪೈಸೆ ಹಾಗೂ ಬೇರೆ ನೆಟ್ವರ್ಕ್‌ಗಳಿಗೆ 50 ಪೈಸೆ ದರದಲ್ಲಿ ಸ್ಥಳೀಯ ಧ್ವನಿ ಮತ್ತು ವೀಡಿಯೋ ಕರೆ ಮಾಡಬಹುದಾಗಿದೆ. ಮುಂಬಯಿ ಟೆಲಿಕಾಂ ವೃತ್ತದಲ್ಲಿ ಈ ಸೌಲಭ್ಯ ದೊರೆಯಲಿದ್ದು, ಇದು ಜೀವಿತಾವಧಿ ಪ್ಲಾನ್ ಆಗಿರುತ್ತದೆ ಎಂದು ಎಂಟಿಎನ್ಎಲ್ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಮೂರನೇ ಪೀಳಿಗೆ ಅಥವಾ 3ಜಿ ಎಂದು ಕರೆಯಲಾಗುವ ಈ ತಂತ್ರಜ್ಞಾನದ ಮೂಲಕ ಅತ್ಯಂತ ಅಧಿಕ ವೇಗದಲ್ಲಿ ಇಂಟರ್ನೆಟ್ ಸೇವೆ ಬಳಸಬಹುದು ಮತ್ತು ವೀಡಿಯೋ ಕ್ಲಿಪ್‌ಗಳು, ಹಾಡು ಮತ್ತಿತರ ದತ್ತಾಂಶಗಳನ್ನು ವೇಗವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ದೆಹಲಿ ಮತ್ತು ಮುಂಬೈಗಳಲ್ಲಿ ಕಾರ್ಯಾಚರಿಸುತ್ತಿರುವ ಎಂಟಿಎನ್ಎಲ್ 'ಜಾದೂ' ಹೆಸರಿನಲ್ಲಿ 3ಜಿ ಸೇವೆಗಳನ್ನು ಒದಗಿಸುತ್ತಿದೆ. ಹೊಸ ಸಂಪರ್ಕದಲ್ಲಿ 25 ನಿಮಿಷಗಳ ಉಚಿತ ವೀಡಿಯೋ ಕರೆ, 25 ಎಂಬಿ ಉಚಿತ ದತ್ತಾಂಶ ಬಳಕೆ ಮತ್ತು 25 ರೂಪಾಯಿಯ ಟಾಕ್ ಟೈಮ್ ಒಳಗೊಂಡಿದೆ. ಎಸ್‌ಟಿಡಿ ಧ್ವನಿ ಮತ್ತು ವೀಡಿಯೋ ಕರೆಗಳಿಗೆ ನಿಮಿಷಕ್ಕೆ 75 ಪೈಸೆ ಶುಲ್ಕ ವಿಧಿಸಲಾಗುತ್ತದೆ ಎಂದು ಅದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ