ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗೃಹ ಸಾಲ ಆಕರ್ಷಕ ಕೊಡುಗೆಗಳ ಅಂತ್ಯ ಸನ್ನಿಹಿತ? (Public Sector Banks | Home loan | Special Schemes | Offers)
Feedback Print Bookmark and Share
 
ಮಿತ ಬಡ್ಡಿದರದಲ್ಲಿ ನಿಮ್ಮ ಕನಸಿನ ಮನೆ ಕೊಳ್ಳಲು ನೀವು ಇನ್ನೂ ಆಲೋಚಿಸುತ್ತಿದ್ದೀರಾದರೆ ಮತ್ತು ತಡಮಾಡಿದರೆ ನಿಮಗೆ ನಿರಾಶೆಯಾಗಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳಂತಹಾ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳು ಆರಂಭಿಕ ವರ್ಷದಲ್ಲಿ ಶೇ.8ರಷ್ಟು ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ ನೀಡುವ ವಿಶೇಷ ಯೋಜನೆಗಳನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಗಳಿವೆ.

ತನ್ನ ಎರಡನೇ ತ್ರೈಮಾಸಿಕ ವರದಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಬಗ್ಗೆ ನಿಖರವಾದ ಸಂಕೇತಗಳನ್ನು ತೋರಿಸಿದೆ. ಪ್ರಧಾನ ಪಾಲಿಸಿ ದರಗಳೊಂದಿಗೆ ಹೊಂದಿಕೊಳ್ಳಲು ಅನುಗುಣವಾಗಿ ಈ ಬ್ಯಾಂಕುಗಳು ಜನವರಿ ಬಳಿಕ ತಮ್ಮ ಗೃಹಸಾಲ ಬಡ್ಡಿ ದರಗಳನ್ನು ಏರಿಸಬೇಕಾಗಬಹುದು.

ಇತ್ತೀಚೆಗೆ ನೀಡಲಾಗುತ್ತಿದ್ದ ಕಡಿಮೆ ಬಡ್ಡಿದರದ ಯೋಜನೆಗಳು ಐದು ವರ್ಷಗಳಲ್ಲೇ ಗೃಹ ಸಾಲವನ್ನು ಅತ್ಯಂತ ಅಗ್ಗದ ಸ್ಥಿತಿಗೆ ತಂದು ನಿಲ್ಲಿಸಿದ್ದವು.
ಸಂಬಂಧಿತ ಮಾಹಿತಿ ಹುಡುಕಿ