ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಎಸ್ಸೆನ್ನೆಲ್‌ನಿಂದ 30,000 ಬ್ರಾಡ್‌ಬ್ಯಾಂಡ್ ಕಿಯೋಸ್ಕ್ (BSNL | broadband kiosk | India | Internet)
Feedback Print Bookmark and Share
 
ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ಸ್ವಾಮ್ಯದ ದೂರವಾಣಿ ಸಂಸ್ಥೆ ಬಿಎಸ್ಎನ್ಎಲ್ ದೇಶದಾದ್ಯಂತ ಸುಮಾರು 30,000 ಸಾರ್ವಜನಿಕ ಬ್ರಾಡ್‌ಬ್ಯಾಂಡ್ ಕೇಂದ್ರಗಳನ್ನು ಫ್ರಾಂಚೈಸಿ ಆಧಾರದಲ್ಲಿ ತೆರೆಯಲಿದೆ.

ಎರಡು ವರ್ಷದೊಳಗೆ 30,000 ಬ್ರಾಡ್‌ಬ್ರಾಂಡ್ ಕಿಯೋಸ್ಕ್‌ಗಳನ್ನು ಭಾರತದ ಗ್ರಾಮಾಂತರ ಮತ್ತು ದುರ್ಗಮ ಪ್ರದೇಶಗಳಲ್ಲಿ ತೆರೆಯುವ ಉದ್ದೇಶವನ್ನಿಟ್ಟುಕೊಳ್ಳಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಫ್ರಾಂಚೈಸಿಗಳ ಮುಖಾಯಂತರ ನಾವು ಬ್ರಾಡ್‌ಬ್ರಾಂಡ್ ಕೇಂದ್ರಗಳನ್ನು ತೆರೆಯುತ್ತೇವೆ ಎಂದು ಬಿಎಸ್ಎನ್‌ಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರ್ಯಾಯ ವ್ಯವಸ್ಥೆಗಳನ್ನು ಹೊಂದಿರದ ಮತ್ತು ಅಲ್ಪ ಸಮಯವನ್ನು ಇಂತಹ ಸೇವೆಗಳಲ್ಲಿ ಕಳೆಯಲಿಚ್ಛಿಸುವವರಿಗೆ ಈ ಬ್ರಾಡ್‌ಬ್ಯಾಂಡ್ ಕೇಂದ್ರಗಳು ಹೆಚ್ಚು ಉಪಯೋಗಕ್ಕೆ ಬರಲಿದೆ. ಗ್ರಾಮಾಂತರ ಪ್ರದೇಶದ ಜನರು ಕೂಡ ತಂತ್ರಜ್ಞಾನವನ್ನು ಈ ಮೂಲಕ ಕಡಿಮೆ ವೆಚ್ಚದಲ್ಲಿ ಪರಿಚಯ ಮಾಡಿಕೊಳ್ಳಬಹುದಾಗಿದೆ ಎಂದು ಬಿಎಸ್ಎನ್ಎಲ್ ತಿಳಿಸಿದೆ.

3.9 ಮಿಲಿಯನ್ ಬ್ರಾಡ್‌ಬ್ಯಾಂಡ್ ಸಂಪರ್ಕಗಳನ್ನು ನೀಡಿರುವ ಬಿಎಸ್ಎನ್ಎಲ್ ದೇಶದ ಅತಿದೊಡ್ಡ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವಾದಾರ ಸಂಸ್ಥೆ. ಈ ಸರಕಾರಿ ಸ್ವಾಮ್ಯದ ಸಂಸ್ಥೆಯು ಇದೇ ವರ್ಷ ತಂತಿರಹಿತ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸುವ ಕುರಿತು ಕೂಡ ಯೋಜನೆಯನ್ನು ರೂಪಿಸುತ್ತಿದೆ.

ಮೂರು ಶ್ರೇಣಿಯ ಉದ್ಯಮ ಮಾದರಿಯಲ್ಲಿ ಸಂಸ್ಥೆಯು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಸಿಗುವಂತೆ ಮಾಡಲಿದ್ದು, ಅದಕ್ಕಾಗಿ ಫ್ರಾಂಚೈಸಿಗಳನ್ನು ಅವಲಂಬಿಸಲಿದೆ.

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎಂದು ನಾಲ್ಕು ವಲಯಗಳಾಗಿ ಬಿಎಸ್ಎನ್ಎಲ್ ತನ್ನ ಕಾರ್ಯವ್ಯಾಪ್ತಿಯನ್ನು ವಿಂಗಡಿಸಿದ್ದು, ಪ್ರತೀ ವಲಯಕ್ಕೆ ಓರ್ವ ಪಾಲುದಾರ ಸಂಸ್ಥೆಯನ್ನು ಆರಿಸಲಾಗುತ್ತದೆ. ಮೂರು ವರ್ಷದೊಳಗೆ ನಿಗದಿಪಡಿಸಲಾಗುವ ಕಿಯೋಸ್ಕ್ ನಿರ್ಮಿಸುವ ಉದ್ದೇಶವನ್ನಿಟ್ಟುಕೊಳ್ಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ