ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಂಟರ್ನೆಟ್ ವಿಳಾಸ ದೇಸೀಕರಣ ಭಾಗ್ಯ ಕನ್ನಡಕ್ಕಿಲ್ಲ..! (Internet | Web names | Indian languages | Kannada)
Feedback Print Bookmark and Share
 
ಇಂಟರ್ನೆಟ್ ವಿಳಾಸಗಳನ್ನು ಮಾತೃಭಾಷೆಯಲ್ಲೇ ನೀಡಲಾಗುತ್ತದೆ ಎಂಬ ಇತ್ತೀಚಿನ ಬೆಳವಣಿಗೆ ಹಿನ್ನಲೆಯಲ್ಲಿ ಕೆದಕಿ ನೋಡಿದಾಗ ಇಲ್ಲೂ ಕನ್ನಡಕ್ಕೆ ಅನ್ಯಾಯವಾಗಿರುವುದು ಬಹಿರಂಗವಾಗಿದೆ.

ಅಧಿಕೃತ ಮಾಹಿತಿಗಳ ಪ್ರಕಾರ ಹಿಂದಿ, ತಮಿಳು, ಉರ್ದು, ಬೆಂಗಾಲಿ, ಗುಜರಾತಿ, ಪಂಜಾಬಿ ಮತ್ತು ತೆಲುಗು ಭಾಷೆಗಳನ್ನು ಮಾತ್ರ ಇಂಟರ್ನೆಟ್ ವಿಳಾಸಗಳನ್ನಾಗಿ ಭಾರತದಲ್ಲಿ ನೀಡಲಾಗುತ್ತದೆ. ಇದರೊಂದಿಗೆ ಕನ್ನಡ ಮತ್ತು ಮಲಯಾಳಂಗಳು ಈ ಅವಕಾಶದಿಂದ ವಂಚಿತವಾದಂತಾಗಿದೆ.

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಸಂಸ್ಥೆ ಐಸಿಎಎನ್ಎನ್ ಈ ಸಂಬಂಧ ಒಪ್ಪಿಗೆ ನೀಡಿತ್ತು. ಸ್ಥಳೀಯ ಭಾಷೆಗಳಲ್ಲೇ ಇಂಟರ್ನೆಟ್ ವಿಳಾಸಗಳನ್ನು ನೀಡುವ ಕುರಿತು ಸಿಯೋಲ್‌ನಲ್ಲಿ ಚರ್ಚಿಸಿದ ನಂತರ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು. ಅದರಂತೆ ಏಳು ಭಾರತೀಯ ಭಾಷೆಗಳಿಗೂ ಇಲ್ಲಿ ಅವಕಾಶ ನೀಡಲಾಗಿತ್ತು.

ಇದುವರೆಗೆ ಲ್ಯಾಟಿನ್ ಅಕ್ಷರಗಳಾದ 'ಎ'ಯಿಂದ 'ಝೆಡ್'ವರೆಗಿನ ಅಕ್ಷರಗಳನ್ನು ಮಾತ್ರ ಇಂಟರ್ನೆಟ್ ಡೊಮೈನ್ ವಿಳಾಸಗಳಾಗಿ ನೀಡಲಾಗುತ್ತಿತ್ತು. ಈ ಡೊಮೈನ್ ಹೆಸರುಗಳಿಗೆ ಡಾಟ್ ಕಾಮ್, ಡಾಟ್ ನೆಟ್, ಡಾಟ್ ಆರ್ಗ್, ಡಾಟ್ ಇನ್.. ಹೀಗೆ ವಿವಿಧ ಹೆಸರುಗಳ ಮೂಲಕ ಪ್ರತ್ಯೇಕಿಸಲಾಗುತ್ತಿತ್ತು.

ಆದರೆ ಇನ್ನು ಮುಂದೆ ಬಳಕೆದಾರರು ವೆಬ್ ವಿಳಾಸಗಳನ್ನು ಹಿಂದಿ, ತಮಿಳು, ಉರ್ದು, ಬೆಂಗಾಲಿ, ಗುಜರಾತಿ, ಪಂಜಾಬಿ ಮತ್ತು ತೆಲುಗುಗಳಲ್ಲೂ ಟೈಪಿಸಬಹುದಾಗಿದೆ.

ವರ್ಲ್ಡ್ ವೈಡ್ ವೆಬ್‌ ತೆಗೆದುಕೊಂಡಿರುವ ಕ್ರಾಂತಿಕಾರಿ ನಿಲುವು ಇದು. ಇದರಿಂದಾಗಿ ವಿವಿಧ ಭಾರತೀಯ ಮಾತೃಭಾಷೆಗಳು ಇಂಟರ್ನೆಟ್‌ನಲ್ಲಿ ಘನತೆಯನ್ನು ಪಡೆದುಕೊಳ್ಳಲಿವೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಹಿರಿಯ ನಿರ್ದೇಶಕ ಗೋವಿಂದ ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ