ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಂಟರ್ನೆಟ್ ಫೋನ್‌ ಬಳಕೆ ನಿಷೇಧಕ್ಕೆ ಮೇಲ್ಮನವಿ (Web-telephony | Internet service providers | Department of Telecom | Internet Phone)
Feedback Print Bookmark and Share
 
ಇಂಟರ್ನೆಟ್ ಫೋನ್‌ ಸೇವೆಗೆ ದೇಶದಲ್ಲಿ ಅವಕಾಶ ನಿರಾಕರಿಸಿರುವ ದೂರವಾಣಿ ಇಲಾಖೆಯ ವಿರುದ್ಧ ಇಂಟರ್ನೆಟ್ ಸೇವಾ ಪೂರೈಕೆದಾರರು ಏಕಸ್ವಾಮ್ಯ ವಿರೋಧಿ ಸಂಸ್ಥೆಯಾಗಿರುವ ಭಾರತೀಯ ಸ್ಪರ್ಧಾ ಆಯೋಗದ ಮೊರೆ ಹೋಗಿವೆ.

ದೂರವಾಣಿ ಇಲಾಖೆಯ ನಿರ್ಧಾರದ ವಿರುದ್ಧ ನಾವು ಸ್ಪರ್ಧಾ ಆಯೋಗದಲ್ಲಿ ಮನವಿ ಸಲ್ಲಿಸಿದ್ದೇವೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ವು ಐಎಸ್‌ಪಿ ಮೂಲಕ ಇಂಟರ್ನೆಟ್ ಟೆಲಿಫೋನ್‌ಗೆ ಅಂಗೀಕಾರ ನೀಡಿರುವ ಹೊರತಾಗಿಯೂ ದೂರವಾಣಿ ಇಲಾಖೆಯು ಹಾಗೆ ಮಾಡಲು ಅನುಮತಿ ನೀಡುತ್ತಿಲ್ಲ ಎಂದು ಭಾರತೀಯ ಇಂಟರ್ನೆಟ್ ಸೇವಾದಾರರ ಸಂಸ್ಥೆ (ಐಎಸ್‌ಪಿಎಐ) ಅಧ್ಯಕ್ಷ ರಾಜೇಶ್ ಚೇರಿಯಾ ತಿಳಿಸಿದ್ದಾರೆ.

ಇಂಟರ್ನೆಟ್ ಟೆಲಿಫೋನಿ ವ್ಯವಸ್ಥೆಯಲ್ಲಿ ಮಾಡುವ ದೂರವಾಣಿ ಕರೆಗಳು ತೀರಾ ಅಗ್ಗವಾಗಿರುತ್ತವೆ. ಅಲ್ಲದೆ ಕೆಲವು ಬಾರಿ ಉಚಿತವಾಗಿಯೂ ಮಾಡಬಹುದಾಗಿದೆ. ಇದು ಗ್ರಾಮಾಂತರ ಪ್ರದೇಶ ಸೇರಿದಂತೆ ದೇಶದಲ್ಲಿ ಹೆಚ್ಚಿನ ಉಪಯೋಗಕ್ಕೆ ಬರುವುದು ಖಚಿತ ಎಂದು ಚೇರಿಯಾ ಅಭಿಪ್ರಾಯಪಟ್ಟಿದ್ದಾರೆ.

ಅನಿಯಂತ್ರಿತ ಇಂಟರ್ನೆಟ್ ಟೆಲಿಫೋನ್ ಬಳಕೆಗೆ ಟ್ರಾಯ್ ಕಳೆದ ವರ್ಷ ಶಿಫಾರಸು ಮಾಡಿತ್ತು. ಆದರೆ ದೂರವಾಣಿ ಇಲಾಖೆಯು ವೆಬ್ ಟೆಲಿಫೋನಿ ವ್ಯವಸ್ಥೆಗೆ ಒಪ್ಪಿಗೆ ನೀಡುತ್ತಿಲ್ಲ.

ಪ್ರಸಕ್ತ ದೇಶದಲ್ಲಿ ಕಂಪ್ಯೂಟರ್‌ಗಳಿಂದ ವಿದೇಶಗಳ ಫೋನ್‌ಗಳಿಗೆ ಕರೆ ಮಾಡುವ ಸೌಲಭ್ಯವಿದೆ. ಆದರೆ ದೇಶದೊಳಗೆ ಕಂಪ್ಯೂಟರ್ ಮೂಲಕ ದೂರವಾಣಿ ಕರೆ ಮಾಡಲು ಅವಕಾಶ ನಿರಾಕರಿಸಲಾಗಿದೆ.

ದೇಶದಾದ್ಯಂತ ಲಕ್ಷಾಂತರ ಮಂದಿ ಧ್ವನಿ ಕರೆಗಳನ್ನು ಸ್ಕೈಪ್ ಮತ್ತು ಗೂಗಲ್ ಟಾಕ್ ಮುಂತಾದ ವೆಬ್‌ಸೈಟ್‌ಗಳ ಮುಖಾಂತರ ಮಾಡುತ್ತಿದ್ದಾರೆ. ತೀರಾ ಕಡಿಮೆ ದರದಲ್ಲಿ ವಿದೇಶಿ ಕರೆಗಳನ್ನು ಮಾಡುವ ಅವಕಾಶವಿರುವುದರಿಂದ ದೂರವಾಣಿಯಿಂದ ಜನ ದೂರವಾಗುತ್ತಿದ್ದಾರೆ.

ಇತ್ತೀಚೆಗಷ್ಟೇ ಇಂಟರ್ನೆಟ್ ಮೂಲಕ ಧ್ವನಿ ಕರೆ (ವಿಒಐಪಿ) ಮಾಡುವ ಸೌಲಭ್ಯವನ್ನು ಸ್ಥಗಿತಗೊಳಿಸುವಂತೆ ಭಾರತೀಯ ಗುಪ್ತಚರ ಇಲಾಖೆಯು ದೂರವಾಣಿ ಇಲಾಖೆಗೆ ಸೂಚಿಸಿತ್ತು. ದೇಶದ ಭದ್ರತಾ ವಿಚಾರವೇ ಇದಕ್ಕೆ ಕಾರಣ ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ